ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್? ಎಲ್ಲಿ FD ಇಟ್ರೆ ಹೆಚ್ಚು ಆದಾಯ ಬರುತ್ತೆ ಗೊತ್ತಾ?
Fixed Deposit : ನಿಮ್ಮ ಬಳಿ ಸ್ವಲ್ಪ ಹಣವಿದ್ರು ಅದನ್ನು ಸುಮ್ಮನೆ ಖರ್ಚು ಮಾಡುವ ಬದಲು ಎಫ್ ಡಿ ಇಡಬಹುದು. ಈ ರೀತಿ ಫಿಕ್ಸೆಡ್ ಡೆಪಾಸಿಟ್ ಇಟ್ರೆ ಪಾಲಿಸಿ ಮುಕ್ತಾಯದ ಹೊತ್ತಿಗೆ ಉತ್ತಮ ಆದಾಯ ನಿಮ್ಮ ಕೈ ಸೇರುತ್ತದೆ.
ಈ ಹೂಡಿಕೆಯಲ್ಲಿ ಯಾವುದೇ ಮಾರುಕಟ್ಟೆಯ ಅಪಾಯ ಇರುವುದಿಲ್ಲ. ಆದರೆ ನೀವು ಸ್ಥಿರ ಠೇವಣಿಯನ್ನು ಇಡುವಾಗ ಎಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬುದನ್ನು ಮೊದಲು ಪರಿಶೀಲಿಸಬೇಕು.
ಉಳಿತಾಯ ಖಾತೆಗಿಂತ ಸ್ಥಿರ ಠೇವಣಿ ಬೆಸ್ಟ್!
ಹೌದು, ನೀವು ಸುಮ್ಮನೆ ಬ್ಯಾಂಕಿನಲ್ಲಿ ಒಂದು ಖಾತೆಯನ್ನು (Bank Account) ತೆರೆದು ಅದರಲ್ಲಿ ಹಣ ಠೇವಣಿ ಮಾಡಿದರೆ ಅದಕ್ಕೆ ಬರುವ ಬಡ್ಡಿ ದರ ತುಂಬಾ ಕಡಿಮೆ. ಅದರ ಬದಲು Fixed Deposit ಇಟ್ಟರೆ ಉತ್ತಮ ಬಡ್ಡಿ ದರದ ಜೊತೆಗೆ ಉತ್ತಮ ಆದಾಯ ಗಳಿಸಬಹುದು. ಇನ್ನು ಎಫ್ ಡಿ ಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ನಲ್ಲಿ ಇಡಬಹುದು. ಹಾಗಾದ್ರೆ ಎಲ್ಲಿ ಎಫ್ ಡಿ ಇಟ್ಟರೆ ಉತ್ತಮ ಆದಾಯ ಸಿಗುತ್ತದೆ ಎಂಬುದನ್ನು ನೋಡೋಣ.
5,000 ಬದಲು ಸಿಗಲಿದೆ 10,000 ರೂಪಾಯಿ; ಅಟಲ್ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ!
SBI FD ಬಡ್ಡಿದರ!
ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್ ಬಿ ಐ ನ್ನ ಗ್ರಾಹಕರ ಎಫ್‌ಡಿ ಮೇಲೆ ಉತ್ತಮ ಬಡ್ಡಿ ದರವನ್ನು ನಿಗದಿಪಡಿಸಿದೆ. ಒಂದು ವರ್ಷದಿಂದ ಐದು ವರ್ಷದವರೆಗೆ ಠೇವಣಿ ಇಟ್ಟರೆ 6.5% ನಿಂದ ಶೇಕಡ 7ರವರೆಗೆ ಬಡ್ಡಿ ಪಡೆಯಬಹುದು.
ಗ್ರಾಹಕರು ಎರಡು ವರ್ಷಕ್ಕೆ 7% ಮೂರು ವರ್ಷದ ಠೇವಣಿಯ ಮೇಲೆ 6.75% ನಾಲ್ಕು ವರ್ಷದ ಠೇವಣಿಯ ಮೇಲೆ ಮತ್ತು ಐದು ವರ್ಷದ ಠೇವಣಿಯ ಮೇಲೆ 6.5% ಬಡ್ಡಿಯನ್ನು ಪಡೆಯುತ್ತಾರೆ.
ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿಯ ಮೇಲಿನ ಬಡ್ಡಿ ದರ!
ಪೋಸ್ಟ್ ಆಫೀಸ್ ನಲ್ಲಿ ಒಂದು ಎರಡು ಮೂರು ಅಥವಾ ಐದು ವರ್ಷಗಳಿಗೆ FD ಇಡಬಹುದು. ಅಂಚೆ ಕಚೇರಿಯ ಎಫ್ ಡಿ ಮೇಲೆ 6.7% ನಿಂದ 7.1% ವರೆಗೆ ಬಡ್ಡಿ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಒಂದು ವರ್ಷದವರೆಗೆ ಠೇವಣಿ ಇಟ್ಟರೆ 6.9% ಬಡ್ಡಿ ಕೊಡಲಾಗುತ್ತದೆ.
ಅಂಚೆ ಕಚೇರಿಯ ಬಡ್ಡಿದರ ಎಸ್ ಬಿ ಐ ಗಿಂತಲೂ ಸ್ವಲ್ಪ ಜಾಸ್ತಿ ಎಂದು ಹೇಳಬಹುದು. ಅದರಲ್ಲೂ ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಇನ್ನು ಇದು ಸುರಕ್ಷಿತ ಹೂಡಿಕೆಯಾಗಿದ್ದು ಯಾವುದೇ ಮಾರುಕಟ್ಟೆ ಅಪಾಯವನ್ನು ಎದುರಿಸುವ ಅಗತ್ಯವಿಲ್ಲ. ಇಲ್ಲದೆ ಯೋಜನೆಯ ಮುಕ್ತಾಯದ ಹೊತ್ತಿಗೆ ಆದಾಯ ನಿಮ್ಮ ಕೈ ಸೇರುತ್ತದೆ.
Post Office or Bank, Where Will You Earn More from an Fixed Deposit