ಹೊಸ ಕಾರು ಖರೀದಿಗೆ ಕಾರ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್?
Car Loan : ನಮ್ಮ ಸ್ವಂತ ಬಳಕೆಗಾಗಿ ಒಂದು ಕಾರ್ ತಗೊಳ್ಳಬೇಕು ಅಂದುಕೊಂಡಿದ್ರೆ, ಕಾರಿನ ಲೋನ್ ತೆಗೆದುಕೊಳ್ಳುವುದು ಸಹಜ. ಹೌದು, ಕಾರು ಲಕ್ಷಗಟ್ಟಲೇ ವಾಲ್ಯೂ ಆಗಿರುವುದರಿಂದ ಬ್ಯಾಂಕ್ನಲ್ಲಿ ಲೋನ್ (Bank Loan) ಮಾಡಿ ಕಾರನ್ನು ಖರೀದಿ ಮಾಡುತ್ತೇವೆ.
ಆದ್ರೆ ಹೀಗೆ ಲೋನ್ ತೆಗೆದುಕೊಳ್ಳುವಾಗ ಯಾವ ಬ್ಯಾಂಕ್ನಲ್ಲಿ ಯಾವ ತರಹದ ಲೋನ್ ತೆಗೆದುಕೊಳ್ಳುವುದು ಒಳ್ಳೆಯದು ಎಂಬುದನ್ನೂ ನೋಡಬೇಕು. ಉದಾಹರಣೆಗೆ ನೀವು ಕಾರ್ ಖರೀದಿಸಲು ಕಾರ್ ಲೋನ್ ತೆಗೆದುಕೊಳ್ಳಬಹುದು ಅಥವಾ ವೈಯಕ್ತಿಕ ಲೋನ್ ನ್ನೂ ತೆಗೆದುಕೊಳ್ಳಬಹುದು. ಇವೆರಡರ ನಡುವಿನ ವ್ಯತ್ಯಾಸವನ್ನು ನಾವು ಮೊದಲು ತಿಳಿದುಕೊಳ್ಳೋಣ.

ಕಾರ್ ಲೋನ್: ಬ್ಯಾಂಕ್ನಲ್ಲಿ, ನೀವು ಖರೀದಿ ಮಾಡುವ ಯಾವುದೇ ಕಾರ್ ಗೆ ಲೋನ್ (Car Loan) ಸಿಗುತ್ತದೆ. ಕಾರ್ ಲೋನ್ ತೆಗೆದುಕೊಂಡಾಗ ನಿಮ್ಮ ಕಾರು ಬ್ಯಾಂಕ್ ನ ನಿಯಂತ್ರಣದಲ್ಲಿರುತ್ತದೆ. ಅಂದ್ರೆ ನೀವು ನಿಮ್ಮ ಕಾರನ್ನೇ ಅಡವಿಟ್ಟು ಲೋನ್ ತೆಗೆದುಕೊಂಡಿರುತ್ತೀರಿ. ಕಾರ್ ಲೋನ್ ಕ್ಲೀಯರ್ ಆದ ಮೇಲೆ ನಿಮ್ಮ ಕಾರ್ ನಿಮ್ಮದಾಗುತ್ತದೆ. ಒಂದು ವೇಳೆ ತಿಂಗಳ EMI ಸರಿಯಾಗಿ ಪಾವತಿ ಮಾಡದೇ ಡಿಫಾಲ್ಟರ್ ಆಗಿದ್ದರೆ, ಬ್ಯಾಂಕ್ ನಿಮ್ಮ ಕಾರನ್ನು ಮುಟ್ಟುಗೋಲು ಹಾಕ್ಕೊಳ್ಳಬಹುದು.
ಪರ್ಸನಲ್ ಲೋನ್ ಕೊಡುವಾಗ ಬ್ಯಾಂಕ್ ನವರು ಈ ವಿಷಯ ನಿಮ್ಮತ್ರ ಮುಚ್ಚಿಡ್ತಾರೆ
ಕಾರ್ ಲೋನ್ ಬಡ್ಡಿ ಮತ್ತು ಗ್ಯಾರಂಟಿ:
ಇನ್ನು ಬಡ್ಡಿ ವಿಷಯಕ್ಕೆ ಬಂದರೆ ವೈಯಕ್ತಿಕ ಸಾಲಕ್ಕಿಂತ ಕಾರ್ ಲೋನ್ ಬಡ್ಡಿದರ ಕಡಿಮೆ. 7%-10% ವರೆಗೆ ಬಡ್ಡಿ ವಿಧಿಸಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಆಧಾರದ ಮೇಲೆ ನಿಮಗೆ ಕಾರ್ ಲೋನ್ ಮಂಜೂರಾಗುತ್ತದೆ. ಸಿಬಿಲ್ ಸ್ಕೋರ್ ಜೊತೆಗೆ ನಿಮ್ಮ ಡೌನ್ ಪೇಮೆಂಟ್, ನಿಮ್ಮ ಸ್ಯಾಲರಿ ಎಲ್ಲವೂ ಮುಖ್ಯವಾಗಿರುತ್ತದೆ.
ವೈಯಕ್ತಿಕ ಸಾಲ: ನೀವು ಕಾರ್ ಖರೀದಿಗೆ ವೈಯಕ್ತಿಕ ಸಾಲವನ್ನು (Personaa Loan) ಬೇಕಾದರೂ ಪಡೆದುಕೊಳ್ಳಬಹುದು. ಇತರ ಖರ್ಚುಗಳನ್ನು ನಿಭಾಯಿಸುವುದಕ್ಕೂ ಈ ಲೋನ್ ಬೆಸ್ಟ್. ಇದು ಅಸುರಕ್ಷಿತ ಸಾಲವಾಗಿದೆ. ಇಲ್ಲಿ ನೀವು ಯಾವುದೇ ಅಡಮಾನ ಇಡಬೇಕಿಲ್ಲ.
ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್? ಎಲ್ಲಿ FD ಇಟ್ರೆ ಹೆಚ್ಚು ಆದಾಯ ಬರುತ್ತೆ ಗೊತ್ತಾ?
ಆದ್ರೆ ಕಾರ್ ಲೋನ್ ಗೆ ಹೋಲಿಸಿದರೆ ಬಡ್ಡಿದರ ಜಾಸ್ತಿ. ಕಾರ್ ಲೋನ್ ಮೂರರಿಂದ ಏಳು ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ವೈಯಕ್ತಿಕ ಸಾಲವನ್ನು ಒಂದರಿಂದ ಐದು ವರ್ಷಗಳಲ್ಲಿ ಮರುಪಾವತಿ ಮಾಡಬೇಕು. ಇಲ್ಲಿಯೂ ನಿಮ್ಮ ಉದ್ಯೋಗ, ಸಿಬಿಲ್ ಸ್ಕೋರ್ ಮುಖ್ಯವಾಗಿರುತ್ತದೆ.
ನಿಮಗೆ ಕಡಿಮೆ ಬಡ್ಡಿದರದಲ್ಲಿ ಲೋನ್ ಬೇಕು ಅಂದ್ರೆ ಕಾರ್ ಲೋನ್ ಬೆಸ್ಟ್, ಇತರ ಬೆನಿಫಿಟ್ಸ್ ಗಾಗಿ ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಬಹುದು.
Which is Best for Buying a New Car, Car Loan or Personal Loan