ಉಚಿತ ಸೋಲಾರ್ ಪಂಪ್ ಸೆಟ್ ಯೋಜನೆಗೆ ಅರ್ಜಿ ಸಲ್ಲಿಸಿ! ಕೃಷಿ ಭೂಮಿ ಇದ್ದವರಿಗೆ ಮಾತ್ರ ಅವಕಾಶ

Story Highlights

ಇದೀಗ ರೈತರಿಗೆ ನೀರಾವರಿ ಕೆಲಸಕ್ಕೆ ಅನುಕೂಲ ಆಗಲಿ ಎಂದು ಸೋಲಾರ್ ಪಂಪ್ ಸೆಟ್ ಗಳನ್ನು (Solar Pump Set) ಕೃಷಿ ಭೂಮಿಯಲ್ಲಿ ಅಳವಡಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ

ಕೇಂದ್ರ ಸರ್ಕಾರವು ರೈತರ ಕೃಷಿ ಕೆಲಸಕ್ಕೆ ಅನುಕೂಲ ಆಗುವ ಹಾಗೆ ಹಲವು ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಇದೀಗ ರೈತರಿಗೆ ನೀರಾವರಿ ಕೆಲಸಕ್ಕೆ ಅನುಕೂಲ ಆಗಲಿ ಎಂದು ಸೋಲಾರ್ ಪಂಪ್ ಸೆಟ್ ಗಳನ್ನು (Solar Pump Set) ಕೃಷಿ ಭೂಮಿಯಲ್ಲಿ ಅಳವಡಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ರೈತರು ಈ ಮೂಲಕ ತಮ್ಮ ಕೃಷಿ ನೆಲದಲ್ಲಿ (Agriculture Land) ಪಂಪ್ ಸೆಟ್ ಗಳನ್ನು ಸರ್ಕಾರದ ಸಹಾಯ ಪಡೆದು ಅಳವಡಿಸಿಕೊಳ್ಳಬಹುದು. ಇದನ್ನು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಸೋಲಾರ್ ಪಂಪ್ ಸೆಟ್ ಯೋಜನೆಯನ್ನು ಕುಸುಮ್ ಬಿ ಅನುಷ್ಠಾನದ ವತಿಯಿಂದ ಜಾರಿಗೆ ತರಲಾಗಿದೆ. 2024-25 ರ ಸಾಲಿನಲ್ಲಿ ಸುಮಾರು 40 ಸಾವಿರ ಪಂಪ್ ಸೆಟ್ ಗಳನ್ನು ಅಳವಡಿಸುವ ಪ್ಲಾನ್ ಮಾಡಿಕೊಂಡಿದೆ ಸರ್ಕಾರ. ಹಾಗಿದ್ದಲ್ಲಿ ರೈತರು ಈ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂದು ಪೂರ್ತಿಯಾಗಿ ತಿಳಿಯೋಣ..

ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

ಸೋಲಾರ್ ಪಂಪ್ ಸೆಟ್ ಗೆ ಸಿಗುವ ಸಬ್ಸಿಡಿ ಮೊತ್ತ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಮೂಲಕ ಈಗಾಗಲೇ ತೆರೆದಿರುವ ಬಾವಿಗಳಿಗೆ 3 hp ಇಂದ 10 hp ಸಾಮರ್ಥ್ಯ ಇರುವ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಬಹುದು.

ರೈತರಿಗೆ ಇದರಿಂದ ಸಮಸ್ಯೆ ಆಗಬಾರದು ಎಂದು ಸರ್ಕಾರವು 30 ಇಂದ 50% ವರೆಗು ಸಬ್ಸಿಡಿ ಕೊಡಲು ನಿರ್ಧರಿಸಿದೆ, ಇನ್ನು ಕೇಂದ್ರ ಸರ್ಕಾರವು 30% ವರೆಗು ಸಬ್ಸಿಡಿ ಕೊಡಲಿದ್ದು, ರೈತರು ಇನ್ನುಳಿದ 20% ಮೊತ್ತವನ್ನು ಮಾತ್ರ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ನಿಮಗೆ 80% ಸಬ್ಸಿಡಿ ಸಿಗಲಿದೆ. ಸೋಲಾರ್ ಪಂಪ್ ಸೆಟ್ 1 ಲಕ್ಷ ಎಂದರೆ ನೀವು 20000 ಮಾತ್ರ ಪಾವತಿ ಮಾಡಬೇಕು.

ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

Solar Water Pumpಅರ್ಜಿ ಸಲ್ಲಿಕೆ ಹೇಗೆ?

ಸೋಲಾರ್ ಪಂಪ್ ಗೆ (Solar Water Pump) ಅರ್ಜಿ ಸಲ್ಲಿಸಲು ಮೊದಲು, souramitra.com ಈ ಲಿಂಕ್ ಗೆ ಭೇಟಿ ನೀಡಿ..

1. ಇಲ್ಲಿ ನಿಮಗೆ ಒಂದು ನೋಟಿಫಿಕೇಶನ್ ಕಾಣಿಸುತ್ತದೆ. ಅದನ್ನು ಪೂರ್ತಿ ಓದಿ, ಕ್ಲೋಸ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಪೂರ್ತಿ ಮಾಹಿತಿಯನ್ನು ಸರಿಯಾಗಿ ಓದಿ.

2. ನಂತರ ನಿಮಗೆ.. ನೀವು ಈಗಾಗಲೇ ಅಕ್ರಮ ಸಂಪಕ೯ದ ನೀರಾವರಿ pump set ಸಕ್ರಮಕ್ಕಾಗಿ ವಿಸಕಂಗೆ ಹಣ ಪಾವತಿಸಿದ ಗ್ರಾಹಕರೇ? ಎನ್ನುವ ಒಂದು ಪ್ರಶ್ನೆ ಕಂಡುಬರುತ್ತದೆ. ಇಲ್ಲಿ No ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

3. ಬಳಿಕ ನಿಮ್ಮ ಆಧಾರ್ ಡೀಟೇಲ್ಸ್, ಕೃಷಿ ಭೂಮಿಯ ಡೀಟೇಲ್ಸ್ ಎಲ್ಲವನ್ನು ನಮೂದಿಸಿ.

4. ಬೇರೆ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, Submit ಮಾಡಿ.

ನಿಮ್ಮ ಬೈಕ್ ಮತ್ತು ಕಾರುಗಳಿಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಬೇಕಾ? ಆನ್‌ಲೈನ್‌ನಲ್ಲೆ ಅಪ್ಲೈ ಮಾಡಿ

ಈ ಆದ್ಯತೆಗಳ ಅನುಸಾರ ಸೋಲಾರ್ ಪಂಪ್ ಸೆಟ್ ಅಳವಡಿಸಲಾಗುತ್ತದೆ:

ಮೊದಲ ಆದ್ಯತೆ: ಯಾವೆಲ್ಲಾ ರೈತರು ಪಂಪ್ ಸೆಟ್ ಅಳವಡಿಕೆಗೆ 10,000 ಕ್ಕಿಂತ ಹೆಚ್ಚು ಹಣ ಪಾವತಿಸಿ ಅರ್ಜಿ ಸಲ್ಲಿಸುತ್ತಾರೋ, ಹಾಗೆಯೇ ಅವರು ಭೂಮಿಯಲ್ಲಿರುವ ಬಾವಿಗಳು Transformer ಗಿಂತ 500 ಮೀಟರ್ ಗಿಂತ ದೂರ ಇರುತ್ತದೆಯೋ ಅಂಥವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ.

ಎರಡನೇ ಆದ್ಯತೆ: ಈಗಾಗಲೇ ಅವರ ಕೃಷಿ ಪಂಪ್ ಸೆಟ್ ಹಾಕಿಸುವುದಕ್ಕಾಗಿ 50 ರೂಪಾಯಿಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಿದ್ದರೆ, ಹಾಗೆಯೇ ಅವರ ಕೃಷಿ ಭೂಮಿಯಲ್ಲಿರುವ ಬಾವಿ, Transformer ಗಿಂತ 500 ಮೀಟರ್ ದೂರ ಇದ್ದರೆ, ಅಂಥವರಿಗೆ ಎರಡನೇ ಆದ್ಯತೆ ನೀಡಲಾಗುತ್ತದೆ.

Apply for Free Solar Pump Set Scheme for Your agricultural land

Related Stories