ತಂದೆ-ತಾಯಿ ಹೆಸರಲ್ಲಿ 5 ಲಕ್ಷ ಇಟ್ಟರೆ, 2 ಲಕ್ಷ ರೂಪಾಯಿ ಬಡ್ಡಿಯೇ ಸಿಗುತ್ತೆ
ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳುವುದಕ್ಕೆ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಿ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.
ಅದಕ್ಕಾಗಿ ಈಗ ಸರ್ಕಾರ ಒಂದು ಅತಿ ಉತ್ತಮ ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ಹಿರಿಯ ನಾಗರಿಕರು ಹೂಡಿಕೆಯನ್ನು ಮಾಡಿ ಎರಡು ಲಕ್ಷ ರೂಪಾಯಿಗಳವರೆಗೂ ಬಡ್ಡಿಯನ್ನು ಪಡೆದುಕೊಳ್ಳಬಹುದು. ಈ ಯೋಜನೆ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ರೂಪಿಸಲ್ಪಟ್ಟಿದ್ದು, ಉತ್ತಮ ಬಡ್ಡಿ ದರದಲ್ಲಿ ಆದಾಯ ಪಡೆಯಬಹುದಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS);
ನಿಯಮಿತ ಆದಾಯದೊಂದಿಗೆ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಯಾವುದೇ ಮಾರುಕಟ್ಟೆ ಅಪಾಯವಿಲ್ಲ. ನಿಮಗೆ ನಿರ್ದಿಷ್ಟವಾದ ಆದಾಯ ಸಿಗುತ್ತದೆ. ಜೊತೆಗೆ ತೆರಿಗೆ ವಿನಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ (Savings Scheme) ಪ್ರಸ್ತುತ 8.2% ಬಡ್ಡಿ ನೀಡಲಾಗುತ್ತಿದ್ದು, ಇತರ ಯಾವುದೇ Fixed Deposit ಯೋಜನೆಗಳಿಗಿಂತಲೂ ಇದರ ಬಡ್ಡಿದರ ಉತ್ತಮವಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯತಿಯನ್ನು ಕೂಡ ಪಡೆದುಕೊಳ್ಳಬಹುದು.
ಜಸ್ಟ್ 1 ರೂಪಾಯಿ ಫೋನ್‌ಪೇ ಮಾಡಿ ಸಾಕು, ನಿಮಗೆ ಸಿಗುತ್ತೆ 144 ರೂಪಾಯಿ ಕ್ಯಾಶ್‌ಬ್ಯಾಕ್
ಎಷ್ಟು ಹೂಡಿಕೆ ಮಾಡಬೇಕು?
ಇಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿಗಳಿಂದ ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಇದು 5 ವರ್ಷಗಳ ಅವಧಿಯ ಯೋಜನೆಯಾಗಿರುತ್ತದೆ ನೀವು ಒಂದೇ ಪ್ರೀಮಿಯಂನಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ.
ಒಬ್ಬ ವ್ಯಕ್ತಿ, 5 ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 2 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಪಡೆಯಬಹುದು. 5 ಲಕ್ಷ ಹೂಡಿಕೆಗೆ ಬರುವ ಒಟ್ಟು ಆದಾಯ 7,05,000 ರೂಪಾಯಿಗಳು.ಅದರಲ್ಲಿ ರೂ.2,05,000 ಬಡ್ಡಿಯಾಗಿರುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ರೂ.10,250 ಬಡ್ಡಿ ನಿಮ್ಮ ಖಾತೆ ಸೇರುತ್ತದೆ.
ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆದರೆ ಏನಾಗುತ್ತೆ ಗೊತ್ತಾ? ಮಾರ್ಗಸೂಚಿ ಇಲ್ಲಿದೆ!
ಯಾರು ಹೂಡಿಕೆ ಮಾಡಬಹುದು?
60 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದು ಇನ್ನು ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿರುವ 55 ರಿಂದ 6 ವರ್ಷ ವಯಸ್ಸಿನವರು ಕೂಡ ಹೂಡಿಕೆ ಮಾಡಬಹುದಾಗಿದೆ.
ವಾರ್ಷಿಕವಾಗಿ ಆದಾಯ ರೂ. 50,000 ಮೀರಿದರೆ ಟಿಡಿಎಸ್ ಪಾವತಿಸಬೇಕು. ಆದರೆ ಫಾರ್ಮ್ ನಂಬರ್ 15G/15H ಸಲ್ಲಿಸಿದರೆ TDS ಪಾವತಿಸುವ ಅಗತ್ಯವಿಲ್ಲ. ಹಿರಿಯ ನಾಗರಿಕರಿಗಾಗಿ ಇರುವ ಒಂದು ಉತ್ತಮ ಯೋಜನೆಗಾಗಿದ್ದು, ವೃದ್ಧಾಪ್ಯದ ಸಮಯದಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಲು ಸಹಕಾರಿಯಾಗಿದೆ.
Deposit 5 Lakhs in Your Parents Name and Earn 2 Lakhs Interest