ನೀವು ಬ್ಯಾಂಕ್ (Bank Account) ನಲ್ಲಿ ಖಾತೆ ಹೊಂದಿದ್ದರೆ ಅದರ ಮೂಲಕ ಹಣಕಾಸು ವ್ಯವಹಾರ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಆರ್ ಬಿ ಐ (RBI) ಕೆಲವು ನಿಯಮಗಳನ್ನು ಬ್ಯಾಂಕ್ ವ್ಯವಹಾರ ಮಾಡುವವರು ಪಾಲಿಸಲೇಬೇಕು. ಇಲ್ಲವಾದರೆ ಬ್ಯಾಂಕ್ ನಲ್ಲಿ ಇರುವ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳಬಹುದು ಅಥವಾ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಅದು ನಿಮ್ಮ ಕೈ ಸೇರದೇ ಇರಬಹುದು.
ಹಾಗಾದ್ರೆ ಆರ್‌ಬಿಐ ನಿಯಮ ಏನು ಅದಕ್ಕಾಗಿ ಜನರು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಹಿಂದೆ ಆರ್ ಬಿ ಐ ನಿಮ್ಮ ಬ್ಯಾಂಕ್ ಖಾತೆಯ (Bank Account) ಜೊತೆಗೆ ಆಧಾರ್ ಕಾರ್ಡ್ (Aadhaar Card) ಹಾಗೂ ಪ್ಯಾನ್ ಕಾರ್ಡ್ (Pan Card) ಲಿಂಕ್ ಆಗಿರಬೇಕು ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿತು
ಹಾಗೆ ಇದಕ್ಕೆ ಕೆಲವು ಸಮಯಗಳ ನಡುವು ಕೂಡ ನೀಡಿತ್ತು. ಆದಾಗ್ಯೂ ಸಾಕಷ್ಟು ಜನ ಈ ಕೆಲಸ ಮಾಡಿಕೊಂಡಿಲ್ಲ, ಹಾಗಾಗಿ ಅಂಥವರ ಖಾತೆಯನ್ನು ಶಾಶ್ವತವಾಗಿ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಳಿಸಲಾಗಿದೆ.
ಫಾರ್ಮ್ 60, ಗ್ರಾಹಕರ ಪ್ಯಾನ್ ಕಾರ್ಡ್ (PAN Card) ಹಾಗೂ ಅದಕ್ಕೆ ಸಮಾನವಾಗಿರುವ ದಾಖಲೆಗಳನ್ನು ನೀವು ಬ್ಯಾಂಕ್ ನಲ್ಲಿ ಕೊಡದೆ ಇದ್ದರೆ ನಿಮ್ಮ ಖಾತೆ ಶಾಶ್ವತವಾಗಿ ಮುಚ್ಚಿರುತ್ತದೆ. ಅದರ ಜೊತೆಗೆ ಬ್ಯಾಂಕ್ ಖಾತೆಯ ಕೆವೈಸಿ (eKYC) ಮಾಡಿಸಿಕೊಳ್ಳುವುದು ಕೂಡ ಕಡ್ಡಾಯವಾಗಿದೆ.
ಮರು ಕೆವೈಸಿ ಕಡ್ಡಾಯ
ಯಾವುದೇ ಗ್ರಾಹಕ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಅದಕ್ಕೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯ ಜೊತೆಗೆ KYC ಆಗಿರದೆ ಇದ್ದಲ್ಲಿ ಸರ್ಕಾರದ ಯಾವ ಯೋಜನೆಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ.
ಆದರೆ ಈಗ ಕೆಲವು ಬ್ಯಾಂಕ್ಗಳು ಮರು ಕೆವೈಸಿ ಮಾಡಿಕೊಳ್ಳಲು ಅವಕಾಶ ನೀಡಿದ್ದು ಗ್ರಾಹಕರು ನಿಷ್ಕ್ರಿಯಗೊಂಡಿರುವ ಅಕೌಂಟ್ ಅನ್ನು ಮರು ಸ್ಥಾಪಿಸಲು ಅವಕಾಶವಿದೆ.
ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನಲ್ಲಿ ಮರು ಕೆ ವೈ ಸಿ ಮಾಡಿಸಿಕೊಳ್ಳಲು ಗ್ರಾಹಕರಿಗೆ ಅನುಮತಿ ನೀಡಿದೆ. ಈ ವಿಚಾರವನ್ನು ಹಂಚಿಕೊಂಡಿರುವ ಬ್ಯಾಂಕ್ ಆಫ್ ಬರೋಡ ಗ್ರಾಹಕರು ಮರು ಕೆವೈಸಿ ಮಾಡಿಸಿಕೊಳ್ಳುವುದರ ಮೂಲಕ ಅವರ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು ಎಂದು ತಿಳಿಸಿದೆ.
ಹೀಗೆ ಮರು ಕೆವೈಸಿ ಮಾಡಿಸಿಕೊಳ್ಳಲು ಗ್ರಾಹಕರು ಬ್ಯಾಂಕ್ ಆಫ್ ಬರೋಡ ಶಾಖೆಗೆ (Bank Branch) ತೆರಳಬೇಕು. ಅಲ್ಲಿ ಮರು ಕೆವೈಸಿ ಮಾಡಿಸಿಕೊಳ್ಳಲು ಅಗತ್ಯವಿರುವ ದಾಖಲೆಗಳನ್ನು ಹಾಗೂ ಎಲ್ಲಾ ದಾಖಲೆಗಳ ಫೋಟೋ ಕಾಪಿಯನ್ನು ಕೂಡ ಕೊಡಬೇಕು. ಅಲ್ಲದೆ ದಾಖಲೆಗಳ ಸಮೇತ ಗ್ರಾಹಕರು ವಿಡಿಯೋ ಕಾಲ್ (Video Call) ಮಾಡಿಯೂ ಕೂಡ ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಬ್ಯಾಂಕ್ ಆಫ್ ಬರೋಡ (BOB) ಅಧಿಕೃತ ಮಾಹಿತಿ ನೀಡಿರುವಂತೆ ಗ್ರಾಹಕರು ಮರು ಕೆವೈಸಿ ಮಾಡಿಸಿಕೊಳ್ಳಲು, ಅಥವಾ ಈಗ ಇರುವ ಕೆವೈಸಿ ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿದ್ದರೆ ಇ-ಮೇಲ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ತಮ್ಮ ಸಹಿಯೊಂದಿಗೆ ಅಫೀಡವಿಟ್ ಕಳುಹಿಸಬಹುದು.
• ಇನ್ನು ಕೋಟಕ್ ಮಹೀಂದ್ರ ಬ್ಯಾಂಕ್ (kotak mahindra bank) ಕೂಡ ಮರು ಕೇವೈಸಿ ಮಾಡಿಸಿಕೊಳ್ಳಲು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ನೀವು ಕೋಟಕ್ ಮಹೀಂದ್ರ ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ರೀತಿ ಮರು ಕೆವೈಸಿ ಮಾಡಿಸಿಕೊಳ್ಳಬಹುದು.
• ಮೊದಲನೇದಾಗಿ ಕೋಟಕ್ ಮಹಿಂದ್ರ ಬ್ಯಾಂಕ್ ನ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ (Download App) ಮಾಡಿಕೊಂಡು ಇನ್ಸ್ಟಾಲ್ ಮಾಡಿ.
• ನಂತರ ನಿಮ್ಮ ಮೊಬೈಲ್ ನಂಬರ್ (Mobile Number) ಹಾಕಿದ್ರೆ ಅದಕ್ಕೆ ಬಂದು ಒಟಿಪಿ ಬರುತ್ತದೆ. ಬಂದ ಓಟಿಪಿ ಅನ್ನು ಅಪ್ಲಿಕೇಶನ್ ನಲ್ಲಿ ನಮೂದಿಸಿದರೆ ಲಾಗ್ ಇನ್ ಆಗಬಹುದು.
• ನಂತರ ಮರು ಕೆವೈಸಿ ಮಾಡಿಸಿಕೊಳ್ಳಲು ಬೇಕಾಗಿರುವ ಮಾಹಿತಿಗಳನ್ನು ಭರ್ತಿ ಮಾಡುವುದರ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕುಳಿತಲ್ಲಿಯೇ ನೀವು ಈ ಕೆಲಸ ಮಾಡಬಹುದು. ಇಷ್ಟು ಮಾಡಿದರೆ ನಿಮ್ಮ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಖಾತೆ ತಕ್ಷಣವೇ ಸಕ್ರಿಯಗೊಳ್ಳುತ್ತದೆ.
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.