ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

Gas Cylinder Subsidy : ಮಹಿಳಾ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲಿದ್ದು ಮೊದಲು ಗ್ಯಾಸ್ ಸಂಪರ್ಕ ಪಡೆಯುವ ಮನೆಗೆ ಉಚಿತ ಸಂಪರ್ಕ (Free Gas Connection), ಉಚಿತ ಗ್ಯಾಸ್ ಸ್ಟೌವ್ ನೀಡಲಿದೆ.

Bengaluru, Karnataka, India
Edited By: Satish Raj Goravigere

Gas Cylinder Subsidy : ಇಂದು‌ ಮಹಿಳಾ ಪರವಾದ ಯೋಜನೆಗಳು ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ ಎಂದು ಹೇಳಬಹುದು. ಈಗಾಗಲೇ ರಾಜ್ಯ ಸರಕಾರದ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಸೌಲಭ್ಯ ವನ್ನು ಬಹಳಷ್ಟು ಮಹಿಳೆಯರು ಪಡೆದುಕೊಂಡಿದ್ದು ಇದೀಗ ಕೇಂದ್ರ ಸರಕಾರವು ಉಜ್ವಲ ಯೋಜನೆಯ ಬಗ್ಗೆ ಈ ಅಪ್ಡೇಟ್ ಮಾಹಿತಿ‌ ನೀಡಿದೆ.

ಹೌದು ಮಹಿಳೆಯರ ಅಭಿವೃದ್ಧಿಗಾಗಿ ಜಾರಿ ಮಾಡಿರುವಂತ ಯೋಜನೆ ಇದಾಗಿದ್ದು ಈ ಯೋಜನೆ ಮೂಲಕ ಮಹಿಳೆಯರಿಗೆ ಅಡುಗೆ ಕೆಲಸ ಸುಲಭ ವಾಗುತ್ತಿದೆ. ಇಂದು ಮಹಿಳೆಯರು ಗ್ಯಾಸ್ ಸಿಲಿಂಡರ್ (Gas Cylinder) ಉಪಯೋಗ ಮಾಡುವ ಮೂಲಕ ಸುಲಭ ವಾಗಿ ಅಡುಗೆ ಕೆಲಸ ಮಾಡಿ ಮುಗಿಸುತ್ತಾರೆ. ಆದರೆ ಈ ಯೋಜನೆಯ ಸೌಲಭ್ಯ ಪಡೆಯಲು ಇದೀಗ ಈ ಕೆಲಸ ಕಡ್ಡಾಯ ಎಂದು ಕೇಂದ್ರ ಸರಕಾರ ತಿಳಿಸಿದೆ.

Gas Cylinder

ಮಾರುಕಟ್ಟೆಗೆ ಬಂತು ಕೇವಲ ₹2500 ರೂಪಾಯಿ EMI ಕಟ್ಟುವ ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್

ಕೇಂದ್ರ ಸರಕಾರವು‌ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಂದರೆ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಮಹಿಳಾ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲಿದ್ದು ಮೊದಲು ಗ್ಯಾಸ್ ಸಂಪರ್ಕ ಪಡೆಯುವ ಮನೆಗೆ ಉಚಿತ ಸಂಪರ್ಕ (Free Gas Connection), ಉಚಿತ ಗ್ಯಾಸ್ ಸ್ಟೌವ್ ನೀಡಲಿದೆ. ಅದೇ ರೀತಿ‌ ಪ್ರತಿ ಸಿಲಿಂಡರ್‌ಗೆ ಒಟ್ಟು 200 ರಿಂದ 300 ರೂಪಾಯಿ ಸಬ್ಸಿಡಿ ಕೂಡ ನೀಡಲಿದೆ.

ಇದೀಗ ಉಜ್ಬಲ ಯೋಜನೆಯ ಸೌಲಭ್ಯ ನಿಮಗೆ ಸಿಗಬೇಕಾದರೆ ‌ಈ ಕೆಲಸ ಕಡ್ಡಾಯ ಎಂದಿದೆ.‌ ಅಂದರೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯೂ ನೀಡಿದ ಮಾಹಿತಿಯಂತೆ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದು ಕ್ಕೊಳ್ಳುವಂತೆ ಸೂಚನೆ ನೀಡಿದೆ.

ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಹಣಕ್ಕೆ ಆಕರ್ಷಕ ಬಡ್ಡಿ ನೀಡುತ್ತಿವೆ ಈ 4 ಬ್ಯಾಂಕುಗಳು

Gas Cylinderಅದೇ ರೀತಿ ಎಲ್‌ ಪಿಜಿ ಸೌಲಭ್ಯ ಪಡೆಯಲು ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು ಇಕೆವೈಸಿ ಮಾಡದ ಗ್ರಾಹಕರಿಗೆ ಸಬ್ಸಿಡಿ ಹಣವೂ ಖಾತೆಗೆ (Bank Account) ಜಮೆ ಯಾಗುವುದಿಲ್ಲ ಎಂದಿದೆ. ಹಾಗಾಗಿ ಇಕೆವೈಸಿಯನ್ನು ಮಾಡಿಸಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ನೀಡಿರುವ ಕಾರ್ಡ್ ಜೊತೆ ಏಜನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಿ.

ಪ್ರತಿ ತಿಂಗಳು ಸಿಗುತ್ತೆ ₹5000 ರೂಪಾಯಿ! ಸರ್ಕಾರದ ಈ ಯೋಜನೆಯ ಸೌಲಭ್ಯ ನೀವು ಪಡೆದುಕೊಳ್ಳಿ

ಇಲ್ಲದಿದ್ದಲ್ಲಿ ನಿಮ್ಮ  ಖಾತೆಗೆ ಸಬ್ಸಿಡಿ ಹಣ ಬರಲು ಸಾದ್ಯ ಇಲ್ಲ.‌ ಯಾಕಂದರೆ ಇಂದು ಸಾಕಷ್ಟು ಗ್ರಾಹಕರು ಒಂದಕ್ಕಿಂತ ಹೆಚ್ಚು ಸಂಪರ್ಕವನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು ಕೆಲವರು ಬೇರೆಯವರ ಹೆಸರಿನಲ್ಲಿ ಸಿಲಿಂಡರ್‌ ಪಡೆದು ಬಳಕೆ ಮಾಡುತ್ತಿದ್ದಾರೆ.‌

ಇದರಿಂದ ಅನರ್ಹರಿಗೂ ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಸಿಗ್ತಾ ಇದ್ದು ಈ ನಿಟ್ಟಿನಲ್ಲಿ ಹೊಸ ಕ್ರಮ ಜಾರಿ ಮಾಡಿದೆ. ಹಾಗಾಗಿ ನಿಜವಾದ ಗೃಹ ಬಳಕೆ ಗ್ರಾಹಕರು ಮಾತ್ರ ಸಬ್ಸಿಡಿ ಸಿಲಿಂಡರ್‌ ಪಡೆಯುವಂತಾಗಬೇಕು ಎಂದು ಇಕೆವೈಸಿ ಕಡ್ಡಾಯ ಮಾಡಿದೆ.

This rule is mandatory for gas cylinder subsidy