ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ದಿನಾಂಕ ಘೋಷಣೆ! ಬಂಪರ್ ರಿಯಾಯಿತಿ - Amazon Great Indian Festival Sale

Amazon Great Indian Festival Sale: ಸೆಪ್ಟೆಂಬರ್ 24ರಿಂದ ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಆರಂಭ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಅನೇಕ ಬ್ರಾಂಡ್‌ಗಳ ಮೇಲೆ 80% ವರೆಗೆ ಕಡಿತ. ಕೇಂದ್ರ ಸರ್ಕಾರ ಜಿಎಸ್ಟಿ ಕಡಿತ ಘೋಷಣೆ ಮಾಡಿದ ಬಳಿಕ ದರ ಮತ್ತಷ್ಟು ಇಳಿಕೆ.

Amazon Great Indian Festival Sale: ಹಬ್ಬದ ಖರೀದಿ ಸೀಸನ್‌ಗೆ ಕಾತರದಿಂದ ಕಾಯುತ್ತಿದ್ದ ಗ್ರಾಹಕರಿಗೆ ಅಮೆಜಾನ್ ಮತ್ತೊಂದು ದೊಡ್ಡ ಸುದ್ದಿಯನ್ನು ನೀಡಿದೆ. ಸೆಪ್ಟೆಂಬರ್ 24ರಿಂದ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ ಆರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಸೇಲ್ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಇನ್ನೂ ಕಂಪನಿ ಬಹಿರಂಗಪಡಿಸಿಲ್ಲ.

ಈ ಬಾರಿ ಸೇಲ್‌ಗೆ ಮುನ್ನವೇ ಕೇಂದ್ರ ಸರ್ಕಾರ ಜಿಎಸ್ಟಿ ಕಡಿತದ ನಿರ್ಧಾರವನ್ನು ಪ್ರಕಟಿಸಿದೆ. ಇದರಿಂದಾಗಿ ಟಿವಿ, ಏಸಿ ಸೇರಿದಂತೆ ಪ್ರಮುಖ ಎಲೆಕ್ಟ್ರಾನಿಕ್ಸ್ ವಸ್ತುಗಳ ದರವು ಸಾವಿರಾರು ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಹೀಗಾಗಿ ಗ್ರಾಹಕರು ಸೇಲ್ ಆರಂಭವಾದ ನಂತರ ಇನ್ನಷ್ಟು ಲಾಭ ಪಡೆಯಬಹುದು.

ಅಮೆಜಾನ್ ಪ್ರೈಮ್ ಸದಸ್ಯರಿಗೆ ಸೇಲ್ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗಲಿದೆ. ಆ ಸಂದರ್ಭದಲ್ಲಿ ಅತ್ಯುತ್ತಮ ಆಫರ್‌ಗಳು ದೊರೆಯುವುದರಿಂದಲೇ ಹೆಚ್ಚಿನವರು ಮೊದಲ ದಿನವೇ ಖರೀದಿ ಆರಂಭಿಸುತ್ತಾರೆ. ನಂತರ ರಿಯಾಯಿತಿ ಪ್ರಮಾಣ ನಿಧಾನವಾಗಿ ಇಳಿಯುವ ಸಾಧ್ಯತೆ ಇದೆ.

ಜಾಹಿರಾತು

ಈ ಸೇಲ್‌ನಲ್ಲಿ ಎಚ್‌ಪಿ, ಬೋಟ್, ಸೋನಿ ಸೇರಿದಂತೆ ಹಲವಾರು ಪ್ರಸಿದ್ಧ ಬ್ರಾಂಡ್‌ಗಳ ಉತ್ಪನ್ನಗಳ ಮೇಲೆ 80% ವರೆಗೆ ಡಿಸ್ಕೌಂಟ್ ಲಭ್ಯವಿರಲಿದೆ. ಪ್ರತೀ ವರ್ಷ ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ನಡೆಯುವ ಈ ಫೆಸ್ಟಿವಲ್ ಸೇಲ್ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತದೆ. ಈ ಬಾರಿ ಕೂಡ ಭಾರಿ ಮಟ್ಟದ ಆಫರ್‌ಗಳು ಖಚಿತವಾಗಿವೆ.

ಟಿವಿ ಅಥವಾ ಏಸಿ ಖರೀದಿ ಯೋಚನೆ ಮಾಡುವವರು ಸೆಪ್ಟೆಂಬರ್ 22ರ ನಂತರ ಕಾಯುವುದು ಉತ್ತಮ. ಏಕೆಂದರೆ ಆ ದಿನದಿಂದ ಜಿಎಸ್ಟಿ ಕಡಿತ ದರ ಜಾರಿಗೆ ಬರಲಿದೆ. ಇದರಿಂದಲೇ ಸೇಲ್‌ನಲ್ಲಿ ದೊರೆಯುವ ಬ್ಯಾಂಕ್ ಆಫರ್‌ಗಳ ಜೊತೆಗೆ ಹೆಚ್ಚಿನ ಬೆಲೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ.

ಜಾಹಿರಾತು
ಜಾಹಿರಾತು

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories