ಪತ್ನಿ ಹೆಸರಿನಲ್ಲೇ ಚಿನ್ನ ಖರೀದಿ ಮಾಡಿದ್ರೂ ಭರಿಸಬೇಕಾ ಹೆಚ್ಚುವರಿ ಟ್ಯಾಕ್ಸ್; ಏನನ್ನುತ್ತೆ ತೆರಿಗೆ ನಿಯಮ?

ಸಂಗಾತಿಯ ಹೆಸರಿನಲ್ಲಿ ಚಿನ್ನ (Gold) ಅಥವಾ ಇತರ ಆಸ್ತಿಗಳನ್ನು (Buying Property) ಖರೀದಿಸಿ ಟ್ಯಾಕ್ಸ್ ಉಳಿಸಲು ಹಲವರು ಪ್ರಯತ್ನಿಸುತ್ತಾರೆ. ತನ್ನ ಪತ್ನಿಯ ಹೆಸರಿನಲ್ಲಿ ಚಿನ್ನ ಖರೀದಿ ಮಾಡಿದರೆ ತಾನು ಟ್ಯಾಕ್ಸ್ ಕಟ್ಟಬೇಕೆ ಬೇಡವೇ ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ.

ಸರ್ಕಾರದ ಮಾನದಂಡಗಳ ಪ್ರಕಾರ ಅಧಿಕ ಆದಾಯ ಹೊಂದಿರುವವರು ಆದಾಯ ತೆರಿಗೆ (Income tax) ಸಲ್ಲಿಸಲೇಬೇಕು. ಆದರೆ ಅವರವರ ಅರ್ಹತೆಗೆ ಅನುಗುಣವಾಗಿ ಟ್ಯಾಕ್ಸ್ ವಿನಾಯಿತಿ (Tax Exemption) ಕೂಡ ಸಿಗುತ್ತದೆ.

ಆದರೆ ತೆರಿಗೆ ಪಾವತಿಯನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ವಹಿವಾಟನ್ನು ನಡೆಸಬೇಕಾಗುತ್ತದೆ. ಇಲ್ಲವಾದರೆ ಹೆಚ್ಚುವರಿ ಟ್ಯಾಕ್ಸ್ ಕಟ್ಟಬೇಕಾದ ಪರಿಸ್ಥಿತಿ ಎದುರಾಗಬಹುದು.

ರೈತರು ಇಷ್ಟೇ ಇಷ್ಟು ಜಮೀನು ಹೊಂದಿದ್ರೂ ಸಾಕು, ಪ್ರತಿ ತಿಂಗಳು ಸಿಗಲಿದೆ 3,000! ಮಧ್ಯರಾತ್ರಿಯಿಂದಲೇ ಜಾರಿ!

ಪತ್ನಿ ಹೆಸರಿನಲ್ಲೇ ಚಿನ್ನ ಖರೀದಿ ಮಾಡಿದ್ರೂ ಭರಿಸಬೇಕಾ ಹೆಚ್ಚುವರಿ ಟ್ಯಾಕ್ಸ್; ಏನನ್ನುತ್ತೆ ತೆರಿಗೆ ನಿಯಮ? - Kannada News

ಸಾಮಾನ್ಯವಾಗಿ ಸಂಗಾತಿಯ ಹೆಸರಿನಲ್ಲಿ ಚಿನ್ನ (Gold) ಅಥವಾ ಇತರ ಆಸ್ತಿಗಳನ್ನು (Buying Property) ಖರೀದಿಸಿ ಟ್ಯಾಕ್ಸ್ ಉಳಿಸಲು ಹಲವರು ಪ್ರಯತ್ನಿಸುತ್ತಾರೆ. ತನ್ನ ಪತ್ನಿಯ ಹೆಸರಿನಲ್ಲಿ ಚಿನ್ನ ಖರೀದಿ ಮಾಡಿದರೆ ತಾನು ಟ್ಯಾಕ್ಸ್ ಕಟ್ಟಬೇಕೆ ಬೇಡವೇ ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ.

ಹಾಗಾಗಿ ತಜ್ಞರ ಪ್ರಕಾರ ಪತ್ನಿಯ ಹೆಸರಿನಲ್ಲಿ ಚಿನ್ನ ಖರೀದಿ ಅಥವಾ ಮಾರಾಟ ಮಾಡಿದರೆ ಹೆಚ್ಚುವರಿ ಟ್ಯಾಕ್ಸ್ ಬರಿಸಬೇಕಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಚಿನ್ನ ಮಾರಾಟದ ಮೇಲೆ ಬಂಡವಾಳ ಲಾಭ ತೆರಿಗೆ; (Capital gains tax)

ನೀವು ಯಾವುದೇ ಆಸ್ತಿಯನ್ನು ಖರೀದಿ ಮಾಡಿರುವ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಆ ಆಸ್ತಿಯನ್ನು ಮಾರಾಟ ಮಾಡಿದರೆ ಅದರ ಮೇಲೆ ಬಂಡವಾಳ ಲಾಭ ತೆರಿಗೆ (Capital gains tax) ಅನ್ವಯವಾಗುತ್ತದೆ.

ಈ ಆಸ್ತಿ ಎಂದರೆ ಚಿನ್ನದ ಆಭರಣ (Gold Purchase) ಅಥವಾ ಚಿನ್ನದ ಕಾಯಿನ್ ಖರೀದಿ ಮಾಡಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕೂಡ ಇರಬಹುದು. ಇನ್ನು ಬಂಡವಾಳದ ಲಾಭ ಚಿನ್ನದ ಮಾರಾಟದ ಅವಧಿ ಹಾಗೂ ಇನ್ನಿತರ ಹಣಕಾಸಿನ ವ್ಯವಹಾರವನ್ನು ಅವಲಂಬಿಸಿ ಅದಕ್ಕೆ ತಕ್ಕ ಹಾಗೆ ಬದಲಾಗಬಹುದು.

ನಿಮ್ಮ ಗಾಡಿಗೆ ಇನ್ಸೂರೆನ್ಸ್ ಮಾಡಿಸುತ್ತೀರಾ! ಹಾಗಾದ್ರೆ ಎಚ್ಚರ, ಈ ತಪ್ಪು ಮಾಡಿದ್ರೆ ಅಪಘಾತ ಆದರೂ ಒಂದು ರೂಪಾಯಿ ಸಿಗಲ್ಲ

ಪತ್ನಿ ಹೆಸರಿನ ಚಿನ್ನಕ್ಕೆ ಪತಿ ಕಟ್ಟಬೇಕೆ ಟ್ಯಾಕ್ಸ್?

Goldಇದನ್ನು ಸರಳವಾಗಿ ಒಂದು ಉದಾಹರಣೆಯ ಮೂಲಕ ನೋಡುವುದಾದರೆ ಗಂಡ ತನ್ನ ಪತ್ನಿಗೆ ಚಿನ್ನದ ಆಭರಣ ಖರೀದಿಸಲು ಹಣವನ್ನು ಕೊಡುತ್ತಾನೆ. ಹೆಂಡತಿ ಚಿನ್ನವನ್ನು ಖರೀದಿಸಿದರೆ ಆ ರಶೀದಿ (Bill) ಆಕೆಯ ಹೆಸರಿನಲ್ಲಿ ಇರುತ್ತದೆ. ಸ್ವಲ್ಪ ಸಮಯದ ನಂತರ ಆ ಚಿನ್ನವನ್ನು ಮಾರಾಟ ಮಾಡಿದರೆ ಭವಿಷ್ಯದಲ್ಲಿ ಆದಾಯ ತೆರಿಗೆಯನ್ನು ಯಾರು ಕಟ್ಟಬೇಕು?

ಹಣಕಾಸು ತಜ್ಞರು ಹೇಳುವ ಪ್ರಕಾರ, ಯಾವುದೇ ವ್ಯಕ್ತಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನ್ನ ಪತ್ನಿಗೆ ವರ್ಗಾಯಿಸಿದ ಆಸ್ತಿಯಿಂದ (ಚಿನ್ನದ ಮಾರಾಟವು ಸೇರಿದೆ) ಆದಾಯವನ್ನು ಪಡೆದರೆ ಅದನ್ನು ಆ ವ್ಯಕ್ತಿಯ ಆದಾಯಕ್ಕೆ ಸೇರಿಸಲಾಗುತ್ತದೆ.

ಆದರೆ ವಿಚ್ಛೇದನ ಆಗಿದ್ದರೆ ಅಥವಾ ಇನ್ನೂ ಕೆಲವು ವಿಶೇಷ ಸಂದರ್ಭಗಳಲ್ಲಿ ಹಣದ ವರ್ಗಾವಣೆಯಿಂದ ಸಿಕ್ಕ ಲಾಭವನ್ನು ವ್ಯಕ್ತಿಯ ಆದಾಯದಲ್ಲಿ ಸೇರಿಸಲಾಗುವುದಿಲ್ಲ. ಸರಳವಾಗಿ ಹೇಳುವುದಾದರೆ ಪತಿಯು ತನ್ನ ಪತ್ನಿಗೆ ಚಿನ್ನಾಭರಣ ಖರೀದಿ ಮಾಡಲು ಹಣವನ್ನು ಕೊಟ್ಟು ಆಕೆ ಚಿನ್ನವನ್ನು ಖರೀದಿ ಮಾಡಿ, ಸ್ವಲ್ಪ ಸಮಯದ ನಂತರ ಆಭರಣಗಳನ್ನು ಮಾರಾಟ ಮಾಡಿ ಗಂಡ ಲಾಭ ಗಳಿಸಿದರೆ ಆ ಲಾಭದ ಮೊತ್ತವನ್ನು ಗಂಡನ ಆದಾಯಕ್ಕೆ ಸೇರಿಸಲಾಗುತ್ತದೆ. ಗಂಡನ ಆದಾಯ ಮೊದಲಿಗಿಂತಲೂ ಹೆಚ್ಚಾಗಿದ್ದರೆ ಅದರ ಮೇಲೆ ಟ್ಯಾಕ್ಸ್ ಭರಿಸಬೇಕು.

ಇದೇ ರೀತಿಯಾಗಿ ರಿಯಲ್ ಎಸ್ಟೇಟ್ ಆಸ್ತಿ ಖರೀದಿ (Property Purchase) ಹಾಗೂ ಮಾರಾಟ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಶೇರು ತೆಗೆದುಕೊಳ್ಳುವುದು ಅಥವಾ ಮ್ಯೂಚುವಲ್ ಫಂಡ್ (Mutual fund) ಗಳಲ್ಲಿ ಹೂಡಿಕೆ ಮಾಡುವುದು ಇವುಗಳ ಮೇಲೆಯೂ ಕೂಡ ಬಂದಿರುವ ಲಾಭದಲ್ಲಿ ತೆರಿಗೆ ಪಾವತಿ ಮಾಡಬೇಕು. ಇಂತಹ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ಕೂಡ ಇರುವುದಿಲ್ಲ.

Taxation of Gold Purchased in Wife Name, What Rules Says

Follow us On

FaceBook Google News

Taxation of Gold Purchased in Wife Name, What Rules Says