ಮಾರುಕಟ್ಟೆಯಲ್ಲಿ ಹೊಸ ರೀತಿಯ ಕಾರು ಅಥವಾ ಬೈಕ್ ಬರುತ್ತಿದ್ದ ಹಾಗೆ ಅದು ಜನರನ್ನ ಹೆಚ್ಚು ಆಕರ್ಷಿಸುತ್ತದೆ ಹೊಸ ಹೊಸ ಕಾರ್ ಹಾಗೂ ಬೈಕ್ ಗಳನ್ನು ಖರೀದಿ ಮಾಡಲು ಜನ ಮುಂದಾಗುತ್ತಾರೆ ಅದಕ್ಕೆ ತಕ್ಕಂತೆ ಆಟೋಮೊಬೈಲ್ ಇಂಡಸ್ಟ್ರಿ (Auto Mobile Industry) ಕೂಡ ಉತ್ತಮವಾಗಿರುವ ವಾಹನಗಳನ್ನು ಬಿಡುಗಡೆ ಮಾಡುತ್ತದೆ.
ಆದರೆ ವಾಹನ ಖರೀದಿ ಮಾಡುವಾಗ ಮುಖ್ಯವಾಗಿ ಮಾಡಿಸಿಕೊಳ್ಳಲೇಬೇಕಾದ ಕೆಲಸ ಅಂದ್ರೆ ವಿಮಾ ಪಾಲಿಸಿ (Insurance policy) ಮಾಡಿಸುವುದು.
ಹೌದು, ಯಾವುದೇ ವಾಹನ (Vehicle) ಖರೀದಿ ಮಾಡುವುದಿದ್ದರೂ ಅದಕ್ಕೆ ವಿಮಾ ಪಾಲಿಸಿ (Vehicle Insurance) ಅತ್ಯಗತ್ಯವಾಗಿರುತ್ತದೆ. ಇಲ್ಲವಾದರೆ ಯಾವುದಾದರೂ ಅಪಘಾತವಾದಾಗ (Accident), ಪ್ರಕೃತಿ ವಿಕೋಪದಿಂದ ನಿಮ್ಮ ಗಾಡಿಗೆ ಸಮಸ್ಯೆ ಆದಾಗ ನೀವು ನಿಮ್ಮ ಕೈಯಿಂದ ಹಣ ಹಾಕಿ ಅದನ್ನು ರಿಪೇರಿ ಮಾಡಿಕೊಳ್ಳಬೇಕಾಗುತ್ತದೆ. ಅದೇ ನೀವು ವಾಹನಕ್ಕೆ ವಿಮಾ ಪಾಲಿಸಿ ಮಾಡಿಸಿದರೆ ನಿಮ್ಮ ಜೇಬಿನಿಂದ ಹೆಚ್ಚು ಹಣ ಖರ್ಚಾಗುವುದಿಲ್ಲ.
ಹೆಣ್ಣುಮಕ್ಕಳ ತಂದೆ ತಾಯಿಗೆ ಸಿಹಿ ಸುದ್ದಿ, ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ ಸಿಗಲಿದೆ 60 ಲಕ್ಷ
ವಿಮಾ ಪಾಲಿಸಿ ಮಾಡಿಸಲೇಬೇಕು:
ವಿಮಾ ಪಾಲಿಸಿ ಎನ್ನುವುದು ಆಹಾರದಲ್ಲಿ ಉಪ್ಪು ಇದ್ದಹಾಗೆ! ಹೇಗೆ ಉಪ್ಪು ಇಲ್ಲದೆ ಆಹಾರ ಸೇವಿಸಲು ಸಾಧ್ಯವಿಲ್ಲವೋ ಅದೇ ರೀತಿ ಇನ್ಸೂರೆನ್ಸ್ ಇಲ್ಲದೆ ಇದ್ದರೆ ನೀವು ಯಾವ ವಾಹನವನ್ನು ತೆಗೆದುಕೊಂಡು ರಸ್ತೆಯಲ್ಲಿ ಚಲಾವಣೆ ಮಾಡಲು ಸಾಧ್ಯವೇ ಇಲ್ಲ.
ಇದು ಸರ್ಕಾರದ ನಿಯಮವು ಹೌದು ಜೊತೆಗೆ ವಾಹನ ಖರೀದಿ ಮಾಡುವವರ ಸೇಫ್ಟಿ ಕೂಡ ಹೌದು. ಕಾರು (Car Insurance) ಅಥವಾ ಬೈಕ್ಗಳಿಗೆ ವಿಮೆ (Bike Insurance) ಮಾಡಿಸುವಾಗ ಈ ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು ಇಲ್ಲವಾದರೆ ನಿಮಗೆ ವಿಮೆ ಸೌಲಭ್ಯ ಅಗತ್ಯವಿರುವ ಸಂದರ್ಭದಲ್ಲಿ ಲಭಿಸದೆ ಇರಬಹುದು.
ಥರ್ಡ್ ಪಾರ್ಟಿ ಇನ್ಸೂರೆನ್ಸ್ ಪಾಲಿಸಿ: (Third Party Insurance Policy)
ವಾಹನ ಖರೀದಿ ಮಾಡುವವರು ಈ ಪಾಲಿಸಿ ಮಾಡಿಸಿಕೊಳ್ಳಲೇಬೇಕು ಇದು ಕಾನೂನಾತ್ಮಕವಾಗಿಯೂ ಕೂಡ ಮಾಡಿಸಿಕೊಳ್ಳಲೇ ಬೇಕಾಗಿರುವ ಪಾಲಿಸಿ ಆಗಿದೆ. ಈ ವಿಮಾ ಪಾಲಿಸಿಯಲ್ಲಿ ಮೂರನೇ ವ್ಯಕ್ತಿಯಿಂದ ಹಾನಿ ಆದರೆ ಅಥವಾ ಅಪಘಾತವಾದರೆ ಅಥವಾ ನಿಮ್ಮಿಂದ ಮೂರನೇ ವ್ಯಕ್ತಿಗೆ ತೊಂದರೆ ಆದರೆ ಅದನ್ನು ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮೂಲಕ ಒದಗಿಸಬಹುದು. ಇನ್ನು ಈ ಇನ್ಶೂರೆನ್ಸ್ ಮಾಡಿಸಿಕೊಳ್ಳದಿದ್ದರೆ ಭಾರಿ ಪ್ರಮಾಣದ ದಂಡವನ್ನು ಕೂಡ ಕಟ್ಟಬೇಕಾಗುತ್ತದೆ.
ಬಾಡಿಗೆ ಮನೆಯಲ್ಲಿದ್ದು ಸಾಕಷ್ಟು ವರ್ಷಗಳಿಂದ ಮನೆ ಬಾಡಿಗೆ ಕಟ್ಟುತ್ತಿರುವವರಿಗೆ ಭರ್ಜರಿ ಸುದ್ದಿ! ಹೊಸ ನಿಯಮ
ಓನ್ ಡ್ಯಾಮೇಜ್ ಇನ್ಸೂರೆನ್ಸ್ ಪಾಲಿಸಿ (Own Damage Insurance Policy)
ಈ ಪಾಲಿಸಿ ಕೂಡ ಕಾರು ಅಥವಾ ಬೈಕ್ ಖರೀದಿಸುವಾಗ ಮಾಡಿಸಿಕೊಳ್ಳಲೇಬೇಕು. ಓನ್ ಡ್ಯಾಮೇಜ್ ಇನ್ಸೂರೆನ್ಸ್ ಪಾಲಿಸಿ ಅಥವಾ ಸ್ವಂತ ಹಾನಿ ವಿಮಾ ಪಾಲಿಸಿಯಿಂದ ನಿಮ್ಮ ವಾಹನಕ್ಕೆ ಎದುರಿನ ವ್ಯಕ್ತಿಯಿಂದ ತೊಂದರೆಯಾದರೆ ಅಥವಾ ನಷ್ಟ ಉಂಟಾದರೆ ಅದನ್ನು ಈ ಪಾಲಿಸಿ ಮೂಲಕ ಕ್ಲಿಯರ್ ಮಾಡಿಕೊಳ್ಳಬಹುದು.
ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿ: (Comprehensive Insurance Policy)
ಇದು ಕೂಡ ನೀವು ಮಾಡಿಸಿಕೊಳ್ಳಲೇ ಬೇಕಾಗಿರುವ ವಿಮಾ ಪಾಲಿಸಿಯಾಗಿದ್ದು ಯಾವುದೇ ನೈಸರ್ಗಿಕ ಉಬ್ಬಿಕೋಪಗಳಿಂದ ವಾಹನಕ್ಕೆ ಡ್ಯಾಮೇಜ್ (damage) ಆಗಿದ್ದರೆ ನೀವು ವಿಮೆಯ ಸಹಾಯದಿಂದ ವಾಹನವನ್ನು ಪುನಃ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಿದೆ. ನಿಮ್ಮ ವಾಹನ ಕಳ್ಳತನವಾಗಿದ್ದರೆ ಅಥವಾ ಬೆಂಕಿ ಹಾನಿ ಅಥವಾ ಪ್ರಕೃತಿ ವಿಕೋಪಕ್ಕೆ ಒಳಗಾಗಿದ್ದರೆ ಈ ಇನ್ಸೂರೆನ್ಸ್ ಅಡಿಯಲ್ಲಿ ಸಂಪೂರ್ಣ ಕವರ್ ಪಡೆದುಕೊಳ್ಳಬಹುದು. ಇದಕ್ಕೆ ನೀವು ಕಂಪನಿ ತಿಳಿಸಿರುವ ಆಧಾರದ ಮೇಲೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹9250 ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಗೆ ಇಂದೇ ಅಪ್ಲೈ ಮಾಡಿ
ಮೋಟಾರ್ ಇನ್ಸೂರೆನ್ಸ್ ಅಂಡ್ ಕವರ್ಸ್ (Motor Insurance Add-On Covers)
ಇನ್ನು ನೀವು ಎಲ್ಲಾ ವಿಮೆ ಪಾಲಿಸಿ ಪಡೆದುಕೊಂಡ ನಂತರ ಮೋಟಾರ್ ಇನ್ಸೂರೆನ್ಸ್ ಪಾಲಿಸಿ ಕೂಡ ಪಡೆದುಕೊಳ್ಳಬಹುದು. ಇದರಿಂದ ಗಾಡಿಯಲ್ಲಿ ಯಾವುದಾದರೂ ಪಾರ್ಟ್ ಗೆ ಅಂದರೆ ಎಂಜಿನ್ ಸುರಕ್ಷತೆ, ಗಾಡಿಯ ಬಿಡಿ ಭಾಗಗಳ ಸುರಕ್ಷತೆ, ಟೈಯರ್ ಸವಕಳಿ ಹೀಗೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದಾಗಿದ್ದು ಇದರ ಮೂಲಕ ನೀವು ಕಡಿಮೆ ಬೆಲೆಯಲ್ಲಿ ರಿಪೇರಿ ಕೆಲಸ ಮಾಡಿಸಿಕೊಳ್ಳಬಹುದು ಕೆಲವೊಮ್ಮೆ ಶೂನ್ಯ ಬೆಲೆಯಲ್ಲಿ ಕೂಡ ಗಾಡಿ ರಿಪೇರಿ ಮಾಡಿಸಿಕೊಳ್ಳಬಹುದು.
ನೀವು ಯಾವುದೇ ಹೊಸ ಗಾಡಿ ಖರೀದಿ ಮಾಡುವಾಗಲೂ ಕೂಡ ಈ ಮೇಲಿನ ಎಲ್ಲಾ ಇನ್ಸೂರೆನ್ಸ್ ಪಾಲಿಸಿಗಳನ್ನು ಕೂಡ ಮಾಡಿಸಿಕೊಂಡಿರಬೇಕು. ಅಪಘಾತವಾದ ಸಂದರ್ಭದಲ್ಲಿ ಅಥವಾ ಪ್ರಕೃತಿ ವಿಕೋಪ ಉಂಟಾಗಿರುವ ಸಂದರ್ಭದಲ್ಲಿ ನಿಮ್ಮ ವಾಹನಕ್ಕೆ ಡ್ಯಾಮೇಜ್ ಆಗಿದ್ದರೆ ಅದನ್ನು ಹೆಚ್ಚಿನ ಖರ್ಚು ಇಲ್ಲದೆ ಸರಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಈ ಇನ್ಸೂರೆನ್ಸ್ ಪಾಲಿಸಿ ನಿಮ್ಮಲ್ಲಿ ಇಲ್ಲದೆ ಇದ್ದಲ್ಲಿ ಖರ್ಚು ಕೂಡ ಹೆಚ್ಚಾಗುತ್ತದೆ ಜೊತೆಗೆ ಇನ್ಸೂರೆನ್ಸ್ ಮಾಡಿಸಿಕೊಳ್ಳದೆ ಇರುವುದು ಅಪರಾಧವಾಗುತ್ತದೆ.
Car Bike Insurance Policy Benefits Details
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.