ಪರ್ಸನಲ್ ಲೋನ್ ಮತ್ತು ಗೋಲ್ಡ್ ಲೋನ್! ಕಷ್ಟಕಾಲಕ್ಕೆ ಯಾವುದು ಬೆಸ್ಟ್ ಅಂತೀರಾ?
ಹಣಕಾಸಿನ ಅಗತ್ಯ ಇದ್ದಾಗ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ (Personal Loan) ಪಡೆದುಕೊಳ್ಳಬಹುದು ಅಥವಾ ನಿಮ್ಮ ಬಳಿ ಚಿನ್ನ (Gold) ಇದ್ರೆ ಅದನ್ನ ಅಡವಿಟ್ಟು ಸಾಲ ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲಕ್ಕಿಂತ ಚಿನ್ನದ ಸಾಲ ಬಹಳ ಬೇಗ ಮಂಜೂರಾಗುತ್ತದೆ.
ವೈಯಕ್ತಿಕ ಸಾಲ ಸುರಕ್ಷಿತ ಸಾಲವಾಗಿದ್ದು, ಇದರಲ್ಲಿ ಯಾವುದೇ ಅಡಮಾನ ಕೇಳುವುದಿಲ್ಲ ಬದಲಾಗಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿರಬೇಕು. ಆದರೆ ಚಿನ್ನದ ಮೇಲಿನ ಸಾಲದಲ್ಲಿ ಹಾಗಲ್ಲ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಚಿನ್ನವನ್ನ ಅಡವಿದ್ದರೆ ಸುಲಭವಾಗಿ ಸಾಲ ಪಡೆಯಬಹುದು.
ತಂದೆ-ತಾಯಿ ಹೆಸರಲ್ಲಿ 5 ಲಕ್ಷ ಇಟ್ಟರೆ, 2 ಲಕ್ಷ ರೂಪಾಯಿ ಬಡ್ಡಿಯೇ ಸಿಗುತ್ತೆ
ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಗಮನಿಸಿ!
ವೈಯಕ್ತಿಕ ಸಾಲಕ್ಕಿಂತ ಚಿನ್ನದ ಮೇಲೆ ಸಾಲ (Gold Loan) ತೆಗೆದುಕೊಂಡಾಗ ಬಡ್ಡಿ ದರ ಕಡಿಮೆ ಇರುತ್ತದೆ. ಆದರೂ ನೀವು ಬ್ಯಾಂಕುಗಳಲ್ಲಿ ಬಡ್ಡಿ ದರವನ್ನು ಪರಿಶೀಲಿಸಬೇಕು, ಇತರ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿದರ ಸ್ವಲ್ಪ ಜಾಸ್ತಿ ಎನ್ನಬಹುದು.
ಇನ್ನು ಎರಡನೆಯದಾಗಿ ಅನಾರೋಗ್ಯದ ತುರ್ತುಪರಿಸ್ಥಿತಿಯಲ್ಲಿ, ಅಥವಾ ಮದುವೆಗೆ ಹಣ ಕಡಿಮೆ ಬಿದ್ದರೆ ಇಂತಹ ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದುಕೊಳ್ಳಬಹುದು. ಆದರೆ ಸಣ್ಣ ಪುಟ್ಟ ವಿಷಯಗಳಿಗೆ ಚಿನ್ನವನ್ನು ಅಡವಿಡುವುದು ಒಳ್ಳೆಯದಲ್ಲ. ಯಾಕೆಂದರೆ ನೀವು ಸರಿಯಾದ ಸಮಯಕ್ಕೆ ಬಡ್ಡಿ ಪಾವತಿ ಮಾಡದೆ ಇದ್ರೆ, ನಾನು ಕಳೆದುಕೊಳ್ಳಬೇಕಾಗುತ್ತದೆ.
ಜಸ್ಟ್ 1 ರೂಪಾಯಿ ಫೋನ್‌ಪೇ ಮಾಡಿ ಸಾಕು, ನಿಮಗೆ ಸಿಗುತ್ತೆ 144 ರೂಪಾಯಿ ಕ್ಯಾಶ್‌ಬ್ಯಾಕ್
ಬ್ಯಾಂಕುಗಳು (Banks) ಮೂರು ತಿಂಗಳಿನಿಂದ ಮೂರು ವರ್ಷಗಳ ಅವಧಿಗೆ ಚಿನ್ನದ ಮೇಲೆ ಸಾಲವನ್ನು ಕೊಡುತ್ತವೆ. ಒಂದು ವೇಳೆ ನೀವು ಸಾಲದ ಕಂತನ್ನು ಮರುಪಾವತಿ ಮಾಡದೇ ಇದ್ದಲ್ಲಿ ಬ್ಯಾಂಕ್ ನಿಮ್ಮ ಚಿನ್ನವನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತದೆ.
ಚಿನ್ನ ಎನ್ನುವುದು ಒಂದು ಆಸ್ತಿ ಕಷ್ಟಕಾಲದ ಸಮಯದಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ. ಚಿನ್ನವನ್ನು ಆಭರಣವಾಗಿ ಧರಿಸುವುದು ಮಾತ್ರವಲ್ಲದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೂಡ ಬಳಕೆ ಮಾಡಿಕೊಳ್ಳಬಹುದು. ಆದರೆ ಚಿನ್ನವನ್ನು ಯಾವ ಸಂದರ್ಭದಲ್ಲಿ ಅಡವಿಡಬೇಕು ಎಂಬುದನ್ನು ನೋಡಿಕೊಳ್ಳಿ ಸಣ್ಣಪುಟ್ಟ ಖರ್ಚುಗಳಿಗೆ ಚಿನ್ನವನ್ನು ಅಡವಿಟ್ಟು ತಪ್ಪು ಮಾಡಬೇಡಿ.
Personal Loan vs Gold Loan, Which is Best During Tough Times