ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಹಣಕ್ಕೆ ಆಕರ್ಷಕ ಬಡ್ಡಿ ನೀಡುತ್ತಿವೆ ಈ 4 ಬ್ಯಾಂಕುಗಳು

Story Highlights

Fixed Deposit : ದೇಶದ ಉತ್ತುಂಗದ ಬ್ಯಾಂಕ್ ಬ್ಯಾಂಕ್ IDBI ಇದೀಗ ಉತ್ಸವ್ ಯೋಜನೆ ಹೆಸರಲ್ಲಿ ತನ್ನಗ್ರಾಹಕರಿಗೆ ಸ್ಥಿರ ಠೇವಣಿಗಳಿಗೆ (Fixed Deposit) ಮೇಲೆ ವಿಶೇಷ ದರವನ್ನು ನೀಡುತ್ತಿದೆ

Fixed Deposit : ಸಾಮಾನ್ಯವಾಗಿ ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರದಲ್ಲಿ ಹಣದ ಉಳಿತಾಯಕ್ಕೆ ಸಾಕಷ್ಟು ಮಹತ್ವವಿದೆ. ಹಲವಾರು ಅವಕಾಶಗಳು ಇಂದು ದೇಶದಲ್ಲಿ ಉದ್ಯಮ ಹೂಡಿಕೆಗೆ ಸಿಗುತ್ತಿದೆ. ಇದರ ಬೆನ್ನಲ್ಲೂ ಕೂಡ ಜನರು ಯಾವುದೇ ರಿಸ್ಕ್ ಇಲ್ಲದೆ ತಮ್ಮ ಹಣವನ್ನು ಅತ್ಯಂತ ಸೇಫಾಗಿ ಹೂಡಿಕೆ ಮಾಡುವ ಸ್ಥಳ ಎಂದರೆ ಅದು ಬ್ಯಾಂಕ್ FD ಎಂದರೆ ತಪ್ಪಾಗಲಾರದು.

ಸದ್ಯ ಬ್ಯಾಂಕ್ FD ಗಳ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ಕೆಲವು ಬ್ಯಾಂಕುಗಳು (Banks) ಪರಿಷ್ಕರಣೆ ಮಾಡುತ್ತವೆ. ಬ್ಯಾಂಕುಗಳು ನೀಡುತ್ತಿರುವ ಈ FD ರೇಟ್ ಅಷ್ಟೊಂದು ನ್ಯಾಯಯುತವಲ್ಲದಿದ್ದರು ಸಹ ಇದೊಂದು ರಿಸ್ಕ್ ಫ್ರೀ ಇನ್ವೆಸ್ಟ್ಮೆಂಟ್ ಆಗಿದೆ. ಹೀಗಾಗಿ ಜನರು ತಮ್ಮ ಉಳಿತಾಯದ ಹಣವನ್ನು ಯಾವುದೇ ಅಂಜಿಕೆ ಇಲ್ಲದೆ ಬ್ಯಾಂಕ್ ನಲ್ಲಿ ಇಡಬಹುದಾಗಿದೆ.

ಪ್ರತಿ ತಿಂಗಳು ಸಿಗುತ್ತೆ ₹5000 ರೂಪಾಯಿ! ಸರ್ಕಾರದ ಈ ಯೋಜನೆಯ ಸೌಲಭ್ಯ ನೀವು ಪಡೆದುಕೊಳ್ಳಿ

ಬೆಸ್ಟ್ ಆಫ಼ರ್ ಕೊಟ್ಟ ಈ ಬ್ಯಾಂಕ್ ಗಳು

ಸದ್ಯಕ್ಕೆ ದೇಶದಲ್ಲಿ ಇರುವ ಪ್ರತಿಷ್ಠಿತ ಬ್ಯಾಂಕುಗಳಾದ IDBI ಬ್ಯಾಂಕ್, ಇಂಡಿಯನ್ ಬ್ಯಾಂಕ್, ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಂತಹ ಬ್ಯಾಂಕ್‌ಗಳು ಜೂನ್‌ನಲ್ಲಿ ನಿಗದಿತ ಗಡುವನ್ನು ಹೊಂದಿರುವ ವಿಶೇಷ ನಿಶ್ಚಿತ ಠೇವಣಿ ಅಂದರೆ ಫಿಕ್ಸಡ್ ಡೆಪಾಸಿಟ್ ಯೋಜನೆಗಳನ್ನು ಜನರಿಗೆ ಘೋಷಣೆ ಮಾಡಿವೆ.

IDBI Bank special Utsav FD

ದೇಶದ ಉತ್ತುಂಗದ ಬ್ಯಾಂಕ್ ಬ್ಯಾಂಕ್ IDBI ಇದೀಗ ಉತ್ಸವ್ ಯೋಜನೆ ಹೆಸರಲ್ಲಿ ತನ್ನಗ್ರಾಹಕರಿಗೆ ಸ್ಥಿರ ಠೇವಣಿಗಳಿಗೆ (Fixed Deposit) ಮೇಲೆ ವಿಶೇಷ ದರವನ್ನು ನೀಡುತ್ತಿದೆ ಸಾಮಾನ್ಯ ನಾಗರಿಕರಿಗೆ, 300 ದಿನ ಎಫ್‌ಡಿಗಳಲ್ಲಿ ಬ್ಯಾಂಕ್ 7.05% ನೀಡುತ್ತದೆ. ಹಾಗೆಯೇ ಹಿರಿಯ ನಾಗರಿಕರು 300 ದಿನಗಳ ಹೂಡಿಕೆಗೆ 7.55% ಪಡೆಯುತ್ತಾರೆ.

ಹಾಗೆಯೆ ಇಂಡಿಯನ್ ಬ್ಯಾಂಕ್ ಕೂಡ ಉತ್ತಮ ಬಡ್ಡಿದರ ಘೋಷಣೆ ಮಾಡಿದೆ. 300 ದಿನಗಳ FD ಗೆ 7.05 % ಹಾಗೆಯೆ ಹಿರಿಯ ನಾಗರಿಕರಿಗೆ 7.55 % ನೀಡಲಿದೆ. ಹಾಗೆಯೆ ೭೦ ವರ್ಷ ಮೇಲ್ಪಟ್ಟವರಿಗೆ 7 .80 % ಘೋಷಣೆ ಮಾಡಿದೆ.

ನಿಮ್ಮ ಬೈಕ್ ಮತ್ತು ಕಾರುಗಳಿಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಬೇಕಾ? ಆನ್‌ಲೈನ್‌ನಲ್ಲೆ ಅಪ್ಲೈ ಮಾಡಿ

Fixed DepositPunjab & Sindh Bank special FD ರೇಟ್ಸ್

ದಿನ – ಬಡ್ಡಿದರ
222 ದಿನ 7.05%
333  ದಿನ 7.10%
444 ದಿನ 7.25%

ಮಹಿಳೆಯರು ಸ್ವಂತ ಉದ್ಯೋಗ ಶುರು ಮಾಡಲು ಸಿಗಲಿದೆ 3 ಲಕ್ಷ ಸಾಲ! ಇಂದೇ ಅರ್ಜಿ ಸಲ್ಲಿಸಿ

ಈ ಎಲ್ಲಾ ಅದ್ಬುತ ಯೋಜನೆಗಳ ಲಾಭಗಳನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ಬ್ಯಾಂಕುಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿವೆ . ಮುಖ್ಯವಾಗಿ ಈ ಎಲ್ಲಾ ಯೋಜನೆಗಳು ಜೂನ್ ತಿಂಗಳ ಒಳಗೆ ಅಂತ್ಯ ಕಾಣಲಿವೆ ಅಷ್ಟರೊಳಗೆ ಹೂಡಿಕೆ ಮಾಡುವುದು ಉತ್ತಮ

These 4 banks are offering attractive interest on fixed deposit money of senior citizens

Related Stories