ಐಫೋನ್ ಬೆಲೆಯಲ್ಲಿ ಮ್ಯಾಕ್ ಬುಕ್ ಬಿಡುಗಡೆ! ಆಪಲ್‌ನಿಂದ ಬಂಪರ್ ಕೊಡುಗೆ - Apple MacBook

ಆಪಲ್ ತನ್ನ ಇತಿಹಾಸದಲ್ಲೇ ಅತಿ ಕಡಿಮೆ ಬೆಲೆಯ ಮ್ಯಾಕ್‌ಬುಕ್ ಬಿಡುಗಡೆ ಮಾಡಲು ಸಜ್ಜಾಗಿದೆ. 12.9 ಇಂಚು ಡಿಸ್ಪ್ಲೇ, iPhone 16 Pro ಮಟ್ಟದ A18 Pro ಚಿಪ್‌ ಸಹಿತ, ವಿದ್ಯಾರ್ಥಿ–ಕಚೇರಿ ಬಳಕೆದಾರರಿಗೆ ಗುರಿ.

  • ₹52,000 ಬಜೆಟ್‌ನಲ್ಲಿ A18 Pro ಚಿಪ್‌ ಇರುವ ಮ್ಯಾಕ್‌ಬುಕ್
  • 12.9 ಇಂಚು ಡಿಸ್ಪ್ಲೇ, ಹಗುರ ಮತ್ತು ಕ್ಯಾರಿ ಮಾಡಲು ಸುಲಭ
  • ಸ್ಟೂಡೆಂಟ್ಸ್ ಮತ್ತು ಬಜೆಟ್‌ ಯೂಸರ್‌ಗಳಿಗೆ ಪ್ರೀಮಿಯಂ ಅನುಭವ

Apple MacBook : ಟೆಕ್ ಪ್ರಿಯರಿಗೆ ಆಪಲ್ ಹೊಸ ಸರ್ಪ್ರೈಸ್‌ ತರುವ ನಿರೀಕ್ಷೆಯಿದೆ. ಕಂಪನಿ ತನ್ನ ಇತಿಹಾಸದಲ್ಲೇ ಅತಿ ಕಡಿಮೆ ಬೆಲೆಯ ಮ್ಯಾಕ್‌ಬುಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಬೆಲೆ ಸುಮಾರು ₹52,000 ಇರಬಹುದಾಗಿ ವರದಿಗಳು ತಿಳಿಸಿವೆ. ಇದು ಕ್ರೋಮ್‌ಬುಕ್ ಹಾಗೂ ಬಜೆಟ್ ವಿಂಡೋಸ್ ಲ್ಯಾಪ್‌ಟಾಪ್‌ಗಳಿಗೆ ನೇರ ಸವಾಲಾಗಲಿದೆ.

ಹೊಸ ಮ್ಯಾಕ್‌ಬುಕ್‌ನಲ್ಲಿ 12.9 ಇಂಚಿನ ಡಿಸ್ಪ್ಲೇ ಇದ್ದು, ಮ್ಯಾಕ್‌ಬುಕ್ ಏರ್‌ಗಿಂತ ಸ್ವಲ್ಪ ಚಿಕ್ಕದಾಗಿದೆ. ಹಗುರ ತೂಕದ ಕಾರಣ, ವಿದ್ಯಾರ್ಥಿಗಳು ಮತ್ತು ನಿರಂತರ ಪ್ರಯಾಣ ಮಾಡುವ ವೃತ್ತಿಪರರಿಗೆ ಇದು ಅನುಕೂಲಕರ.

ಇದನ್ನೂ ಓದಿ: QR ಕೋಡ್‌ ಸಹಿತ ಪ್ಯಾನ್ ಕಾರ್ಡ್‌! ನೀವಿನ್ನೂ ಹೊಸ ಕಾರ್ಡ್ ಅಪ್ಲೈ ಮಾಡಿಲ್ವಾ..

ಅತಿ ಮುಖ್ಯವಾಗಿ, ಇದರಲ್ಲಿ iPhone 16 Proಗೂ ಬಳಸಲಿರುವ A18 Pro ಚಿಪ್‌ ಸಿಗಲಿದೆ. ಇದರಿಂದ ವೀಡಿಯೊ ಎಡಿಟಿಂಗ್‌ನಿಂದ ಆನ್‌ಲೈನ್‌ ಮೀಟಿಂಗ್‌ವರೆಗೆ ಎಲ್ಲ ಕಾರ್ಯಗಳು ವೇಗವಾಗಿ ಸಾಗಲಿವೆ.

ಆಪಲ್ ಈ ಮಾದರಿಯನ್ನು ವಿಶೇಷವಾಗಿ ಸ್ಟೂಡೆಂಟ್ಸ್, ಫ್ರೀಲಾನ್ಸರ್ಸ್, ಮತ್ತು ಬಜೆಟ್‌ನಲ್ಲಿ ಪ್ರೀಮಿಯಂ ಅನುಭವ ಬಯಸುವವರಿಗಾಗಿ ತಯಾರಿಸುತ್ತಿದೆ.

2025ರ ಅಂತ್ಯ ಅಥವಾ 2026ರ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬರಬಹುದಾದ ಈ ಮ್ಯಾಕ್‌ಬುಕ್, ಅನೇಕರು ಕನಸಿನಲ್ಲಿ ಮಾತ್ರ ನೋಡಿದ ಆಪಲ್ ಲ್ಯಾಪ್‌ಟಾಪ್ ಹೊಂದುವ ಅವಕಾಶ ನೀಡಬಹುದು.

Apple may launch budget MacBook with A18 Pro chip

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories