ಬಂಪರ್ ಕೊಡುಗೆ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಮೂರರಿಂದ ಐದು ಲಕ್ಷಕ್ಕೆ ಏರಿಕೆ!
Kisan Credit Card : ಇದೆ ಬರುವ ಫೆಬ್ರವರಿ 1, 2025ಕ್ಕೆ, ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ನಲ್ಲಿ ರೈತರಿಗೆ ನೀಡಲಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೂರು ಲಕ್ಷ ರೂಪಾಯಿಗಳಿಂದ ರೂ.5,00,000ಗಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.
ರೈತರಿಗೆ ನೀಡಲಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಬಹಳ ಪ್ರಯೋಜನಕಾರಿಯಾಗಿದ್ದು ಸುಲಭವಾಗಿ ಕೃಷಿ ಚಟುವಟಿಕೆಗಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬಿತ್ತನೆ ಮಾಡುವುದಕ್ಕೂ ಮೊದಲು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮೂಲಕ ಸಬ್ಸಿಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ 9% ಬಡ್ಡಿ ದರದಲ್ಲಿ ವಿತರಣೆಯಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ 3% ಬಡ್ಡಿ ರಿಯಾಯಿತಿ ನೀಡಲಾಗುತ್ತಿದ್ದು ಕೇವಲ 4% ಬಡ್ಡಿ ದರದಲ್ಲಿ ಸಾಲ (Loan) ಪಡೆಯಬಹುದಾಗಿದೆ.
ಸ್ಟೇಟ್ ಬ್ಯಾಂಕ್ ಹರ್ ಘರ್ ಲಖಪತಿ ಸ್ಕೀಮ್; ಭಾರೀ ಬಡ್ಡಿ ಸಿಗುವ ಬಂಪರ್ ಯೋಜನೆ
ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ರೈತರು, ಪಶುಪಾಲಕರು, ಮೀನುಗಾರರು ಹೀಗೆ ಮೊದಲಾದ ಸಣ್ಣಪುಟ್ಟ ಕೃಷಿ ಚಟುವಟಿಕೆಯನ್ನು ಮಾಡುತ್ತಿರುವವರು ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹತ್ತಿರದ ಕೃಷಿ ಇಲಾಖೆಯ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆಯಬಹುದು.
ಜೊತೆಗೆ ಬ್ಯಾಂಕ್ ನಲ್ಲಿಯೂ ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಸಿಗುತ್ತದೆ. ಇನ್ನು ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಹತ್ತಿರದ ಕೃಷಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಇನ್ನು ಸಾಕಷ್ಟು ಬೆನಿಫಿಟ್ ಇದ್ದು ಐದು ಲಕ್ಷ ಸಾಲದ ಮಿತಿಯನ್ನು ಹೆಚ್ಚಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.
ಪರ್ಸನಲ್ ಲೋನ್ ಮತ್ತು ಗೋಲ್ಡ್ ಲೋನ್! ಕಷ್ಟಕಾಲಕ್ಕೆ ಯಾವುದು ಬೆಸ್ಟ್ ಅಂತೀರಾ?
ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಮಾತ್ರ ಅಲ್ಲದೆ ಮಹಿಳೆಯರಿಗೂ ಕೂಡ ಪಿಂಚಣಿ, ವಿಧವಾ ವೇತನ ಮೊದಲಾದ ಹಣ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು.
ಒಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಜನರು ಕಾದು ಕುಳಿತಿರುವಂತೆ ಜನರಿಗೆ ಕೇಂದ್ರ ಬಜೆಟ್ ನೆರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.
Increase in Kisan Credit Card Limit for Farmers from 3 to 5 Lakhs