ಬಹುತೇಕ ಸರ್ಕಾರಿ ನೌಕರಿಯಲ್ಲಿ (Government Job) ಇರುವವರಿಗೆ ಅಥವಾ ದೊಡ್ಡ ಖಾಸಗಿ ಕಂಪನಿಯಲ್ಲಿ ಇರುವವರಿಗೆ ಪಿಂಚಣಿ (Pension) ಸೌಲಭ್ಯವಿರುತ್ತದೆ. ಆದರೆ ದೇಶದ ಆರ್ಥಿಕ ಬೆನ್ನೆಲುಬು, ಅನ್ನದಾತರಿಗೆ ಇಂತಹ ಯಾವುದೇ ಸೌಲಭ್ಯಗಳೂ ಕೂಡ ಇರುವುದಿಲ್ಲ.
ಇದನ್ನ ಮನಗಂಡ ಕೇಂದ್ರ ಸರ್ಕಾರ ರೈತರಿಗೆ (Farmer) ಆರ್ಥಿಕವಾಗಿ ಬಲಪಡಿಸುವಂತಹ ಪಿಂಚಣಿ ಯೋಜನೆ (Pension Scheme) ಒಂದನ್ನು ಜಾರಿಗೆ ತಂದಿದೆ. ಈಗಾಗಲೇ ಪಿ ಎಂ ಕಿಸಾನ್ ಯೋಜನೆಯ (PM Kisan Yojana) ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರಿಗೆ ಲಾಭವಾಗಿದೆ ಹದಿನಾಲ್ಕನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದ್ದು ರೈತರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ.
ಅದೇ ರೀತಿ ರೈತರಿಗೆ ಪಿಂಚಣಿ ಒದಗಿಸುವ ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ (PM Kisan Mandhan Yojana) ಕೂಡ ಬಿಡುಗಡೆ ಆಗಿತ್ತು ಇದರಿಂದಲೂ ರೈತರು ಪ್ರತಿ ತಿಂಗಳು ಹಣ ಪಡೆದುಕೊಳ್ಳಬಹುದು.
ರೈತರಿಗಾಗಿ ಪಿಂಚಣಿ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಬಹುದು. 18 ವರ್ಷ ವಯಸ್ಸಿನಿಂದ ಈ ಯೋಚನೆಯಲ್ಲಿ ಹೂಡಿಕೆ (investment) ಮಾಡಬಹುದು. ಗರಿಷ್ಠ ವಯಸ್ಸಿನ ಮಿತಿ 40 ವರ್ಷಗಳು.
18 ವರ್ಷ ವಯಸ್ಸಿನಿಂದ ಹೂಡಿಕೆ ಆರಂಭಿಸುವುದಾದರೆ ತಿಂಗಳಿಗೆ ಕೇವಲ 55 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು ಮುಂದಿನ ವರ್ಷಗಳ ಹೂಡಿಕೆಯಿಂದ ರೈತರಿಗೆ ಅರವತ್ತು ವರ್ಷ ದಾಟುತ್ತಿದ್ದ ಹಾಗೆ ಪ್ರತಿ ತಿಂಗಳು 3000 ಮಾಸಿಕ ಪಿಂಚಣಿ (Monthly Pension) ಲಭ್ಯವಾಗುತ್ತದೆ.
40 ವರ್ಷ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ಪ್ರತಿ ತಿಂಗಳು 220 ರೂ.ಗಳನ್ನು ಕಟ್ಟಬೇಕು. ಹೀಗೆ ಸ್ವಲ್ಪ ಸ್ವಲ್ಪವೇ ಹೂಡಿಕೆ ಮಾಡುತ್ತಾ ಬಂದರೆ ವಾರ್ಷಿಕವಾಗಿ 36,000 ರೂಪಾಯಿಗಳು ರೈತರ ಖಾತೆಗೆ ಜಮಾ (Bank Account) ಆಗುತ್ತದೆ. ನೀವು ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಆರಂಭಿಸಬಹುದು.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು 18ರಿಂದ 40 ವರ್ಷ ವಯಸ್ಸಿನಲ್ಲಿ ಆರಂಭಿಸಬಹುದು.
ಯೋಜನೆ ಆರಂಭಿಸುವವರು ರೈತರ ಮಕ್ಕಳೇ ಆಗಿರಬೇಕು
ಭಾರತೀಯ ನಿವಾಸಿಯಾಗಿರಬೇಕು
ಸ್ವಲ್ಪವಾದರೂ ರೈತರು ಜಮೀನು ಹೊಂದಿರಬೇಕು
ಬೇಕಾಗುವ ದಾಖಲೆಗಳು
ಇನ್ನು ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದಾದರೆ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಆರಂಭಿಸಬಹುದು. ಇದಕ್ಕೆ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಹೊಂದಿರುವುದು ಕಡ್ಡಾಯ. ಇದರ ಜೊತೆಗೆ ರೈತರು ತಮ್ಮ ಜಮೀನಿನ ಮಾಹಿತಿಯನ್ನು ಕೂಡ ನೀಡಬೇಕಾಗುತ್ತದೆ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019