ರೈತರಿಗೆ ಸಿಗಲಿದೆ 3 ಲಕ್ಷದವರೆಗೂ ಕಡಿಮೆ ಬಡ್ಡಿಯ ಸಾಲ! ಬಡ್ಡಿ ಮೇಲೆ ಸಬ್ಸಿಡಿ ಸಹ ಕೊಡಲಾಗುತ್ತಿದೆ

ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಹೊಸ ಯೋಜನೆಯಲ್ಲಿ ಅತೀ ಕಡಿಮೆ ಬಡ್ಡಿಗೆ 3 ಲಕ್ಷದವರೆಗೂ ಸಾಲ (Loan) ನೀಡಲಾಗುತ್ತದೆ.

Kisan Credit Loan : ರೈತರಿಗೆ ಅನುಕೂಲ ಆಗುವ ಹಾಗೆ ಹಲವು ಸೌಲಭ್ಯಗಳನ್ನು, ಆರ್ಥಿಕ ನೆರವುಗಳನ್ನು ಸರ್ಕಾರ ನೀಡುತ್ತಲೇ ಇರುತ್ತದೆ. ಇದೀಗ ಅವುಗಳಿಗೆ ಸಂಬಂಧಿಸಿದ ಹಾಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ಹೊಸ ಯೋಜನೆಯಲ್ಲಿ ಅತೀ ಕಡಿಮೆ ಬಡ್ಡಿಗೆ 3 ಲಕ್ಷದವರೆಗೂ ಸಾಲ (Loan) ನೀಡಲಾಗುತ್ತದೆ.

ಇನ್ನು ಯಾವುದೇ ಸೆಕ್ಯೂರಿಟಿ ಇಲ್ಲದೇ 1 ರಿಂದ 1.60 ಲಕ್ಷದವರೆಗೂ ಸಾಲ ನೀಡಲಾಗುತ್ತಿದೆ. ಈ ಸಾಲವನ್ನು ರೈತರು ಸ್ವಂತ ಉದ್ಯಮಕ್ಕೆ (Own Business) ಬಳಸಿಕೊಳ್ಳಬಹುದು, ತಮ್ಮ ಬದುಕು ಕಟ್ಟಿಕೊಳ್ಳಬಹುದು.

How To Get Kisan Credit Loan, Here is the Details

ಬೇರೆ ಯಾವುದೇ ಬ್ಯಾಂಕ್ ಇಂದ ಸಾಲ (Bank Loan) ಪಡೆದರೆ ಅದರ ಮೇಲೆ ಬೀಳುವ ಬಡ್ಡಿದರ ಹೆಚ್ಚು, ಹಾಗಾಗಿ ಸರ್ಕಾರದಿಂದ ಸಿಗುವ ಈ ಸೌಲಭ್ಯವನ್ನು ಪಡೆದು, ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಕೃಷಿಯ ಜೊತೆಗೆ ಬೇರೆ ಚಟುವಟಿಕೆ ಮಾಡಲು, ಜಾನುವಾರು ಸಾಕಾಣಿಕೆ, ಡೈರಿ ಉದ್ಯಮ ಇದ್ಯಾವುದನ್ನಾದರು ಶುರು ಮಾಡಬಹುದು. ಹಾಗಿದ್ದಲ್ಲಿ ಕಿಸಾನ್ ಕ್ರೆಡಿಟ್ ಸಾಲ ಪಡೆಯುವುದು ಹೇಗೆ? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ…

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! 2ನೇ ಹಂತದ ಅರ್ಜಿ ಸಲ್ಲಿಕೆ ಶುರು

ಕಿಸಾನ್ ಕ್ರೆಡಿಟ್ ಲೋನ್ ಎಂದರೇನು?

ಈ ಒಂದು ಲೋನ್ ಅನ್ನು ಕೇಂದ್ರ ಸರ್ಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ನೀಡಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದವರಿಗೆ 3 ಲಕ್ಷದವರೆಗು ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ.

ಜೊತೆಗೆ ರೈತರು ಈ ಹಣವನ್ನು ಬಳಸಿ ವ್ಯವಸಾಯದ ಕೆಲಸಗಳನ್ನು ಮಾಡಿಕೊಳ್ಳಬಹುದು. ಜೊತೆಗೆ ತಮ್ಮದೇ ಆದ ಸ್ವಂತ ಉದ್ಯಮವನ್ನಾದರು ಶುರು ಮಾಡಬಹುದು. ಇಂಥ ಸೌಲಭ್ಯವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ನೀಡಲಾಗುತ್ತದೆ.

ಕಿಸಾನ್ ಕ್ರೆಡಿಟ್ ಲೋನ್ ಬಡ್ಡಿದರ

ರೈತರಿಗೆ ಸಿಗುವ ಈ ಯೋಜನೆಯಲ್ಲಿ ಕಡಿಮೆ ಬಡ್ಡಿ ಸಾಲ ನೀಡಲಾಗುತ್ತಿದ್ದು, 3 ಲಕ್ಷದವರೆಗೂ ಸಾಲ ಪಡೆಯಬಹುದು. ಒಂದು ವೇಳೆ ಸಾಲ ಪಡೆದು, 1 ವರ್ಷದ ಒಳಗೆ ಮರುಪಾವತಿ ಮಾಡಿದರೆ, 4% ಬಡ್ಡಿದರವನ್ನು ಮಾತ್ರ ಪಾವತಿ ಮಾಡಬೇಕು. 2023ರ ನವೆಂಬರ್ ತಿಂಗಳಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನ ಈ ಹೊಸ ಬಡ್ಡಿದರವನ್ನು RBI ತಿಳಿಸಿತು. KCC ಮೂಲಕ ಈ ಕಡಿಮೆ ಅವಧಿಯ ಸಾಲವನ್ನು ರೈತರಿಗೆ ಕೊಡಲಾಗುತ್ತದೆ.

ಸಧ್ಯಕ್ಕೆ ಬ್ಯಾಂಕ್ ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ FY 2022-2023 ಹಾಗೂ FY 2023-2024 ನಲ್ಲಿ ಕೆಲವು ತಿದ್ದುಪಡಿ ತರಲಾಗಿದ್ದು ಬಡ್ಡಿ ಸಬ್‌ವೆನ್ಷನ್ ಸ್ಕೀಮ್ (ISS) ಅನ್ನೇ ಇನ್ನೊಮ್ಮೆ ಮುಂದುವರೆಸಲಾಗುತ್ತದೆ. ಈ ಮೂಲಕ ರೈತರು ಕಡಿಮೆ ಅವಧಿಯ ಸಾಲಕ್ಕೆ 7% ವರೆಗು ಬಡ್ಡಿ ಪಾವತಿ ಮಾಡಬಹುದು. ಸಾಲ ಕೊಡುವ ಸಂಸ್ಥೆ ಬಡ್ಡಿ ಮೇಲೆ ಸಬ್ಸಿಡಿ ಸಹ ಕೊಡುತ್ತದೆ. ಇನ್ನು ರೈತರು ಈ ಮೊತ್ತವನ್ನು ಡೈರಿ ಉದ್ಯಮ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ ಈ ಕೆಲಸಗಳಿಗೆ ಬಳಸಿಕೊಳ್ಳಬಹುದು.

ಮಹಿಳೆಯರು ಸ್ವಂತ ಉದ್ಯೋಗ ಶುರು ಮಾಡಲು ಸಿಗಲಿದೆ 3 ಲಕ್ಷ ಸಾಲ! ಇಂದೇ ಅರ್ಜಿ ಸಲ್ಲಿಸಿ

Kisan Credit Loanಅಗತ್ಯವಿರುವ ದಾಖಲೆಗಳು:

*ಐಡೆಂಟಿಟಿಗೆ ಆಧಾರ್ ಕಾರ್ಡ್, ಎಲೆಕ್ಷನ್ ಐಡಿ, ಪ್ಯಾನ್ ಕಾರ್ಡ್
*ಭೂಮಿಗೆ ಸಂಬಂಧಿಸಿದ ಪೂರ್ತಿ ದಾಖಲೆ
*ಕೃಷಿಯಿಂದ ಬರುವ ಆದಾಯ ಪ್ರಮಾಣ ಪತ್ರ
*ಪಾಸ್ ಪೋರ್ಟ್ ಸೈಜ್ ಫೋಟೋ
*ಕಿಸಾನ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಫಾರ್ಮ್

ಕೂಲಿ ಕಾರ್ಮಿಕರಿಗೆ ಒಲಿದು ಬಂತು ಅದೃಷ್ಟ! ಇನ್ಮುಂದೆ ಸಿಗಲಿದೆ ತಿಂಗಳಿಗೆ ₹3000 ಮಾಸಿಕ ಪಿಂಚಣಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಮೊದಲಿಗೆ ನೀವು ನಿಮ್ಮ ಬ್ಯಾಂಕ್ ನ ವೆಬ್ಸೈಟ್ ಗೆ ಭೇಟಿ ನೀಡಬೇಕು
*ಅಲ್ಲಿ ಬರುವ ಆಪ್ಶನ್ ಗಳ ಪೈಕಿ ಕಿಸಾನ್ ಕ್ರೆಡಿಟ್ ಕಾರ್ಡ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಆಗ ನಿಮಗೆ ಅಪ್ಲಿಕೇಶನ್ ಪೇಜ್ ಓಪನ್ ಆಗುತ್ತದೆ
*ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿದ ಬಳಿಕ submit ಬಟನ್ ಕ್ಲಿಕ್ ಮಾಡಿ
*ಬಳಿಕ ನಿಮಗೇ ಅರ್ಜಿ ಸ್ವೀಕೃತಿ ಸಂಖ್ಯೆ ಸಿಗುತ್ತದೆ
*ಎಲ್ಲವೂ ಸರಿ ಇದ್ದು, ಬ್ಯಾಂಕ್ ಕಡೆಯಿಂದ ಅರ್ಜಿ ಪರಿಶೀಲನೆ ಆದಾಗ ಯಾವುದೇ ತಪ್ಪು ಕಂಡುಬರದೇ ಇದ್ದರೆ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಸಾಲ ಸಿಗುತ್ತದೆ.

How To Get Kisan Credit Loan, Here is the Details