ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸುವುದು ಹೇಗೆ? ಹೀಗೆ ಮಾಡಿ, 15 ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ!
- 18 ವರ್ಷದ ಒಳಗಿನ ಮಕ್ಕಳಿಗೆ ಬೇಕು ಪ್ಯಾನ್ ಕಾರ್ಡ್
- ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಅವರ ಪ್ಯಾನ್ ಕಾರ್ಡ್ ಅಗತ್ಯ
- ಆನ್ಲೈನ್ ನಲ್ಲಿ ಅಪ್ಲೈ ಮಾಡಿ 15 ದಿನದಲ್ಲಿ ಮೈನರ್ ಪ್ಯಾನ್ ಕಾರ್ಡ್ ಪಡೆಯಿರಿ
Minor Pan Card : ಆದಾಯ ತೆರಿಗೆ ಇಲಾಖೆ ಭಾರತೀಯ ನಾಗರಿಕರಿಗೆ ಪ್ಯಾನ್ ಕಾರ್ಡ್ ಅನ್ನು ಒದಗಿಸುತ್ತದೆ. ಇದರಿಂದಾಗಿ ನಾವು ಆದಾಯ ತೆರಿಗೆ ಪಾವತಿ ಮಾಡುವುದಕ್ಕೆ ಸುಲಭವಾಗುತ್ತದೆ. ಜೊತೆಗೆ ಬ್ಯಾಂಕ್ (Bank Account) ಹಾಗೂ ಆಸ್ತಿಗೆ ಸಂಬಂಧಪಟ್ಟ ಯಾವುದೇ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ.
ಪ್ಯಾನ್ ಕಾರ್ಡ್ ಎನ್ನುವುದು ಕೇವಲ ವಯಸ್ಕರಿಗೆ ಮಾತ್ರ ಇರುವ ದಾಖಲೆ ಅಲ್ಲ. ಮಕ್ಕಳು ಕೂಡ ಪ್ಯಾನ್ ಕಾರ್ಡ್ (Pan Card) ಅನ್ನು ಹೊಂದಿರುವುದು ಬಹಳ ಮುಖ್ಯ.
ನಿಮ್ಮ ಚಿನ್ನದ ಒಡವೆ ಬಣ್ಣ ಕಳೆದುಕೊಳ್ಳದೆ ಚಕಚಕ ಅಂತ ಹೊಳಿಬೇಕಾ, ಹಾಗಾದ್ರೆ ಈ ಕೆಲಸ ಮಾಡಿ!
ಮಕ್ಕಳಿಗೂ ಬೇಕು ಪ್ಯಾನ್ ಕಾರ್ಡ್?
ಮಕ್ಕಳು ತೆರಿಗೆ ಪಾವತಿ ಮಾಡುವುದಿಲ್ಲ, ಹಾಗಾದ್ರೆ ಪ್ಯಾನ್ ಕಾರ್ಡ್ ಯಾಕೆ ಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ಪಾಲಕರು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಅಥವಾ ಹೂಡಿಕೆ ಮಾಡುವುದಕ್ಕೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದಕ್ಕೆ ಮಕ್ಕಳ ಹೆಸರಿನಲ್ಲಿಯೂ ಪ್ಯಾನ್ ಕಾರ್ಡ್ ಇರುವುದು ಬಹಳ ಮುಖ್ಯ.
ಇನ್ನು ನಿಮ್ಮ ಮಕ್ಕಳನ್ನ ನಾಮಿನಿ ಆಗಿ ಆಯ್ಕೆ ಮಾಡುತ್ತೀರಿ ಎಂದರೆ ಅವರ ಪ್ಯಾನ್ ಕಾರ್ಡನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಮಕ್ಕಳ ಹೆಸರಿನಲ್ಲಿ ಯಾವುದೇ ರೀತಿ ಆದಾಯವನ್ನು ನೀವು ಗಳಿಸುವುದು ಅಥವಾ ಹೂಡಿಕೆ ಮಾಡುವುದಿದ್ದರೂ ಮಕ್ಕಳ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ.
ಮೊಬೈಲ್ ಆಪ್ ಮೂಲಕ ಸಿಗುತ್ತೆ ಹೋಂ ಲೋನ್; ಪಡೆಯುವುದಕ್ಕೆ ಈ ರೀತಿ ಮಾಡಿ
18 ವರ್ಷದ ಒಳಗಿನ ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸುವುದು ಹೇಗೆ!
ಇದನ್ನು ಮೈನರ್ ಪ್ಯಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. 18 ವರ್ಷದ ಒಳಗಿನ ಮಕ್ಕಳಿಗೆ ಮಾಡಿಸುವ ಪ್ಯಾನ್ ಕಾರ್ಡ್ ಇದಾಗಿದ್ದು ಇದರಲ್ಲಿ ಮಗುವಿನ ಫೋಟೋ ಅಥವಾ ಸಹಿ ಇರುವುದಿಲ್ಲ. 18 ವರ್ಷದ ನಂತರ ಫೋಟೋ ಮತ್ತು ಸಹಿಯನ್ನು ಸೇರಿಸಿ ಪಾನ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು!
ಮಕ್ಕಳಿಗೆ ಪ್ಯಾನ್ ಕಾರ್ಡ್ ಮಾಡಿಸುದಿದ್ದರೆ ಗೂಗಲ್ ನಲ್ಲಿ ಆದಾಯ ಇಲಾಖೆ ಅಧಿಕೃತ ವೆಬ್ಸೈಟ್ (NSDL) ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ PAN ಅಪ್ಲಿಕೇಶನ್ ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಂತರ ನ್ಯೂ ಪ್ಯಾನ್ ಇಂಡಿಯನ್ ಸಿಟಿಜನ್ (Form 49A) ಆಯ್ಕೆ ಮಾಡಿಕೊಳ್ಳಿ ನಂತರ “ಇಂಡಿವಿಜುವಲ್” ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈಗ ಮಗುವಿನ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಇಮೇಲ್ ಐಡಿ ಯನ್ನು ಭರ್ತಿ ಮಾಡಬೇಕು. ಬಡಿಕ ಕೆಳಗೆ ಕಾಣಿಸುವ ಕ್ಯಾಪ್ಚ ನಂಬರನ್ನು ಹಾಕಬೇಕು. ಈಗ ಅರ್ಜಿ ಫಾರಂ ಸಲ್ಲಿಕೆ ಮಾಡಿ ಬಳಿಕ ನಿಮಗೆ ಒಂದು ಟೋಕನ್ ಸಂಖ್ಯೆಯನ್ನು ಕೊಡಲಾಗುತ್ತದೆ. ಅದನ್ನು ನೋಟ್ ಮಾಡಿ ಇಟ್ಟುಕೊಳ್ಳಿ.
ನಂತರ ಪೋಷಕರ ವಿವರಗಳನ್ನು ನಮೂದಿಸಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇದಕ್ಕೆ ಇರುವ ಶುಲ್ಕ 107 ರೂಪಾಯಿಗಳು ಮಾತ್ರ. ನಿಮ್ಮ ಅಪ್ಲಿಕೇಶನ್ ಪರಿಶೀಲನೆ ಮಾಡಿ ಎಲ್ಲವೂ ಸರಿಯಾಗಿದ್ದರೆ ಕೇವಲ 15 ದಿನಗಳಲ್ಲಿ ಪಾನ್ ಕಾರ್ಡ್ ನಿಮ್ಮ ಕೈ ಸೇರುತ್ತದೆ. ಅರ್ಜಿ ಸಲ್ಲಿಸಿದ 15 ದಿನಗಳ ಬಳಿಕ ನೀವು ಆನ್ಲೈನ್ ನಲ್ಲಿ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
Apply Online and Receive Minor Pan Card in 15 Days