ನಮ್ಮ ದೇಶದ ನಾಗರೀಕರಿಗೆ ಪ್ರಮುಖವಾಗಿ ಬೇಕಾಗಿರುವ ಡಾಕ್ಯುಮೆಂಟ್ ಎಂದರೆ ಆಧಾರ್ ಕಾರ್ಡ್ (Aadhaar Card) ಎಂದು ಹೇಳಬಹುದು. ಯಾವುದೇ ಕೆಲಸಕ್ಕೆ ಈಗ ಪ್ರಮುಖವಾಗಿ ಆಧಾರ್ ಕಾರ್ಡ್ ಬೇಕಾಗುತ್ತದೆ.
ಬ್ಯಾಂಕ್ ಕೆಲಸ, ಸರ್ಕಾರಿ ಕೆಲಸಗಳು, ಹೊಸದಾಗಿ ಕೆಲಸಕ್ಕೆ ಅಪ್ಲೈ ಮಾಡಲು ಹೀಗೆ ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಪ್ರಮುಖ ದಾಖಲೆ. ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೂ ಕೂಡ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ.
ಬಾಡಿಗೆ ಮನೆಯಲ್ಲಿದ್ದು ಸಾಕಷ್ಟು ವರ್ಷಗಳಿಂದ ಮನೆ ಬಾಡಿಗೆ ಕಟ್ಟುತ್ತಿರುವವರಿಗೆ ಭರ್ಜರಿ ಸುದ್ದಿ! ಹೊಸ ನಿಯಮ
ಇಷ್ಟು ಮುಖ್ಯವಾಗಿರುವ ಆಧಾರ್ ಕಾರ್ಡ್ ನ ಮಾಹಿತಿಗಳನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿರುವ ಕೆಲವು ಘಟನೆಗಳು ಕೂಡ ಬೆಳಕಿಗೆ ಬರುತ್ತಿದೆ. ಆಧಾರ್ ಕಾರ್ಡ್ ನಲ್ಲಿರುವ ಆ ವ್ಯಕ್ತಿಯ ಬಗ್ಗೆ ಪೂರ್ತಿ ಮಾಹಿತಿ, ಅವರ ಆದಾಯದ ಬಗ್ಗೆ ಕೂಡ ಪೂರ್ತಿ ಮಾಹಿತಿಯನ್ನು ನೀಡಲಾಗುತ್ತದೆ.
ಹಾಗೆಯೇ ಆಧಾರ್ ಕಾರ್ಡ್ ಅನ್ನು ಬೇರೆ ಡಾಕ್ಯುಮೆಂಟ್ ಗಳ ಜೊತೆಗೂ ಲಿಂಕ್ ಮಾಡುವುದಕ್ಕೆ ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಟುಡೆಂಟ್ ಗಳ ಮಾರ್ಕ್ಸ್ ಕಾರ್ಡ್ ಗು ಆಧಾರ್ ಕಾರ್ಡ್ ಲಿಂಕ್ (Marks Card Aadhaar Link) ಆಗಬೇಕು ಎಂದು ಹೇಳಲಾಗುತ್ತಿತ್ತು.
ಆಧಾರ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ಈಗ UGC ಇಂದ ಒಂದು ಪ್ರಮುಖವಾದ ಆದೇಶ ಬಂದಿದೆ.. ಕೆಲ ದಿನಗಳ ಹಿಂದೆ ಡಿಗ್ರಿ ಕಾಲೇಜ್ (Degree College) ಮಾರ್ಕ್ಸ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಹೇಳಲಾಗಿತ್ತು.
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹9250 ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಗೆ ಇಂದೇ ಅಪ್ಲೈ ಮಾಡಿ
ಈ ನಿಯಮ ಕೆಲವು ಕಾಲೇಜಿನಲ್ಲಿ (College) ಜಾರಿಗೆ ಬಂದ ಕಾರಣ, ಕಾಲೇಜುಗಳು ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ (Marks Card) ಮೇಲೆ ಆಧಾರ್ ಕಾರ್ಡ್ ನಂಬರ್ ಅನ್ನು ಪ್ರಿಂಟ್ ಮಾಡಿದ್ದವು. ಆದರೆ ಇದರಿಂದ ಮೋಸದ ಪ್ರಕರಣಗಳು ಹೆಚ್ಚಾಗಬಹುದಾದ ಕಾರಣ UGC ಈಗ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ .
ನಿಮ್ಮ ಸ್ವಂತ ಬ್ಯುಸಿನೆಸ್ ಪ್ರಾರಂಭಕ್ಕೆ 10 ಲಕ್ಷ ರೂಪಾಯಿ ನೀಡುವ ಕೇಂದ್ರದ ಯೋಜನೆ! ಇಂದೇ ಅರ್ಜಿ ಹಾಕಿ
ಇದೀಗ UGC ಹೊಸ ನಿಯಮ ಮತ್ತು ಮಾರ್ಗಸೂಚಿಯನ್ನು ತಂದಿದ್ದು, ಇನ್ನುಮುಂದೆ ಡಿಗ್ರಿ ಮಾರ್ಕ್ಸ್ ಕಾರ್ಡ್ (Degree Marks Card) ಮತ್ತು ಇನ್ನಿತರ ಮಾರ್ಕ್ಸ್ ಕಾರ್ಡ್ ಗಳ ಮೇಲೆ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕುವುದು ಬೇಡ ಎಂದು UGC ಹೊಸ ನಿಯಮದಲ್ಲಿ ತಿಳಿಸಿದೆ.
ಹಾಗಾಗಿ ಯಾವುದೇ ಕಾಲೇಜು ಇನ್ನುಮುಂದೆ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕುವ ಅಗತ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಆಗಬಹುದಾದ ತೊಂದರೆ ತಪ್ಪಿಸಲು UGC ಹೊಸ ಕ್ರಮ ತೆಗೆದುಕೊಂಡಿದೆ.
New rules for all students of the state regarding Aadhaar card
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.