30 ಲಕ್ಷಗಳವರೆಗೆ ಲೋನ್ ಬೇಕು ಅಂದ್ರೆ ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ?
Loan : ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಇತ್ತೀಚಿಗೆ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ. ಈ ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ ಉತ್ತಮ ಬಡ್ಡಿ ನೀಡಲಾಗುತ್ತದೆ.
ಅದೇ ರೀತಿ ಎಸ್ ಬಿ ಐ ನಲ್ಲಿ ಸಾಲ (SBI Loan) ತೆಗೆದುಕೊಳ್ಳುವುದಕ್ಕೆ ಯಾವುದೇ ಹೆಚ್ಚುವರಿ ಅಡಮಾನವಿಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರ್ ಆಗುತ್ತದೆ. ಇದೀಗ ನೀವು 30 ಲಕ್ಷ ಸಾಲ ಮಾಡಬೇಕು ಎಂದಿದ್ದರೆ ನಿಮ್ಮ ಸಂಬಳ ಎಷ್ಟು ಇರಬೇಕು ಎನ್ನುವ ನಿಯಮವನ್ನು ತಿಳಿದುಕೊಳ್ಳೋಣ.
ಹೊಸ ಕಾರು ಖರೀದಿಗೆ ಕಾರ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್?
30 ಲಕ್ಷ ಸಾಲ ಬೇಕಾದರೆ ಸಂಬಳ ಎಷ್ಟಿರಬೇಕು?
ನಮಗೆ ಎಷ್ಟು ಅನಿವಾರ್ಯತೆಯ ಸಂದರ್ಭದಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಕೂಡ ಅನಿವಾರ್ಯವಾಗುತ್ತದೆ. ಅದರಲ್ಲೂ ಕೆಲವೊಮ್ಮೆ ವೈದ್ಯಕೀಯ ಕಾರಣಕ್ಕೆ, ಮದುವೆ ಮನೆ ಕಟ್ಟುವುದು, ಶಿಕ್ಷಣ ಹೀಗೆ ಬೇರೆ ಬೇರೆ ಕಾರಣಕ್ಕೆ ದೊಡ್ಡ ಮೊತ್ತದ ಹಣದ ಅಗತ್ಯ ಇರುತ್ತದೆ.
ಹೀಗೆ ಲಕ್ಷ ಹಣ ಬೇಕಾದಾಗ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು (Personal Loan) ತೆಗೆದುಕೊಳ್ಳಬಹುದು. ಹಾಗಂದ ಮಾತ್ರಕ್ಕೆ ಎಲ್ಲರೂ ಬ್ಯಾಂಕ್ ನಲ್ಲಿ ಲಕ್ಷಗಟ್ಟಲೆ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.
ಬ್ಯಾಂಕ್ ಸಾಲ ನೀಡುತ್ತದೆಯಾದರೂ ಅದಕ್ಕೆ ಅದರದ್ದೇ ಆದ ನಿಯಮಗಳು ಇವೆ. ಉದಾಹರಣೆಗೆ ನಿಮಗೆ 30 ಲಕ್ಷ ಸಾಲ ಬೇಕು ಎಂದಿದ್ದರೆ, ಎಸ್ ಬಿ ಐ ಬ್ಯಾಂಕ್ ನ ಪ್ರಕಾರ ನಿಮ್ಮ ಸಂಬಳವೂ ಅಷ್ಟೇ ಮುಖ್ಯ. ಆದರೆ ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಎಸ್ ಬಿ ಐ ನಲ್ಲಿ ನೀವು ಕಡಿಮೆ ಸಂಬಳ ಹೊಂದಿದ್ದರು ಸಾಲ ಪಡೆಯಬಹುದು.
ಪರ್ಸನಲ್ ಲೋನ್ ಕೊಡುವಾಗ ಬ್ಯಾಂಕ್ ನವರು ಈ ವಿಷಯ ನಿಮ್ಮತ್ರ ಮುಚ್ಚಿಡ್ತಾರೆ
25,000 ರೂ.ಸಂಬಳವಿದ್ದರೂ ಸಿಗುತ್ತೆ ಸಾಲ!
ಹೌದು, ನಿಮಗೆ ಪ್ರತಿ ತಿಂಗಳು 25000 ರೂಪಾಯಿ ಸಂಬಳ ತರು ಕೂಡ 30 ಲಕ್ಷ ರೂಪಾಯಿಗಳ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಇದಕ್ಕೆ ಎರಡು ವರ್ಷಗಳ ಕೆಲಸದ ಎಕ್ಸ್ಪೀರಿಯನ್ಸ್ ಮುಖ್ಯವಾಗಿರುತ್ತದೆ.
ಇನ್ನು ಉದ್ಯೋಗಸ್ತರಾಗಿದ್ದರೆ ವಾರ್ಷಿಕ 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಹೊಂದಿರಬೇಕು. ಜೊತೆಗೆ ಮೂರು ವರ್ಷ ಬ್ಯುಸಿನೆಸ್ ಮಾಡಿದ ಅನುಭವ ಇರಬೇಕು.
ನಿಮ್ಮ ಕ್ರೆಡಿಟ್ ಸ್ಕೋರ್, (Credit Score) ಹಿಂದಿನ ಸಾಲದ ಮರುಪಾವತಿ ಮಾಡಿರುವ ಬಗ್ಗೆ ದಾಖಲೆ, ಐ ಟಿ ಆರ್ ರಿಟರ್ನ್, ಉದ್ಯೋಗ ಮಾಡುತ್ತಿದ್ದರೆ ಬ್ಯಾಂಕ್ ಸ್ಟೇಟ್ಮೆಂಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೊದಲಾದ ದಾಖಲೆಗಳನ್ನು ನೀಡಿ ಸಾಲ ತೆಗೆದುಕೊಳ್ಳಬಹುದು.
ಎಸ್ ಬಿ ಐ ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ಬಡ್ಡಿದರ 8.50% ಇಂದ ಆರಂಭವಾಗುತ್ತದೆ. ನೀವು 30 ವರ್ಷಗಳ ಅವಧಿಗೆ 30 ಲಕ್ಷ ರೂಪಾಯಿಗಳನ್ನು ಗೃಹ ಸಾಲವಾಗಿ ತೆಗೆದುಕೊಂಡರೆ, ಇದೇ ಬಡ್ಡಿ ದರದಲ್ಲಿ ಪ್ರತಿ ತಿಂಗಳು 23,067 ರೂಪಾಯಿಗಳನ್ನು EMI ಪಾವತಿಸಬೇಕು. ಅಂದರೆ 53,04,266 ರೂಪಾಯಿಗಳ ಬಡ್ಡಿ ಪಾವತಿಸಬೇಕು. 30 ವರ್ಷಗಳಲ್ಲಿ ನೀವು ಒಟ್ಟು ಪಾವತಿಸಬೇಕಾದ ಮೊತ್ತ 83,04,266 ರೂಪಾಯಿಗಳು.
ಎಸ್ ಬಿ ಐ ನಲ್ಲಿ ಸುಲಭವಾಗಿ ಗೃಹ ಸಾಲವನ್ನು (Home Loan) ಮಂಜೂರು ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಹತ್ತಿರದ ಎಸ್ ಬಿ ಐ ಬ್ರಾಂಚ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿಯೂ ಅಪ್ಲೈ ಮಾಡಬಹುದು.
ನೀವು ನೀಡುವ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದು, ನೀವು ಡೀಫಾಲ್ಟರ್ ಆಗಿರದಿದ್ದರೆ ಸುಲಭವಾಗಿ ಗೃಹ ಸಾಲವನ್ನು ಪಡೆದುಕೊಳ್ಳಬಹುದು.
How Much Salary is Required for a 30 Lakh Loan