Business News

₹100 ರೂಪಾಯಿ ಹೂಡಿಕೆ ಮಾಡಿ ಸಾಕು, ಲಕ್ಷ ಲಾಭ ಕೊಡುತ್ತೆ ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್

POST OFFICE RD SCHEME: ಹೂಡಿಕೆಯ ವಿಷಯ ಬಂದಾಗ ಎಲ್ಲರೂ ನೂರು ರೂಪಾಯಿಯನ್ನು ನಿರ್ಲಕ್ಷಿಸುವುದು ಸರ್ವೇ ಸಾಮಾನ್ಯ, ಹೀಗಿರುವಾಗ ಪೋಸ್ಟ್ ಆಫೀಸ್ (Post Office) ಬಿಡುಗಡೆ ಮಾಡಿರುವ ಹೊಸ ಯೋಜನೆಯಿಂದ ಕೇವಲ ₹100 ಹಣವನ್ನು ಹೂಡಿಕೆ ಮಾಡಿ ಕೆಲ ತಿಂಗಳಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸುವ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ.

ಹಾಗಾದ್ರೆ ಈ ಹೊಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇದರ ವಾರ್ಷಿಕ ಬಡ್ಡಿ ದರ ಹಾಗೂ ತೆರಿಗೆ ಎಷ್ಟಿರಲಿದೆ? ಎಂಬ ಸಂಕ್ಷಿಪ್ತ ವಿವರವನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ರೈತರಿಗೆ ಸಿಗಲಿದೆ 3 ಲಕ್ಷದವರೆಗೂ ಕಡಿಮೆ ಬಡ್ಡಿಯ ಸಾಲ! ಬಡ್ಡಿ ಮೇಲೆ ಸಬ್ಸಿಡಿ ಸಹ ಕೊಡಲಾಗುತ್ತಿದೆ

ಪೋಸ್ಟ್ ಆಫೀಸ್ RD ಯೋಜನೆ

ಪೋಸ್ಟ್ ಆಫೀಸ್ನಲ್ಲಿ ರೆಕರಿಂಗ್ ಡೆಪಾಸಿಟ್ ಖಾತೆ (Post Office Recurring Deposit Account) ಯನ್ನು ತೆರೆದು ಪ್ರತಿ ದಿನ ನೂರು ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ, ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ವಾರ್ಷಿಕವಾಗಿ ಬರೋಬ್ಬರಿ 6.7% ರಷ್ಟು ಬಡ್ಡಿ ಹಣವನ್ನು ನೀಡುತ್ತಾರೆ. ಯಾವುದೇ ರಿಸ್ಕ್ ಇಲ್ಲದೆ ನಿಮ್ಮ ಹೂಡಿಕೆಯನ್ನು ಸುರಕ್ಷಿತವಾಗಿ ಇರಿಸುವುದರ ಜೊತೆಗೆ ನಿಮ್ಮ ಆರ್ಥಿಕ ಇಷ್ಟಾರ್ಥಗಳನ್ನು ಪೂರೈಸುತ್ತಾರೆ.

ಪೋಸ್ಟ್ ಆಫೀಸ್ RD ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

1.ಪೋಸ್ಟ್ ಆಫೀಸ್ ನಲ್ಲಿ ರಿಕರಿಂಗ್ ಡೆಪಾಸಿಟ್ ಖಾತೆ ಒಂದನ್ನು ತೆರೆದು ಪ್ರತಿದಿನ 100 ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತ ಬಂದರೆ, ತಿಂಗಳಿಗೆ 3000 ಹಣವನ್ನು ಉಳಿತಾಯ ಮಾಡಬಹುದು.

2. ಕೇವಲ ₹100ಗಳಿಂದ ಕನಿಷ್ಠ ಹೂಡಿಕೆಯನ್ನು ಪ್ರಾರಂಭಿಸುವ ಸೌಲಭ್ಯವಿದೆ, ಆದರೆ ಗರಿಷ್ಠ ಹೂಡಿಕೆಗೆ (Maximum Investment) ಯಾವುದೇ ಮಿತಿ ಇರುವುದಿಲ್ಲ.

3.ಹೂಡಿಕೆದಾರರು ಒಂಟಿಯಾಗಿ ಅಥವಾ ಜಂಟಿಯಾಗಿ ಪೋಸ್ಟ್ ಆಫೀಸ್ ಆರ್ಡಿ ಖಾತೆಯನ್ನು ತೆರೆಯುವ ಅವಕಾಶವಿದೆ.

4.ಒಟ್ಟಿಗೆ ಮೂರು ಜನರ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆಯಬಹುದು. ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಖಾತೆಯನ್ನು 18 ವರ್ಷಕ್ಕಿಂತ ಕೆಳ ವಯಸ್ಕರಾದ ಹೆಸರಿನಲ್ಲಿ ತೆರೆದು ಹೂಡಿಕೆ ಮಾಡುವ ಅವಕಾಶವಿದೆ.

5.ಒಮ್ಮೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ 3 ವರ್ಷಗಳ ಬಳಿಕ, ಹೂಡಿಕೆಯ ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ. ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ನಲ್ಲಿ 12 ಕಂತಿನ (12 installment) ಹಣವನ್ನು ಪಾವತಿಸಿದ ಬಳಿಕ 50% ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಹೂಡಿಕೆದಾರರಿಗೆ ಪೋಸ್ಟ್ ಆಫೀಸ್ ಮಾಡಿಕೊಟ್ಟಿದೆ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! 2ನೇ ಹಂತದ ಅರ್ಜಿ ಸಲ್ಲಿಕೆ ಶುರು

ಹೀಗೆ ಪ್ರತಿದಿನ 100 ರೂಪಾಯಿ ಹಣವನ್ನು ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ (Post Office RD Schemes) ಹೂಡಿಕೆ ಮಾಡುವುದರಿಂದ ನಿಮ್ಮ ಹಣಕ್ಕೆ 6.7% ಬಡ್ಡಿ ದರವನ್ನು ನೀಡುವುದರ ಜೊತೆಗೆ ಸಂಪೂರ್ಣ ಸುರಕ್ಷತೆಯನ್ನು ಹೆಚ್ಚಿನ ತೆರಿಗೆ ಇಲ್ಲದೆ ಪೋಸ್ಟ್ ಆಫೀಸ್ನ ಆರ್ ಡಿ ಯೋಜನೆ ಒದಗಿಸಿ ಕೊಡಲಿದೆ.

invest 100 rupees, this post office new scheme will give a profit of lakhs

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories