ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು

ನೀವು ಆಧಾರ್ ವೆರಿಫಿಕೇಶನ್ ಮಾಡಿಸಬೇಕಾ? ಹಾಗಾದ್ರೆ ಇನ್ಮುಂದೆ 6 ತಿಂಗಳು ಕಾಯಲೇ ಬೇಕು; ಆಧಾರ್ ವೆರಿಫಿಕೇಶನ್ ವಿಚಾರದಲ್ಲಿ ಕೇಂದ್ರದಿಂದ ಐತಿಹಾಸಿಕ ಬದಲಾವಣೆ

ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ (Aadhaar Card) ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಈಗಾಗಲೇ ಜಾರಿಗೊಳಿಸಿದೆ. ಹತ್ತು ವರ್ಷಕ್ಕಿಂತ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಅಪ್ಡೇಟ್ (update) ಮಾಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು.

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೇಂದ್ರ ಸರ್ಕಾರ (Central government) ನಿಯಮಗಳನ್ನು ಪಾಲಿಸುತ್ತಿದ್ದಾರೆ. ಈ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ವಯಸ್ಸಿನ ಮಿತಿ ಇಲ್ಲ. ಪ್ರಸ್ತುತ 18 ವರ್ಷಕ್ಕೂ ಮೇಲ್ಪಟ್ಟವರು ಮಾತ್ರ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ.

ಸದ್ಯ ಯುಐಎಡಿಐ (UIDAI) ಹೊಸ ನಿಯಮ ತರಲು ಮುಂದಾಗಿದೆ. ಅದಕ್ಕಾಗಿ ಇನ್ಮುಂದೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವವರು ಈ ನಿಯಮಗಳನ್ನು ತಿಳಿದುಕೊಳ್ಳಲೇಬೇಕು. ಹಾಗಾದ್ರೆ ಯಾವ ಹೊಸ ನಿಯಮ (new rules) ಜಾರಿಯಾಗಿದೆ ಎಂದು ಈಗ ತಿಳಿದುಕೊಳ್ಳೋಣ.

ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು - Kannada News

ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯೋಕೆ ಡ್ರೈವಿಂಗ್ ಟೆಸ್ಟ್ ಅಗತ್ಯವಿಲ್ಲ! ನಿಯಮದಲ್ಲಿ ಬದಲಾವಣೆ

ಐತಿಹಾಸಿಕ ಬದಲಾವಣೆ ಮಾಡಿದ ಯುಐಎಡಿಐ: (big changes in Aadhaar Card rules)

ಭಾರತ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್ ಕಾರ್ಡ್ ವಿಚಾರದಲ್ಲಿ ಒಂದು ಐತಿಹಾಸಿಕ ಬದಲಾವಣೆ ಮಾಡಿದೆ. 18 ವರ್ಷಕ್ಕೂ ಮೇಲ್ಪಟ್ಟವರು ಆಧಾರ್ ಕಾರ್ಡ್ ಮಾಡಿಸುವುದಾದರೆ ಇನ್ಮುಂದೆ ಬೌತಿಕ ಪರೀಕ್ಷೆ (examination) ಕಡ್ಡಾಯವಾಗಿರುತ್ತದೆ. ಮೊದಲ ಬಾರಿ ಆಧಾರ್ ಕಾರ್ಡ್ ಮಾಡಿಸುತ್ತಿರುವವರು ಪಾಸ್ಪೋರ್ಟ್ ಮಾದರಿ ಪರೀಕ್ಷೆ ಎದುರಿಸಬೇಕಾಗಿದೆ. ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಸಿದ ನಂತರ ಡೇಟಾ ಗುಣಮಟ್ಟವನ್ನು ಪರಿಶೀಲನೆ ನಡೆಸಲಾಗುತ್ತದೆ. ಇದಾದ ಬಳಿಕ ಸೇವಾ ಪೋರ್ಟಲ್ ನಲ್ಲಿಯೂ ಪರೀಕ್ಷಿಸಲಾಗುತ್ತದೆ.

ಇನ್ಮುಂದೆ ಆರು ತಿಂಗಳು ಕಾಯೋದು ಅನಿವಾರ್ಯ: (you should wait to get Aadhar card at least 6 months)

Aadhaar Cardಹೊಸದಾಗಿ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದರೆ ನೀವು 180 ದಿನ ಕಾಯಬೇಕು. ಆಧಾರ್ ಕಾರ್ಡ್ ಎಲ್ಲ ಪರೀಶಿಲನೆ ಮುಗಿಸಿ ನಿಮ್ಮ ಕೈ ಸೇರಲು ಆರು ತಿಂಗಳು ಬೇಕಾಗುತ್ತದೆ. ನೀವು ಆಧಾರ್ ಕಾರ್ಡ್ ಬೇಕು ಎಂದು ಅರ್ಜಿ ಸಲ್ಲಿಸಿದ ಬಳಿಕ, ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕಾರಿಗಳು ಡೇಟಾ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತಾರೆ.

ಬಯೋಮೆಟ್ರಿಕ್ ನವೀಕರಿಸದಿದ್ದರೆ ಗ್ಯಾಸ್ ಸಬ್ಸಿಡಿ ಕ್ಯಾನ್ಸಲ್ ಆಗುತ್ತಾ? ಇಲ್ಲಿದೆ ಅಸಲಿ ವಿಷಯ

ನಂತರ ನಿಮ್ಮ ಅರ್ಜಿಯನ್ನು ಸರ್ವಿಸ್ ಪ್ಲಸ್ ಪೋರ್ಟ್ಲ್ಗೆ (service plus port) ಕಳುಹಿಸಲಾಗುತ್ತದೆ. ಅಲ್ಲಿ ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತದೆ. ಅರ್ಜಿದಾರರು ಎಲ್ಲ ಮಾಹಿತಿ ನೀಡಿದ್ದಾರೋ ಇಲ್ಲವೋ, ಏನಾದರೂ ತಪ್ಪಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ನೀವು ಸಲ್ಲಿಸಿದ ಅರ್ಜಿಯಲ್ಲಿ ಸಣ್ಣ ತಪ್ಪಿದ್ದರೂ ಅರ್ಜಿ ತಿರಸ್ಕರಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಸುಮಾರು 180 ದಿನ ತಗಲುತ್ತದೆ. ನಿಮ್ಮ ಅರ್ಜಿ ಸರಿಯಿದ್ದಲ್ಲಿ ಆಧಾರ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

ದಾಖಲೆ ತಪ್ಪಿದ್ದರೆ ಅರ್ಜಿ ತಿರಸ್ಕಾರ: (application will reject when documents are wrong)

ನೀವು ಸಲ್ಲಿಸಿದ ಆಧಾರ್ ಅರ್ಜಿಗಳ ಬೌತಿಕ ಪರಿಶೀಲನೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕಾಗಿರುವುದರಿಂದ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದು ನೋಡಲ್ ಅಧಿಕಾರಿಗಳನ್ನು ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರವು ನೇಮಿಸುತ್ತದೆ. ಇವರು ನಿಮ್ಮ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಾರೆ. ನೀವು ಅರ್ಜಿಯೊಂದಿಗೆ ಕೊಟ್ಟ ದಾಖಲೆಗಳು ಹಾಗೂ ಅರ್ಜಿಯಲ್ಲಿ ನೀಡಿದ ಮಾಹಿತಿ ತಪ್ಪಾಗಿದ್ದರೆ ಅರ್ಜಿಯನ್ನು ತಿರಸ್ಕರಿಸುತ್ತಾರೆ.

ಈ ಬ್ಯಾಂಕ್ ಅಕೌಂಟ್ ಇರೋರಿಗೆ ರಾತ್ರೋ-ರಾತ್ರಿ ಸಿಹಿ ಸುದ್ದಿ! ಸಿಗುತ್ತೆ ಹೆಚ್ಚಿನ ಬಡ್ಡಿ

Change in Aadhaar Card Rules, Now have to wait for 6 months

Follow us On

FaceBook Google News

Change in Aadhaar Card Rules, Now have to wait for 6 months