Business News

ನಿಮ್ಮ ಚಿನ್ನದ ಒಡವೆ ಬಣ್ಣ ಕಳೆದುಕೊಳ್ಳದೆ ಚಕಚಕ ಅಂತ ಹೊಳಿಬೇಕಾ, ಹಾಗಾದ್ರೆ ಈ ಕೆಲಸ ಮಾಡಿ!

  • ಚಿನ್ನದ ಒಡವೆ ಬಣ್ಣ ಕಳೆದುಕೊಳ್ಳದೆ ಇರಲು ಇಲ್ಲಿದೆ ಟಿಪ್ಸ್
  • ನಿಮ್ಮ ಚಿನ್ನದ ಆಭರಣ ಬಹಳ ಬೇಗ ಬಣ್ಣ ಕಳೆದುಕೊಳ್ಳಲು ಇವೆ ಕಾರಣ
  • ಆಭರಣ ಧರಿಸಿ ಹಾಗೆಯೇ ಎತ್ತಿಡುವುದಕ್ಕಿಂತ ಸ್ವಚ್ಛಗೊಳಿಸುವುದು ಒಳ್ಳೆಯದು

Gold Jewellery : ಭಾರತೀಯರಿಗೆ ಆಭರಣ ಅಂದ್ರೆ ಪಂಚಪ್ರಾಣ. ಅದರಲ್ಲೂ ಚಿನ್ನದ ಆಭರಣಗಳನ್ನ ಧರಿಸುವುದು ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಕೂಡ ಬಹಳ ಇಷ್ಟದ ವಿಷಯ. ಅದರಲ್ಲೂ ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ ಸಾಕಷ್ಟು ಜನ ಚಿನ್ನವನ್ನು ಖರೀದಿ ಮಾಡುತ್ತಾರೆ

ಚಿನ್ನ ಎನ್ನುವುದು ಪ್ರತಿಷ್ಠೆಯ ಸಂಕೇತವಾಗಿದ್ದರೆ ಇನ್ನೊಂದು ಕಡೆ ಚಿನ್ನ ಅನ್ನುವುದು ಆರ್ಥಿಕ ಸಮಾಧಾನವು ಹೌದು. ಇನ್ನು ಚಿನ್ನ ತೆಗೆದುಕೊಂಡು ಎಷ್ಟು ವರ್ಷಗಳೇ ಕಳೆದಿರಲಿ ಅದು ಯಾವಾಗಲೂ ಹೊಸದರಂತೆ ಚಕ ಚಕ ಅಂತ ಹೊಳಿತಾ ಇರಬೇಕು. ಹಾಗಿದ್ರೆನೇ ಹೆಣ್ಣು ಮಕ್ಕಳಿಗೆ ಸಮಾಧಾನ.

ನಿಮ್ಮ ಚಿನ್ನದ ಒಡವೆ ಬಣ್ಣ ಕಳೆದುಕೊಳ್ಳದೆ ಚಕಚಕ ಅಂತ ಹೊಳಿಬೇಕಾ, ಹಾಗಾದ್ರೆ ಈ ಕೆಲಸ ಮಾಡಿ!

ಹಾಗಾದ್ರೆ ನಿಮ್ಮ ಚಿನ್ನ ಬಣ್ಣ ಕಳೆದುಕೊಳ್ಳದೆ ಚೆನ್ನಾಗಿ ಫಳಫಳ ಅಂತ ಹೊಳಿಯೋದಕ್ಕೆ ಏನು ಮಾಡಬೇಕು ಗೊತ್ತಾ?

ಮೊಬೈಲ್ ಆಪ್ ಮೂಲಕ ಸಿಗುತ್ತೆ ಹೋಂ ಲೋನ್; ಪಡೆಯುವುದಕ್ಕೆ ಈ ರೀತಿ ಮಾಡಿ

ಆಭರಣಗಳನ್ನು ಹೀಗೆ ಸಂಗ್ರಹಿಸಿ!

ಚಿನ್ನ ಬಹಳ ಮೃದುವಾಗಿರುವ ಲೋಹ. ಹಾಗಾಗಿ ಇದನ್ನ ನೀವು ಮನೆಯಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಯಾವುದೇ ಬೆಳ್ಳಿ ವಸ್ತುಗಳ ಜೊತೆಗೆ ಅಥವಾ ಬೆಳ್ಳಿ ಆಭರಣಗಳ ಜೊತೆಗೆ ಹಾಗೂ ತಾಮ್ರ ಮತ್ತು ಇತರ ಆಭರಣಗಳ ಜೊತೆಗೆ ಚಿನ್ನವನ್ನು ಸೇರಿಸಬೇಡಿ ಇದನ್ನ ಪ್ರತ್ಯೇಕವಾಗಿ ಸುರಕ್ಷಿತ ಪೆಟ್ಟಿಗೆಯಲ್ಲಿ ಸಂಗ್ರಹಿಸಿರಿ.

ಆಭರಣಗಳು ತೇವಾಂಶಗೊಳ್ಳದಂತೆ ನೋಡಿಕೊಳ್ಳಿ!

ಬಂಗಾರದ ಆಭರಣಗಳು ತೇವಾಂಶದ ಸಂಪರ್ಕಕ್ಕೆ ಬಂದರೆ ಅದರ ಹೊಳಪು ಕಡಿಮೆಯಾಗುತ್ತಾ ಬರುತ್ತದೆ. ಈ ರೀತಿ ಚಿನ್ನ ಮಸುಕಾಗಿ ಕಂಡರೆ ಚೆನ್ನಾಗಿ ಕಾಣಿಸುವುದಿಲ್ಲ ಅಥವಾ ಚಿನ್ನದ ಒಡವೆಯಂತೆ ಕಾಣಿಸುವುದಿಲ್ಲ. ಹೀಗೆ ಆಗದ ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಇದಕ್ಕಾಗಿ ನೀವು ಸಿಲಿಕ ಜೆಲ್ ಪ್ಯಾಕೆಟ್ಗಳನ್ನು ಚಿನ್ನ ಸಂಗ್ರಹಿಸುವ ಪೆಟ್ಟಿಗೆಯಲ್ಲಿ ಹಾಕಿ ಇದರಿಂದ ಚಿನ್ನ ತೇವಾಂಶವಿಲ್ಲದಂತೆ ಡ್ರೈ ಆಗಿ ಇರುತ್ತದೆ ಹಾಗೂ ಹೊಳಪನ್ನು ಕಳೆದುಕೊಳ್ಳುವುದಿಲ್ಲ.

ಒಂದು ಕೋಟಿ ಹೋಮ್ ಲೋನ್ ಪಡೆಯುವುದಾದರೆ ತಿಂಗಳ EMI ಎಷ್ಟು ಪಾವತಿಸಬೇಕು?

Gold

ಆಭರಣಗಳನ್ನ ಸ್ವಚ್ಛಗೊಳಿಸುವುದು!

ಹೋಗಿ ಬಂದ ತಕ್ಷಣ ಆಭರಣಗಳನ್ನು ತೆಗೆದು ಯಥಾವತ್ತಾಗಿ ಹಾಗೆ ಇಡುತ್ತಾರೆ. ಇಂತಹ ಕೆಲಸ ಮಾಡಬೇಡಿ ಯಾಕೆಂದರೆ ಧೂಳಿನ ಕಣಗಳು, ಬೆವರು ಆಭರಣಕ್ಕೆ ಅಂಟಿಕೊಂಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಭರಣಗಳನ್ನು ಸ್ವಚ್ಛಗೊಳಿಸಿ ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿರುವುದು ಒಳ್ಳೆಯದು.

ಬೆಳ್ಳಿಯ ಜೊತೆಗೆ ಬಂಗಾರ ಸೇರಿಸುವುದು ಬೇಡ!

ಬಂಗಾರವನ್ನು ಬೆಳ್ಳಿಯ ಆಭರಣದ ಜೊತೆಗೆ ಸೇರಿಸುವುದು ಒಳ್ಳೆಯದಲ್ಲ, ಬೆಳ್ಳಿಯ ಜೊತೆಗೆ ಬಂಗಾರವನ್ನು ಮಿಕ್ಸ್ ಮಾಡಿದರೆ ಬಂಗಾರದ ತೂಕ ಕಡಿಮೆ ಆಗಬಹುದು ಜೊತೆಗೆ ಬಣ್ಣ ಬದಲಾಗಬಹುದು, ಹಾಗಾಗಿ ರಾಸಾಯನಿಕ ಕ್ರಿಯೆಯ ಅಪಾಯವನ್ನು ತಪ್ಪಿಸುವುದಕ್ಕಾಗಿ ಚಿನ್ನದ ಆಭರಣಗಳನ್ನು ಬೇರೆ ಯಾವುದೇ ಲೋಹದ ಜೊತೆಗೆ ಸೇರಿಸದೆ ಪ್ರತ್ಯೇಕವಾಗಿ ಇಡುವುದು ಬಹಳ ಒಳ್ಳೆಯದು.

Tips to Keep Your Gold Jewellery Shining and Tarnish-Free

Related Stories