Bangalore News

ಮಹಿಳೆಯರು ಸ್ವಂತ ಉದ್ಯೋಗ ಶುರು ಮಾಡಲು ಸಿಗಲಿದೆ 3 ಲಕ್ಷ ಸಾಲ! ಇಂದೇ ಅರ್ಜಿ ಸಲ್ಲಿಸಿ

Story Highlights

ಈ ಯೋಜನೆಯ ಮೂಲಕ ಮಹಿಳೆಯರು ಸರ್ಕಾರದ ಕಡೆಯಿಂದ 3 ಲಕ್ಷದವರೆಗೂ ಸಾಲ ಸೌಲಭ್ಯ (Loan) ಪಡೆಯಬಹುದು

Ads By Google

Loan Scheme : ಸರ್ಕಾರವು ನಮ್ಮ ರಾಜ್ಯದ ಮಹಿಳೆಯರು ಆರ್ಥಿಕವಾಗಿ ಯಾರ ಮೇಲೂ ಅವಲಂಬಿಸಿರಬಾರದು ಎನ್ನುವ ಕಾರಣಕ್ಕೆ ಹಲವು ಸವಲತ್ತುಗಳ ಮತ್ತು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂಥ ಯೋಜನೆಗಳ ಪೈಕಿ ಉದ್ಯೋಗಿನಿ ಯೋಜನೆ ಕೂಡ ಒಂದು ಯೋಜನೆ ಆಗಿದೆ.

ಈ ಯೋಜನೆಯ ಮೂಲಕ ಮಹಿಳೆಯರು ಸರ್ಕಾರದ ಕಡೆಯಿಂದ 3 ಲಕ್ಷದವರೆಗೂ ಸಾಲ ಸೌಲಭ್ಯ (Loan) ಪಡೆಯಬಹುದು, ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..

ಯುವನಿಧಿ ಯೋಜನೆಯ ₹3000 ಹಣ ಪಡೆಯೋಕೆ ಬಂತು ಹೊಸ ಅಪ್ಡೇಟ್! ಈ ಸಲಹೆ ತಪ್ಪದೆ ಪಾಲಿಸಿ

ಉದ್ಯೋಗಿನಿ ಯೋಜನೆಯ ಉಪಯೋಗ:

*₹30,000 ರೂಪಾಯಿಗಳ ವರೆಗು ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಈ ಯೋಜನೆಯ ಮೂಲಕ ಸಾಲ ಸೌಲಭ್ಯ ಸಿಗುತ್ತದೆ

*ಮಹಿಳೆಯರು ಸ್ವಂತ ಉದ್ಯೋಗ, ಉದ್ಯಮ ಮಾಡಿ ತಮ್ಮ ಕಾಲಿನ ಮೇಲೆ ನಿಲ್ಲಬೇಕು ಎನ್ನುವುದೇ ಸರ್ಕಾರದ ಉದ್ದೇಶ

*30,000 ವರೆಗು Loan ಪಡೆಯಬಹುದು

*ನಮ್ಮ ರಾಜ್ಯದಲ್ಲಿದ್ದು, ಸ್ವಂತ ಕೆಲಸ, ಉದ್ಯಮ ಮಾಡಬೇಕು ಎಂದುಕೊಂಡಿರುವ ಮಹಿಳೆಯರಿಗಾಗಿ ಜಾರಿಗೆ ಬಂದಿರುವ ಯೋಜನೆ ಇದು.

ಉದ್ಯೋಗಿನಿ ಯೋಜನೆಗೆ ಅರ್ಹತೆ:

*ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರು ನಮ್ಮ ರಾಜ್ಯದ ಶಾಶ್ವತ ಪ್ರಜೆ ಆಗಿದ್ದು, ಸ್ವಂತ ಮನೆ (Own House) ಹೊಂದಿರಬೇಕು

*ಮಹಿಳೆಯರಿಗೆ ಮಾತ್ರ ಸಿಗುವ ಸಾಲ ಸೌಲಭ್ಯದ ಯೋಜನೆ ಇದು

*ಸಾಲ ಸೌಲಭ್ಯ ಪಡೆಯುವ ಮಹಿಳೆಯರು 18 ರಿಂದ 55 ವರ್ಷಗಳ ಒಳಗಿನವರಾಗಿರಬೇಕು

*ಉದ್ಯೋಗಿನಿ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ಪಡೆಯಲು, ಮಹಿಳೆಯರ ಬಳಿ ಸ್ವಂತ ಉದ್ಯಮ (Own Business) ಶುರು ಮಾಡಲು, ಸರ್ಟಿಫಿಕೇಟ್ ಇರಬೇಕು.

ಫ್ರೀ ಬಸ್ ಗೆ ಹತ್ತುವ ಮುನ್ನ ಈ ವಿಚಾರಕ್ಕೆ ಗಮನ‌ಕೊಡಿ! ಶಕ್ತಿ‌ಯೋಜನೆಯಲ್ಲಿ ಹೊಸ ನಿಯಮ‌ ಜಾರಿ

ಅಗತ್ಯವಿರುವ ದಾಖಲೆಗಳು:

*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಅಡ್ರೆಸ್ ಪ್ರೂಫ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಫೋನ್ ನಂಬರ್

ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ನಿಮ್ಮ Bank ಗೆ ಭೇಟಿ ನೀಡಬೇಕು

*ಅಲ್ಲಿನ ಅಧಿಕಾರಿಗಳನ್ನು ಕೇಳಿದರೆ ಉದ್ಯೋಗಿನಿ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತಾರೆ.

*ಬ್ಯಾಂಕ್ ಇಂದ ಉದ್ಯೋಗಿನಿ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಅನ್ನು ಕೂಡ ನೀಡುತ್ತಾರೆ.

*ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ ಬ್ಯಾಂಕ್ ನಲ್ಲಿ ಸಬ್ಮಿಟ್ ಮಾಡಿ. ಬ್ಯಾಂಕ್ ಇಂದ ಎಲ್ಲವೂ ವೆರಿಫೈ ಆದ ನಂತರ ಉದ್ಯೋಗಿನಿ ಯೋಜನೆಯ ಮೂಲಕ ಸಾಲ ಸಿಗುತ್ತದೆ.

Women will get 3 lakh loans to start their own business

Ads By Google
Share
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by
Bengaluru, Karnataka, India
Edited By: Satish Raj Goravigere