ನಿಮಗೆಲ್ಲಾ ಗೊತ್ತಿರುವ ಹಾಗೆ ಇತ್ತೀಚಿಗೆ ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ದರವನ್ನು ಇಳಿಕೆ ಮಾಡಿದ್ದು ಗ್ರಾಹಕರಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
200 ರೂಪಾಯಿಗಳವರೆಗೆ ಎಲ್ ಪಿ ಜಿ ಸಿಲೆಂಡರ್ ದರ ಇಳಿಕೆಯಾಗಿದೆ. ಇದರಿಂದ ಸಾವಿರದ ಗಡಿ ದಾಟಿದ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ದರ ಈಗ ಕೇವಲ ರೂ.700 ಗಳಿಗೆ ಲಭ್ಯವಿದೆ.
ಒಂದು ಕಡೆ ಗೃಹ ಬಳಕೆಯ ಎಲ್ ಪಿ ಜಿ ಸಿಲೆಂಡರ್ (Domestic LPG Cylinder) ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿದ್ದು, ಆ ದುಬಾರಿ ವೆಚ್ಚವನ್ನು ಭರಿಸುವುದು ಗ್ರಾಹಕರಿಗೆ ಕಷ್ಟವಾಗುತ್ತಿತ್ತು. ಆದರೆ ಈಗ 200 ರೂ. ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ದರ ಇಳಿಕೆಯಾಗಿದೆ, ಇದರ ಜೊತೆಗೆ ವಾಣಿಜ್ಯ ಬಳಕೆಯ (Commercial LPG Cylinder) ಎಲ್ ಪಿ ಜಿ ಸಿಲಿಂಡರ್ ಬೆಲೆ ಕೂಡ ಸಾಕಷ್ಟು ಇಳಿಕೆಯಾಗಿದ್ದು ಹೋಟೆಲ್ (Hotel), ರೆಸ್ಟೋರೆಂಟ್ ಮೊದಲಾದ ಉದ್ಯಮಗಳಲ್ಲಿ ಇರುವವರಿಗೆ ರಿಲೀಫ್ ಆಗಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMC) 19 ಕೆಜಿ ತೂಕದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿವೆ. ಒಂದು ಸಿಲಿಂಡರ್ ಮೇಲೆ 158 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ 1,522 ರೂಪಾಯಿಗಳಾಗಿದ್ದರೆ ಬೆಂಗಳೂರಿನಲ್ಲಿ 1609 ರೂಪಾಯಿಗಳಿಗೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಲಭ್ಯವಿದೆ.
ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರ ಈ ವರ್ಷ ಎರಡು ಬಾರಿ ಇಳಿಕೆ ಕಂಡಿದೆ. ಮೇ ತಿಂಗಳಿನಲ್ಲಿ 172 ರೂಪಾಯಿಗಳನ್ನು ಕಡಿತಗೊಳಿಸಿದರೆ ಜೂನ್ ತಿಂಗಳಿನಲ್ಲಿ 83 ರೂ. ಗಳಷ್ಟು ಕಡಿತಗೊಳಿಸಲಾಗಿತ್ತು. ಇನ್ನು ಆಗಸ್ಟ್ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 100 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.
ಒಟ್ಟಾಗಿ ಈ ವರ್ಷ ಮೂರು ಬಾರಿ 19 ಕೆಜಿ ತೂಕದ ಎಲ್‌ಪಿಜಿ ಸಿಲೆಂಡರ್ ಬೆಲೆ ಇಳಿಕೆ ಮಾಡಲಾಗಿದೆ ಎನ್ನಬಹುದು. ಒಟ್ಟಿನಲ್ಲಿ ಸರ್ಕಾರ ಹಬ್ಬದ ಬಂಪರ್ ಕೊಡುಗೆಯನ್ನು ವಾಣಿಜ್ಯ ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ.
Along with household Gas cylinder, commercial Gas cylinder prices also fell to record levels
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Along with household Gas cylinder, commercial Gas cylinder prices also fell to record levels