ಹೆಣ್ಣುಮಕ್ಕಳ ತಂದೆ ತಾಯಿಗೆ ಸಿಹಿ ಸುದ್ದಿ, ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ ಸಿಗಲಿದೆ 60 ಲಕ್ಷ

ಹೆಣ್ಣುಮಕ್ಕಳ ತಂದೆ ತಾಯಿ ಈ ಯೋಜನೆಯಲ್ಲಿ ಖಾತೆ ಶುರು ಮಾಡಿ, ಉಳಿತಾಯ ಮಾಡುತ್ತಾ ಬಂದರೆ ನಿಮ್ಮ ಮಗಳಿಗೆ 21 ವರ್ಷ ಆಗುವ ವೇಳೆ 60 ಲಕ್ಷ ರೂಪಾಯಿಯವರೆಗು ಆದಾಯ ಪಡೆಯಬಹುದು.

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ತಂದೆ ತಾಯಿಗೆ ಹೆಚ್ಚು ಚಿಂತೆ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಣ್ಣುಮಗುವಿನ ವಿದ್ಯಾಭ್ಯಾಸದಿಂದ (Education) ಹಿಡಿದು ಮದುವೆಯವರೆಗು ಹೇಗೆ ಎಲ್ಲವನ್ನು ಮಾಡುವುದು ಎಂದು ಮಧ್ಯಮವರ್ಗದ ಮತ್ತು ಬಡತನದಲ್ಲಿರುವ ಹೆಣ್ಣುಮಕ್ಕಳ ತಂದೆ ತಾಯಿ ಯೋಚನೆ ಮಾಡುತ್ತಾರೆ.

ಈ ರೀತಿ ಪರಿಸ್ಥಿತಿಯಲ್ಲಿ ಇರುವವರಿಗಾಗಿ ಕೇಂದ್ರ ಸರ್ಕಾರದಲ್ಲಿ ಒಂದು ಯೋಜನೆ ಇದೆ (Govt Scheme). ಈ ಯೋಜನೆಯಲ್ಲಿ ಸರ್ಕಾರವೇ ನಿಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮದುವೆಯವರೆಗು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡು ನೋಡಿಕೊಳ್ಳುತ್ತದೆ. ಸರ್ಕಾರದ ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi yojana) ಆಗಿದೆ.

ಆಧಾರ್ ಕಡ್ಡಾಯವಲ್ಲ! ಆಧಾರ್ ಕಾರ್ಡ್ ಕುರಿತು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ನಿಯಮ ಜಾರಿ

ಹೆಣ್ಣುಮಕ್ಕಳ ತಂದೆ ತಾಯಿಗೆ ಸಿಹಿ ಸುದ್ದಿ, ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ ಸಿಗಲಿದೆ 60 ಲಕ್ಷ - Kannada News

ಇದು ಸಣ್ಣ ಉಳಿತಾಯ ಮತ್ತು ದೊಡ್ಡ ಉಳಿತಾಯ ಎರಡಕ್ಕೂ ಸಹಾಯ ಅಗುವಂಥ ಯೋಜನೆ ಆಗಿದ್ದು, ಹೆಣ್ಣುಮಕ್ಕಳ ತಂದೆ ತಾಯಿ ಈ ಯೋಜನೆಯಲ್ಲಿ ಖಾತೆ ಶುರು ಮಾಡಿ, ಉಳಿತಾಯ ಮಾಡುತ್ತಾ ಬಂದರೆ ನಿಮ್ಮ ಮಗಳಿಗೆ 21 ವರ್ಷ ಆಗುವ ವೇಳೆ 60 ಲಕ್ಷ ರೂಪಾಯಿಯವರೆಗು ಆದಾಯ ಪಡೆಯಬಹುದು.

ಈ ಯೋಜನೆಯಲ್ಲಿ ನಿಮಗೆ 8% ಬಡ್ಡಿ ಸಿಗುತ್ತದೆ. ಈ ಯೋಜನೆ ಶುರುವಾಗಿದ್ದು 2015ರಲ್ಲಿ. ಇದು 21 ವರ್ಷಗಳ ಯೋಜನೆ ಆಗಿದೆ. ಇದರಲ್ಲಿ ಹೆಣ್ಣುಮಕ್ಕಳ ತಂದೆ ತಾಯಿ ಹಣ ಹೂಡಿಕೆ (Money Investment) ಮಾಡಬೇಕಿರುವುದು 15 ವರ್ಷಗಳ ಕಾಲ ಮಾತ್ರ, ಇನ್ನು 6 ವರ್ಷಗಳ ಕಾಲ ಹೂಡಿಕೆ ಮಾಡದೆ ಈ ಯೋಜನೆ ಕೆಲಸ ಮಾಡುತ್ತದೆ.

ಈ ಯೋಜನೆಯನ್ನು 10 ವರ್ಷಗಳ ಒಳಗಿನ ಹೆಣ್ಣುಮಗು ಇರುವ ತಂದೆ ತಾಯಿಯರು ಶುರು ಮಾಡಬಹುದು. ಇಲ್ಲಿ ನೀವು ತಿಂಗಳಿಗೆ 250 ರೂಪಾಯಿಯಿಂದ 1.5ಲಕ್ಷದವರೆಗೂ ಹೂಡಿಕೆ ಮಾಡಬಹುದು.

ಬಾಡಿಗೆ ಮನೆಯಲ್ಲಿದ್ದು ಸಾಕಷ್ಟು ವರ್ಷಗಳಿಂದ ಮನೆ ಬಾಡಿಗೆ ಕಟ್ಟುತ್ತಿರುವವರಿಗೆ ಭರ್ಜರಿ ಸುದ್ದಿ! ಹೊಸ ನಿಯಮ

Sukanya Samriddhi Yojana2023 ಫೆಬ್ರವರಿ ಸಮಯಕ್ಕೆ ಸುಮಾರು 3 ಕೋಟಿ ಜನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಒಂದು ವೇಳೆ ಮಧ್ಯದಲ್ಲೇ ಈ ಯೋಜನೆಯ ಹಣವನ್ನು ವಾಪಸ್ ಪಡೆಯಬೇಕು ಎಂದರೆ ಅದಕ್ಕೂ ಅವಕಾಶವಿದೆ. ನಿಮ್ಮ ಮಗಳಿಗೆ 18 ವರ್ಷವಾದಾಗ ಉನ್ನತ ಶಿಕ್ಷಣಕ್ಕಾಗಿ (Higher Education) ನೀವು ಹಣವನ್ನು ವಾಪಸ್ ಪಡೆದುಕೊಳ್ಳಬಹುದು.

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹9250 ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಗೆ ಇಂದೇ ಅಪ್ಲೈ ಮಾಡಿ

ಮಗುವಿನ ವಿದ್ಯಾಭ್ಯಾಸಕ್ಕೆ (Education) ಸುಮಾರು 50% ಹಣವನ್ನು ನಿಮ್ಮ ಖಾತೆಯಿಂದ ಪಡೆದುಕೊಳ್ಳಬಹುದು. ಇನ್ನು 50% ಹಣವನ್ನು ಮಗಳ ಮದುವೆಗೆ ಪಡೆದುಕೊಳ್ಳಬಹುದು. ಆದರೆ ಪೂರ್ತಿ ಹಣ ಸಿಗುವುದು ಮಗಳಿಗೆ 21 ವರ್ಷ ತುಂಬಿದ ನಂತರ ಮಾತ್ರ.

ಈ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ನಿಮಗೆ 8% ಬಡ್ಡಿ ಸಿಗುತ್ತದೆ. ಇಲ್ಲಿ ನಿಮಗೆ ಆದಾಯ ಎಷ್ಟು ಬರುತ್ತದೆ ಎಂದು ನೋಡುವುದಾದರೆ, ಮಗು ಹುಟ್ಟಿದ ನಂತರ ನೀವು ತಿಂಗಳಿಗೆ 12,500 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ಒಂದು ವರ್ಷಕ್ಕೆ 1.5 ಲಕ್ಷ ಹೂಡಿಕೆ ಮಾಡಿದ ಹಾಗೆ ಆಗುತ್ತದೆ.

15 ವರ್ಷಕ್ಕೆ ₹22,50,000 ಹೂಡಿಕೆ ಮಾಡಿರುತ್ತೀರಿ. ಇದಕ್ಕೆ 8% ಬಡ್ಡಿ ಎಂದರೆ, ಬಡ್ಡಿಯೇ ನಿಮಗೆ ₹44,84,534 ರೂಪಾಯಿ ಬರುತ್ತದೆ.. ಈ ರೀತಿಯಾಗಿ ನಿಮ್ಮ ಮಗುವಿಗೆ 21 ವರ್ಷವಾದ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಇಂದ ₹67,34,534 ರೂಪಾಯಿ ಹಣ ಪಡೆಯಬಹುದು.

ನಿಮ್ಮ ಸ್ವಂತ ಬ್ಯುಸಿನೆಸ್ ಪ್ರಾರಂಭಕ್ಕೆ 10 ಲಕ್ಷ ರೂಪಾಯಿ ನೀಡುವ ಕೇಂದ್ರದ ಯೋಜನೆ! ಇಂದೇ ಅರ್ಜಿ ಹಾಕಿ

Your daughter will get 60 lakhs in this Savings scheme

Follow us On

FaceBook Google News

Your daughter will get 60 lakhs in this Savings scheme