₹4,999ಕ್ಕೆ ಸಿಗುವ ಈ ಫೋನ್‌ಗೆ ಹೆಚ್ಚಿದ ಕ್ರೇಜ್! ನಿಮಿಷಗಳಲ್ಲೇ ಸೋಲ್ಡ್ ಔಟ್
₹4,999 ರೂಪಾಯಿಗಿಂತ ಕಡಿಮೆ ಬೆಲೆಯ AI+ Pulse ಹಾಗೂ 5G Nova ಫೋನ್‌ಗಳ ಸೆಕೆಂಡ್ ಸೇಲ್ ಕೂಡಾ ನಿಮಿಷಗಳಲ್ಲೇ ಸೋಲ್ಡ್ ಔಟ್ ಆಗಿದ್ದು, ಮುಂದಿನ ಸೇಲ್ ಈಗ 22ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ.

- ₹4,999 ಬೆಲೆಯ AI+ Pulse ಫೋನ್ ನಿಮಿಷಗಳಲ್ಲೇ ಮಾರಾಟ
- Nova 5G ಫೋನ್ ಕೂಡಾ ಸೆಕೆಂಡ್ ಸೇಲ್‌ನಲ್ಲಿ ಔಟ್ ಆಫ್ ಸ್ಟಾಕ್
- ಮುಂದಿನ ಫೋನ್ ಸೇಲ್ 22 ಜುಲೈ ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ
ಭಾರತದ (India) ಮೊಬೈಲ್ ಮಾರುಕಟ್ಟೆಯಲ್ಲಿ ಇದೀಗ AI+ ಎಂಬ ಹೊಸ Smartphone ಬ್ರಾಂಡ್ ಭಾರಿ ಸದ್ದು ಮಾಡುತ್ತಿದೆ. AI+ Pulse ಹಾಗೂ AI+ Nova 5G ಎಂಬ ಎರಡು ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಈ ಕಂಪನಿಗೆ ಭಾರೀ ಸ್ಪಂದನೆ ದೊರೆತಿದೆ.
₹4,999 ಬೆಲೆಯ AI+ Pulse, ಬಜೆಟ್ ಸೆಗ್ಮೆಂಟ್‌ನಲ್ಲಿ ಲಾಂಚ್ ಆಗಿದ್ದು, ಪ್ರೀಮಿಯಂ ಫೀಚರ್ಸ್ ನಿಂದ ಕೂಡಿದೆ. 50MP ಡ್ಯುಯಲ್ AI ಕ್ಯಾಮೆರಾ, 5000mAh ಬ್ಯಾಟರಿ, 1TB ವರೆಗೆ ಸ್ಟೋರೇಜ್ ಮತ್ತು ಕ್ಲೀನ್ ಇಂಟರ್ಫೇಸ್ ಈ ಫೋನಿನ ಪ್ರಮುಖ ಆಕರ್ಷಣೆಗಳು. ಬಳಕೆದಾರರ ಖಾಸಗಿ ಮಾಹಿತಿಗೆ ಪ್ರಾಮುಖ್ಯತೆ ನೀಡಿರುವ ಈ ಫೋನ್, ಯಾವುದೇ ಬ್ಲಾಟ್‌ವೇರ್ ಇಲ್ಲದೆ ಬರುತ್ತದೆ. 5 ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಜಿಯೋ ಬಂಪರ್ ಪ್ಲಾನ್! ಬರಿ ₹199 ರೀಚಾರ್ಜ್ ಮಾಡಿದ್ರೆ 1 ವರ್ಷ ವ್ಯಾಲಿಡಿಟಿ
Nova 5G ಕೂಡ ಮಿಂಚಿನಂತೆ ಮಾರಾಟವಾಗಿದ್ದು, ಸ್ಪೀಡ್, ಪರ್ಫಾರ್ಮೆನ್ಸ್, ಸೆಕ್ಯೂರಿಟಿಗೆ ಆದ್ಯತೆ ಇರುವ ಯೂಸರ್‌ಗಳಿಗಾಗಿ ಡಿಸೈನ್ ಮಾಡಲಾಗಿದೆ.
ಈ ಫೋನ್‌ನಲ್ಲಿ MediaTek Dimensity 6100+ ಪ್ರೊಸೆಸರ್, 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹಾಗೂ 14 5G ಬೆಂಡ್ಸ್ (NSA ಮತ್ತು SA) ಸಪೋರ್ಟ್ ಇದೆ. 5000mAh ಬ್ಯಾಟರಿ ಹಾಗೂ ಫಾಸ್ಟ್ ಚಾರ್ಜಿಂಗ್ ಸಹ ಇದಕ್ಕೆ ಪ್ಲಸ್ ಪಾಯಿಂಟ್. Nova ಕೂಡ 5 ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ.
AI+ Pulse ಹಾಗೂ Nova 5G ಎರಡೂ ಫೋನ್‌ಗಳು ಎರಡನೇ ಸೇಲ್‌ನಲ್ಲೂ ಕೆಲವೇ ಗಂಟೆಗಳಲ್ಲಿ ಔಟ್ ಆಫ್ ಸ್ಟಾಕ್ ಆಗಿದ್ದು, ಗ್ರಾಹಕರಲ್ಲಿ ಈ ಬ್ರಾಂಡ್ ಆಕರ್ಷಣೆ (credibility) ಹೆಚ್ಚಿದೆ ಎಂಬುದು ಸ್ಪಷ್ಟವಾಗಿದೆ. ನಿನ್ನೆಯ ದಿನ ನಡೆದ ಸೆಕೆಂಡ್ ಸೆಲ್‌ನಲ್ಲಿ ಸಾವಿರಾರು ಯೂಸರ್‌ಗಳು ಇವುಗಳನ್ನು ಖರೀದಿಸಲು ಮುಂದಾಗಿದ್ದರು.
ಇದನ್ನೂ ಓದಿ: ಸಾಲ ತೀರಿಸಿದ ಮೇಲೂ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಾಗಿಲ್ವಾ? ಇಲ್ಲಿದೆ ಪರಿಹಾರ
ಹೆಚ್ಚಿನ ಗ್ರಾಹಕರಿಗೆ ಲಭ್ಯವಾಗಲೆಂದು, ಕಂಪನಿಯು ಮುಂದಿನ ಸೇಲ್ ಅನ್ನು 22 ಜುಲೈ, ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ (Flipkart) ನಲ್ಲಿ ಆರಂಭಿಸಲಿದೆ. ಸ್ಟಾಕ್ ಲಿಮಿಟೆಡ್ ಆಗಿರಲಿದೆ ಎಂಬ ಕಾರಣದಿಂದ, ಖರೀದಿಸಲು ಇಚ್ಛಿಸುವವರು ಈಗಲೇ ಡೇಟ್ ಸೆಟ್ ಮಾಡಿಕೊಳ್ಳಬೇಕು.
ಈ ಫೋನ್‌ಗಳು NxtQuantum OS ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಸ್ಪೀಡ್, ಸೆಕ್ಯೂರಿಟಿ ಮತ್ತು ಸಿಂಪ್ಲಿಸಿಟಿಗೆ ಡಿಜೈನ್ ಮಾಡಲಾಗಿದೆ. ನಿಖರವಾಗಿ ಬಜೆಟ್ ಪ್ರಕಾರ ಇರುವ ಈ ಫೋನ್‌ಗಳು ಇದೀಗ ಯುವ ಸಮೂಹದಲ್ಲಿ ಟ್ರೆಂಡ್ ಆಗುತ್ತಿವೆ.
AI+ Phones Sold Out Again, Next Sale on July 22




