ಆಸ್ತಿ, ಜಮೀನು ದಾಖಲೆಗಳಿಗೂ ಆಧಾರ್ ಲಿಂಕ್ ಕಡ್ಡಾಯ; ಇದ್ರಿಂದ ಏನು ಲಾಭ ಗೊತ್ತಾ?

Story Highlights

ತೆರಿಗೆಯನ್ನು ಉಳಿಸುವ ಸಲುವಾಗಿ ಬೇನಾಮಿ ಹೆಸರಿನಲ್ಲಿ ಆಸ್ತಿ (non documented properties) ಗಳನ್ನು ಮಾಡುತ್ತಾರೆ

ಈಗ ವಿದ್ಯಾಭ್ಯಾಸ (Education) ಮಾಡಿ ಮುಗಿಸಿದವರು ಖಾಸಗಿ ಕಂಪನಿಗಳು ಇಲ್ಲವೇ ಸ್ವ-ಉದ್ಯೋಗ (Own business) ಮಾಡುವ ಮೂಲಕ ದುಡಿಯುತ್ತಾರೆ. ಹೀಗೆ ದುಡಿದ ಉಳಿತಾಯ ಮಾಡಿದ ಹಣವನ್ನು ಹೆಚ್ಚಾಗಿ ಜಮೀನಿನ ಮೇಲೆ ಹೂಡಿಕೆ ಮಾಡುತ್ತಾರೆ.

ಕೆಲವೊಬ್ಬರ ಅದೃಷ್ಟ ಎನ್ನುವಂತೆ ಅವರಿಗೆ ಅವರು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಯಶಸ್ಸು ಸಿಕ್ಕಿ ಹಣ ತುಂಬಾ ಪ್ರಮಾಣದಲ್ಲಿ ಬಂದಾಗ ತೆರಿಗೆಯನ್ನು ಉಳಿಸುವ ಸಲುವಾಗಿ ಬೇನಾಮಿ ಹೆಸರಿನಲ್ಲಿ ಆಸ್ತಿ (non documented properties) ಗಳನ್ನು ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತದೆ. ಇವೆಲ್ಲವಕ್ಕೆ ಕಡಿವಾಣ ಹಾಕಬೇಕಾಗಿದೆ.

ದೆಹಲಿ ಕೋರ್ಟ್ (Delhi court) ಅರ್ಜಿದಾರರೊಬ್ಬರು ಎಲ್ಲ ರೀತಿಯ ಚರ ಹಾಗೂ ಸ್ಥಿರ ಆಸ್ತಿಗೆ ಆಧಾರ್ ಲಿಂಕ್ (Aadhaar link for properties) ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು

ಈ ಅರ್ಜಿಯನ್ನು ಪರಿಶೀಲಿಸಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶರಾದ ರಾಜೀವ ಶಕ್ದಾರ್ ಹಾಗೂ ಗಿರೀಶ್ ಕತ್ಪಾಲಿಯಾ ಅವರನ್ನು ಒಳಗೊಂಡ ಪೀಠವು ಈ ವಿಚಾರದಲ್ಲಿ ನ್ಯಾಯಾಲಯವು ಯಾವುದೇ ರೀತಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಇದು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ನಿರ್ಣಯವಾಗಿದೆ ಎಂದು ತಿಳಿಸಿದೆ.

ಚರ ಹಾಗೂ ಸ್ಥಿರ ಆಸ್ತಿಗೆ ಆಧಾರ್ ಲಿಂಕ್ ಮಾಡುವ ವಿಚಾರವಾಗಿ ನ್ಯಾಯಾಲಯವು ಭಾಗಿಯಾಗಲು ಸಾಧ್ಯವಿಲ್ಲ. ಇಂತಹ ವಿಚಾರಗಳಿಗೆ ಸರ್ಕಾರಗಳು (government) ಸ್ಪಂದಿಸಬೇಕು. ಇನ್ನು ಮೂರು ತಿಂಗಳೊಳಗೆ ರಾಜ್ಯ ಸರ್ಕಾರವು ಸ್ಪಂದಿಸಿ ಒಂದು ಒಳ್ಳೆಯ ತೀರ್ಮಾನಕ್ಕೆ ಬರಲಿದೆ ಎಂದು ನ್ಯಾಯಾಧೀಶರಾದ ರಾಜೀವ ಶಕ್ದಾರ್ ತಿಳಿಸಿದ್ದಾರೆ.

ಈ ಮೂಲಕ ದೆಹಲಿ ಸರ್ಕಾರಕ್ಕೆ ಚರ ಹಾಗೂ ಸ್ಥಿರ ಆಸ್ತಿಗೆ ಆಧಾರ್ ಲಿಂಕ್ ಮಾಡುವ ವಿಚಾರವಾಗಿ ಮೂರು ತಿಂಗಳೊಳಗೆ ಒಂದು ಸರಿಯಾದ ನಿರ್ಣಯ ಕೈಗೊಳ್ಳಲು ನೇರವಾಗಿ ಸೂಚನೆ ನೀಡಿದ್ದಾರೆ. ಈ ಆಸ್ತಿಗೆ ಆಧಾರ್ ಕಾರ್ಡ್ ಲಿಂಕ್ ಪ್ರಕರಣದ ಕುರಿತು ಅಶ್ವಿನಿ ಕುಮಾರ್ ಉಪಾಧ್ಯ ಅವರು ವಾದ ಮಂಡಿಸಿದ್ದರು.

ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ! ನಿಯಮದಲ್ಲಿ ಬದಲಾವಣೆ

Property Documentsಬೇನಾಮಿ ಆಸ್ತಿಗಳ ಮುಟ್ಟುಗೋಲು: (Forfeiture of benami properties)

ಸಾಮಾನ್ಯವಾಗಿ ರಾಜಕಾರಣಿಗಳು (politicians), ದೊಡ್ಡ ದೊಡ್ಡ ಉದ್ದಿಮೆದಾರರು (businessman) ತಮ್ಮ ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನು ಹೊಂದಿರುತ್ತಾರೆ. ಇದು ದೇಶದಲ್ಲಿ ಭ್ರಷ್ಟಾಚಾರ (Corruption) ಹಾಗೂ ಕಪ್ಪು ಹಣ ಹೆಚ್ಚಲು ಕಾರಣವಾಗಿದೆ. ಇದು ನೇರವಾಗಿ ಚುನಾವಣೆ (election) ಯ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಸರ್ಕಾರವು ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಭ್ರಷ್ಟಾಚಾರ ತಡೆಗೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ತಿಳಿಸಿದ್ದಾರೆ.

ಈ ಬ್ಯಾಂಕ್ ಅಕೌಂಟ್ ಇರೋರಿಗೆ ರಾತ್ರೋ-ರಾತ್ರಿ ಸಿಹಿ ಸುದ್ದಿ! ಸಿಗುತ್ತೆ ಹೆಚ್ಚಿನ ಬಡ್ಡಿ

ಒಂದೊಮ್ಮೆ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಆದಲ್ಲಿ ದೇಶದ ಅಭಿವೃದ್ಧಿ ಪ್ರಮಾಣವು ದ್ವಿಗುಣಗೊಳ್ಳಲಿದೆ. ದೇಶದ ತುಂಬೆಲ್ಲ ಕಪ್ಪು ಹಣ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆಲ್ಲ ಫುಲ್ ಸ್ಟಾಪ್ ಇಡಲು ಆಸ್ತಿಗೆಗಳಿಗೆ ಆಧಾರ್ ಲಿಂಕ್ ಮಾಡುವುದು ಒಂದೇ ದಾರಿ.

ಹಾಗಾಗಿ ನ್ಯಾಯಾಲಯವು ಸಹ ಹಣಕಾಸು, ಕಾನೂನು, ವಸತಿ ಮತ್ತು ನಗರಗಳ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಿಗೆ ಸೂಚನೆ ನೀಡಿತ್ತು. ಒಂದು ವೇಳೆ ಚರ ಹಾಗೂ ಸ್ಥಿರ ಆಸ್ತಿಗಳಿಗೂ ಆಧಾರ್ ಲಿಂಕ ಮಾಡಬೇಕು ಎಂದು ಆದೇಶ ಹೊರಡಿಸಿದಲ್ಲಿ ದೇಶದಲ್ಲಿ ತುಂಬಿರುವ ಭ್ರಷ್ಟಾಚಾರಕ್ಕೆ ಒಂದು ದೊಡ್ಡ ಹೊಡೆತ ಬೀಳುವುದಂತೂ ನಿಶ್ಚಿತ. ಹಾಗಾಗಿ ಕೇಂದ್ರ ಸರ್ಕಾರವೇ ಇದರ ಜವಾಬ್ದಾರಿ ವಹಿಸಿಕೊಂಡು ಆದಷ್ಟು ಶೀಘ್ರ ಈ ಕುರಿತು ಒಂದು ನಿರ್ಣಯ ಕೈಗೊಳ್ಳಬೇಕಾಗಿದೆ.

ನಿಮ್ಮ ಬ್ಯಾಂಕ್ ಲೋನ್ ಅರ್ಜಿ ರಿಜೆಕ್ಟ್ ಆಯ್ತಾ? ಅದಕ್ಕೆ ಪಕ್ಕಾ ಕಾರಣ ಇಲ್ಲಿದೆ ತಿಳಿಯಿರಿ

Aadhaar link is mandatory for property, land records

Related Stories