ನಿಮ್ಮ ಬೈಕ್ ಮತ್ತು ಕಾರುಗಳಿಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಬೇಕಾ? ಆನ್‌ಲೈನ್‌ನಲ್ಲೆ ಅಪ್ಲೈ ಮಾಡಿ
ಭಾರತವೀಗ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಒಂದಾಗಿದೆ. ಅನೇಕ ದೇಶಗಳು ಭಾರತದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಿವೆ. ಹಾಗೆಯೆ ಭಾರತದಲ್ಲಿ ಕೂಡ ದಿನನಿತ್ಯದ ವಹಿವಾಟುಗಳು ಮುಗಿಲುಮುಟ್ಟಿವೆ.
ಇನ್ನು ವಾಹನದ ವಿಚಾರಕ್ಕೆ ಬಂದರೆ ಮನೆಗೊಂದು ಬೈಕು ಕಾರು (Bike and Car) ಬರುವ ದಿನಗಳು ಸನ್ನಿಹದಲ್ಲಿವೆ. ಹೌದು ದೇಶದಲ್ಲಿ ಬೈಕು ಕಾರಿಗಳ ಸಂಖ್ಯೆ ಹೆಚ್ಚಾದಂತೆ ಅದಕ್ಕೆ ತಮಗೆ ಬೇಕಾದ ನಂಬರ್ ಹಾಕಿಸುವ VIP ಸಂಸ್ಕ್ರತಿ ಕೂಡ ಹೆಚ್ಚಾಗಿದೆ.
ಇದಕ್ಕೆ RTO ಕೂಡ ಅನುಮತಿ ನೀಡುತ್ತೆ. ಇದು ಸರ್ಕಾರಕ್ಕೆ ಆದಾಯ ಕೂಡ ಆಗಿದೆ ಹಾಗಿದ್ದರೆ ಇಂದು ನಾವು ನಿಮಗೆ ಬೇಕಾದ ವಾಹನ ಸಂಖ್ಯೆಯನ್ನು ಬುಕ್ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿಸಲಿದ್ದೇವೆ.
₹100 ರೂಪಾಯಿ ಹೂಡಿಕೆ ಮಾಡಿ ಸಾಕು, ಲಕ್ಷ ಲಾಭ ಕೊಡುತ್ತೆ ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್
ಹೆಚ್ಚಿನ ಸಂದರ್ಭಗಳಲ್ಲಿ, ಫ್ಯಾನ್ಸಿ ಸಂಖ್ಯೆಯನ್ನು (Fancy Number) ಪಡೆಯುವ ಎಲ್ಲರು ಕೂಡ ನಿರ್ದಿಷ್ಟ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಉಳಿದ ಮೊತ್ತವನ್ನು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ RTO ಗೆ ಪಾವತಿಸಬೇಕಾಗುತ್ತದೆ. ಹಾಗೆ ಮಾಡಲು ವಿಫಲವಾದರೆ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ.
ನಿಮ್ಮ ವಾಹನಕ್ಕೆ ಫ್ಯಾನ್ಸಿ ನಂಬರ್ ನೀಡುವುದು ನಿಮ್ಮ RTO ಆಗಿದೆ ಹೀಗಾಗಿ ಸರ್ಕಾರದ ಈ ವೆಬ್ಸೈಟ್ ಮೂಲಕ ನೀವು ಬುಕ್ ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಸ್ಟೆಪ್ ಬೈ ಸ್ಟೆಪ್ ವಿಧಾನವನ್ನು ಪಾಲಿಸುವ ಮೂಲಕ ನೀವು ನಿಮಗೆ ಬೇಕಾದ ನಂಬರ್ ಲಭ್ಯತೆ ನೋಡಿ ಬುಕ್ ಮಾಡಬಹುದಾಗಿದೆ
ರೈತರಿಗೆ ಸಿಗಲಿದೆ 3 ಲಕ್ಷದವರೆಗೂ ಕಡಿಮೆ ಬಡ್ಡಿಯ ಸಾಲ! ಬಡ್ಡಿ ಮೇಲೆ ಸಬ್ಸಿಡಿ ಸಹ ಕೊಡಲಾಗುತ್ತಿದೆ
ವಿಧಾನ ಹೀಗಿದೆ
STEP -1: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಬಳಕೆದಾರರಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿ.(https://morth.nic.in/)
STEP -2 : ನಂತರ ನಿಮ್ಮ ಖಾತೆಯನ್ನು ರಚಿಸಿ ಮತ್ತು ಲಾಗ್ ಇನ್ ಮಾಡಿ.
STEP -3: ನಿಮ್ಮ ಪ್ರಾದೇಶಿಕ ಸಾರಿಗೆ ಕಚೇರಿಯನ್ನು (RTO) ಆಯ್ಕೆಮಾಡಿ ಮತ್ತು ಲಭ್ಯವಿರುವ ಪಟ್ಟಿಯಿಂದ ನಿಮ್ಮ ಆದ್ಯತೆಯ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆಮಾಡಿ. ನಿಮ್ಮ ಆದ್ಯತೆಯ ಅಂಕೆಗಳನ್ನು ನಮೂದಿಸುವ ಮೂಲಕ ವಿಐಪಿ ಸಂಖ್ಯೆಯ ಲಭ್ಯತೆಯನ್ನು ಸಹ ನೀವು ಪರಿಶೀಲಿಸಬಹುದು. ಪ್ರತಿ ಫ್ಯಾನ್ಸಿ ಸಂಖ್ಯೆಗೆ ಶುಲ್ಕವನ್ನು ಪ್ರದರ್ಶಿಸಲಾಗುತ್ತದೆ.
ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! 2ನೇ ಹಂತದ ಅರ್ಜಿ ಸಲ್ಲಿಕೆ ಶುರು
STEP -4: ನೋಂದಣಿ ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಆಯ್ಕೆ ಸಂಖ್ಯೆಯನ್ನು ಕಾಯ್ದಿರಿಸಿ.
STEP -5: ನಿಮ್ಮ ಆಯ್ಕೆಯ ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ಹರಾಜಿನಲ್ಲಿ ಭಾಗವಹಿಸಿ. ನಿಮ್ಮ ಬಿಡ್ ಅನ್ನು ನಮೂದಿಸಿ ಮತ್ತು ಸ್ಪರ್ಧಾತ್ಮಕ ಬಿಡ್‌ಗಳಿಗಾಗಿ ಅದನ್ನು ಮೇಲ್ವಿಚಾರಣೆ ಮಾಡಿ. ನಿಮ್ಮ ಬಿಡ್ ಅತ್ಯಧಿಕವಾಗಿದ್ದರೆ ನೀವು ಆ ಸಂಖ್ಯೆಯನ್ನು ಪಡೆಯುತ್ತೀರಿ.
STEP -6: ಇ-ಹರಾಜಿನ ನಂತರ, ನಂಬರ್ ಪ್ಲೇಟ್ ಪಡೆಯಲು ಪಾವತಿ ಮಾಡಿ.
ಇಷ್ಟು ಕೆಲಸ ಮಾಡಿದ ನಂತರ ನೀವು ನಿಮ್ಮ ನಂಬರ್ ನ ಸ್ಟೇಟಸ್ ಕೂಡ ಚೆಕ್ ಮಾಡಬಹುದಾಗಿದೆ.
Want fancy numbers for your bikes and cars, Apply online