Airtel Payment Bank: ಏರ್‌ಟೆಲ್ ಗ್ರಾಹಕರಿಗೆ ಸಿಹಿಸುದ್ದಿ, ಬರಲಿವೆ ಹೊಸ ಸೇವೆಗಳು!
Airtel Payment Bank: ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೈಕ್ರೋ ಎಟಿಎಂಗಳನ್ನು (Micro ATM) ಸ್ಥಾಪಿಸಲು ಪ್ರಾರಂಭಿಸಿದೆ.
Airtel Payment Bank: ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೈಕ್ರೋ ಎಟಿಎಂಗಳನ್ನು (Micro ATM) ಸ್ಥಾಪಿಸಲು ಪ್ರಾರಂಭಿಸಿದೆ. ಇವುಗಳ ಮೂಲಕ ಗ್ರಾಹಕರು ಪ್ರತಿ ವಹಿವಾಟಿಗೆ ಗರಿಷ್ಠ ರೂ.10,000 ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಾ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳ ಮೂಲಕ ಗ್ರಾಹಕರು ಈ ಸೇವೆಗಳನ್ನು ಪಡೆಯಬಹುದು. ಖಾತೆಯ ಬಾಕಿಯನ್ನು ತಿಳಿಯಬಹುದು.
ಇದನ್ನೂ ಓದಿ : ವೆಬ್ ಸ್ಟೋರೀಸ್
ಎರಡನೇ ಹಂತದ ನಗರಗಳು ಮತ್ತು ಉಪ-ನಗರ ಪ್ರದೇಶಗಳಲ್ಲಿ ಹಂತ ಹಂತವಾಗಿ ಮಾರ್ಚ್ 2023 ರ ವೇಳೆಗೆ ದೇಶಾದ್ಯಂತ 1.5 ಲಕ್ಷ ಮೈಕ್ರೋ ಎಟಿಎಂಗಳನ್ನು ಲಭ್ಯವಾಗುವಂತೆ ಬ್ಯಾಂಕ್ ಬುಧವಾರ ಪ್ರಕಟಿಸಿದೆ. ಎಟಿಎಂಗಳು ಕಡಿಮೆ ಇರುವ ಮತ್ತು ಹೆಚ್ಚಿನ ಹಣದ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಅವುಗಳನ್ನು ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ.
ಮೈಕ್ರೋ ಎಟಿಎಂ ವಹಿವಾಟುಗಳನ್ನು ಸುಲಭಗೊಳಿಸಲು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಫೈನಾನ್ಶಿಯಲ್ ಸ್ವಿಚ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ (Airtel Payments Bank) ಸಿಇಒ ಅನಂತನಾರಾಯಣನ್ ಮಾತನಾಡಿ, ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಸಬಲೀಕರಣಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು..
Follow us On
Google News |