Business News

ಪರ್ಸನಲ್ ಲೋನ್ ಕೊಡುವಾಗ ಬ್ಯಾಂಕ್ ನವರು ಈ ವಿಷಯ ನಿಮ್ಮತ್ರ ಮುಚ್ಚಿಡ್ತಾರೆ

Personal Loan : ಅನಿವಾರ್ಯ ಪರಿಸ್ಥಿತಿ ಬಂದಾಗ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅದರಲ್ಲೂ ನೀವು ತಿಂಗಳ ಸಂಬಳ ಪಡೆದುಕೊಳ್ಳುವವರಾಗಿದ್ದರೆ, ನಿಮಗೆ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತದೆ.

ಇನ್ನು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗ ಬ್ಯಾಂಕ್ ನ ಎಲ್ಲಾ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ಭಾರಿ ನಷ್ಟ ಉಂಟಾಗಬಹುದು. ಯಾಕಂದ್ರೆ ಬ್ಯಾಂಕಿಗೆ ನಿಮ್ಮ ಸಾಲಕ್ಕೆ ಬಡ್ಡಿ (Loan Interest) ಮತ್ತು ಅಸಲು ಮರುಪಾವತಿ ಮಾಡುವುದರ ಜೊತೆಗೆ ಇನ್ನೊಂದಿಷ್ಟು ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ.

ಪರ್ಸನಲ್ ಲೋನ್ ಕೊಡುವಾಗ ಬ್ಯಾಂಕ್ ನವರು ಈ ವಿಷಯ ನಿಮ್ಮತ್ರ ಮುಚ್ಚಿಡ್ತಾರೆ

ಅದರಲ್ಲೂ ಕೆಲವು ಶುಲ್ಕಗಳ ಬಗ್ಗೆ ಬ್ಯಾಂಕು (Bank) ನಿಮಗೆ ಸರಿಯಾದ ಮಾಹಿತಿ ನೀಡದೆ ಇರಬಹುದು. ಹಾಗಾಗಿ ಹಿಡನ್ ಚಾರ್ಜಸ್ (Hidden Charges) ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್? ಎಲ್ಲಿ FD ಇಟ್ರೆ ಹೆಚ್ಚು ಆದಾಯ ಬರುತ್ತೆ ಗೊತ್ತಾ?

ಹಿಡನ್ ಚಾರ್ಜಸ್ ಬಗ್ಗೆ ಇರಲಿ ಎಚ್ಚರ!

ವಯಕ್ತಿಕ ಸಾಲವನ್ನು ತುರ್ತು ಸಾಲ ಎಂದು ಕೂಡ ಕರೆಯಬಹುದು ಯಾಕೆಂದರೆ ನಮಗೆ ಎಮರ್ಜೆನ್ಸಿ ಇರುವಾಗ ಬ್ಯಾಂಕ್ನಿಂದ ಪರ್ಸನಲ್ ಲೋನ್ ತೆಗೆದುಕೊಳ್ಳುತ್ತೇವೆ. ಹೀಗೆ ಸಾಲ ತೆಗೆದುಕೊಂಡಾಗ ಬ್ಯಾಂಕ್ ವಿಧಿಸುವ ಕೆಲವು ಶುಲ್ಕಗಳು ನಮಗೆ ಹೊರೆಯಾಗಬಹುದು.

ಪ್ರೋಸೆಸಿಂಗ್ ಫೀ; ವೈಯಕ್ತಿಕ ಸಾಲವನ್ನ (Personal Loan) ಬ್ಯಾಂಕ್ ನಲ್ಲಿ ತೆಗೆದುಕೊಂಡಾಗ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ತೆಗೆದುಕೊಂಡಾಗ ಸಂಸ್ಕರಣಾ ಶುಲ್ಕ ಅಥವಾ ಪ್ರೋಸಸಿಂಗ್ ಫೀ ವಿಧಿಸಲಾಗುತ್ತದೆ. ನಿಮ್ಮ ಸಾಲದ ಮೊತ್ತದ 1% ನಿಂದ 3% ವರೆಗೂ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ನಿಮ್ಮ ಒಟ್ಟು ಸಾಲದ ವೆಚ್ಚವನ್ನು ಹೆಚ್ಚಿಸಬಹುದು.

ಪೂರ್ವ ಪಾವತಿ ಶುಲ್ಕ; ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ಪ್ರತಿ ತಿಂಗಳು ಈ ಎಂ ಐ ಮೂಲಕ ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ನಿಮ್ಮ ಸಾಲವನ್ನು ನೀವು ಅವಧಿಗಿಂತ ಮುಂಚಿತವಾಗಿಯೇ ಪಾವತಿ ಮಾಡಲು ಬಯಸಿದರೆ ಕೆಲವು ಬ್ಯಾಂಕುಗಳು ಪೂರ್ವ ಪಾವತಿ ಶುಲ್ಕವನ್ನು ವಿಧಿಸುತ್ತವೆ. ಇದು ಉಳಿದಿರುವ ಸಾಲದ ಮೊತ್ತದ 2% ನಿಂದ 5% ವರೆಗೆ ಇರಬಹುದು.

ತಡವಾಗಿ ಹಣ ಪಾವತಿಸಿದರೆ ಶುಲ್ಕ; ನೀವು ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡಬೇಕು ಒಂದು ವೇಳೆ ತಡವಾಗಿ EMI ಪಾವತಿ ಮಾಡಿದರೆ ಬ್ಯಾಂಕ್ ನಿಮಗೆ ದಂಡವನ್ನು ವಿಧಿಸುತ್ತದೆ. ಯಾವ ರೀತಿ ದಂಡ ವಿಧಿಸಲಾಗುತ್ತದೆ? ಎಷ್ಟು ದಂಡ ವಿಧಿಸಲಾಗುತ್ತದೆ? ಎನ್ನುವುದರ ಬಗ್ಗೆ ಬ್ಯಾಂಕು ನಿಮಗೆ ಮೊದಲೇ ಮಾಹಿತಿ ನೀಡದೆ ಇರಬಹುದು. ಇಂತಹ ಸಂದರ್ಭದಲ್ಲಿ ನಿಮಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ.

5,000 ಬದಲು ಸಿಗಲಿದೆ 10,000 ರೂಪಾಯಿ; ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ!

ಸ್ಟೇಟ್ಮೆಂಟ್ ನ ನಕಲು ಪ್ರತಿ ಮೇಲೆ ಶುಲ್ಕ; ಇದನ್ನು ಅನಾವಶ್ಯಕ ಶುಲ್ಕ ಎಂದು ಹೇಳಬಹುದು. ಸಾಮಾನ್ಯವಾಗಿ ಬ್ಯಾಂಕ್ ನೂರರಿಂದ 500 ರೂಪಾಯಿಗಳನ್ನು ಇದಕ್ಕಾಗಿಯೇ ಚಾರ್ಜ್ ಮಾಡುತ್ತದೆ. ಈ ಶುಲ್ಕವನ್ನು ಸಂಪೂರ್ಣವಾಗಿ ಬ್ಯಾಂಕ್ (Bank) ನಿರ್ಧರಿಸುತ್ತದೆ. ಸಾಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇದು ಒಳಗೊಂಡಿರುತ್ತದೆ.

ಜಿಎಸ್‌ಟಿ; ಇನ್ನು ವೈಯಕ್ತಿಕ ಸಾಲವನ್ನು ತೆಗೆದುಕೊಂಡ ನಂತರ ಜಿಎಸ್‌ಟಿ ಮತ್ತು ಇತರ ತೆರಿಗೆಗಳನ್ನು ಕೂಡ ಪಾವತಿಸಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಸಾಲದ ಮೊತ್ತ ಇನ್ನೂ ಹೆಚ್ಚಾಗಬಹುದು.

ಇತ್ತೀಚಿಗೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಆನ್ಲೈನ್ ಸಾಲವನ್ನು ಕೂಡ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾಲ ತೆಗೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸಾಲವನ್ನು ತೆಗೆದುಕೊಳ್ಳಿ ಇಲ್ಲವಾದರೆ ನಿಮಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಹಾಗೂ ಸಾಲ ತೆಗೆದುಕೊಳ್ಳುವುದಕ್ಕಿಂತ ಮೊದಲು ಬ್ಯಾಂಕಿನ ಎಲ್ಲಾ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಿ.

When Giving a Personal Loan, Banks Keep This Information Hidden from You

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories