ಒಂದು ಕೋಟಿ ಹೋಮ್ ಲೋನ್ ಪಡೆಯುವುದಾದರೆ ತಿಂಗಳ EMI ಎಷ್ಟು ಪಾವತಿಸಬೇಕು?
- ಒಂದು ಕೋಟಿ ಹೋಮ್ ಲೋನ್ ಗೆ 30 ವರ್ಷಗಳ ಅವಧಿಗೆ EMI ಎಷ್ಟು
- ಒಂದು ಕೋಟಿ ಗೃಹ ಸಾಲಕ್ಕೆ ತಿಂಗಳ ಇಎಂಐ ಎಷ್ಟು ಪಾವತಿಸಬೇಕು
- ಸ್ವಂತ ಮನೆ ಮಾಡಿಕೊಳ್ಳಲು ಗೃಹ ಸಾಲ ಹಾಗೂ ಬಡ್ಡಿ ದರ
Home Loan: ಒಂದು ಸ್ವಂತ ಮನೆ ಕಟ್ಟಿಕೊಳ್ಳುವುದು ಸಾಕಷ್ಟು ಜನರ ಕನಸು ಅದರಲ್ಲೂ ಕೆಲವರು ಬಹಳ ದೊಡ್ಡ ಅಂದರೆ ಐಷಾರಾಮಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸುತ್ತಾರೆ.
ಉತ್ತಮ ಆದಾಯ ಹೊಂದಿದ್ರೆ, ಇಂತಹ ದೊಡ್ಡ ಮನೆ ನಿರ್ಮಾಣ ಮಾಡಿಕೊಳ್ಳುವುದು ಕಷ್ಟದ ಕೆಲಸವೇನು ಅಲ್ಲ. ಅದು ಅಲ್ಲದೆ ಬ್ಯಾಂಕಿನಲ್ಲಿ ಕೋಟಿ ರೂಪಾಯಿಗಳವರೆಗೂ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಆದ್ದರಿಂದ ಐಷಾರಾಮಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಆದರೆ ಹೀಗೆ ಸಾಲ ಮಾಡಿ ಮನೆ ಕಟ್ಟಿಸಿಕೊಳ್ಳುವುದಿದ್ದರೆ, ನೀವು ಯಾವ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳಬೇಕು. ಅದರ ಪ್ರಕ್ರಿಯೆ ಏನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ರೀತಿಯ ಬಡ್ಡಿ ದರ ವಿಧಿಸಲಾಗುತ್ತದೆ.
ಇವತ್ತು ನಾವು ಈ ಲೇಖನದಲ್ಲಿ ಒಂದು ಕೋಟಿ ರೂಪಾಯಿಗಳ ಗೃಹ ಸಾಲವನ್ನು (Home Loan) ತೆಗೆದುಕೊಂಡು ಮೂವತ್ತು ವರ್ಷಗಳಲ್ಲಿ ಅದನ್ನು ಮರುಪಾವತಿ ಮಾಡುವುದಿದ್ದರೆ ಪ್ರತಿ ತಿಂಗಳು ಎಷ್ಟು EMI ಭರಿಸಬೇಕಾಗುತ್ತದೆ ಎನ್ನುವ ಲೆಕ್ಕಾಚಾರವನ್ನು ನೋಡೋಣ.
ಆಸ್ತಿ, ಜಮೀನು, ಮನೆ ಪತ್ರವನ್ನು ಕಳೆದುಕೊಂಡಿದ್ದರೆ ಚಿಂತೆ ಬೇಡ, ಇಲ್ಲಿದೆ ಪರಿಹಾರ!
ಒಂದು ಕೋಟಿ ಮೌಲ್ಯದ ಹೋಮ್ ಲೋನ್ ಲೆಕ್ಕಾಚಾರ!
ನೀವು ಒಂದು ಕೋಟಿ ಮೌಲ್ಯದ ಮನೆ ನಿರ್ಮಾಣ ಮಾಡುತ್ತೀರಿ ಎಂದಾದರೆ ಬ್ಯಾಂಕ್ನಿಂದ 80% ನಷ್ಟು ಸಾಲ ಪಡೆದುಕೊಳ್ಳಬಹುದು ಅಂದರೆ 80 ಲಕ್ಷ ರೂಪಾಯಿಗಳವರೆಗೆ ಗೃಹ ಸಾಲ ನಿಮಗೆ ಸಿಗುತ್ತದೆ. ಆಸ್ತಿ ಬೆಲೆಯ ಶೇಕಡ 20 % ಅಥವಾ 20 ಲಕ್ಷ ರೂಪಾಯಿಗಳನ್ನು ನೀವೇ ಹೊಂದಿಸಬೇಕಾಗುತ್ತದೆ.
ಇನ್ನು ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡರೆ ಪ್ರತಿ ತಿಂಗಳು ಪಾವತಿಸಬೇಕಾದ EMI ಮೊತ್ತ ತುಸು ಕಡಿಮೆ ಬರುತ್ತದೆ ಎನ್ನಬಹುದು. ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ಗೃಹ ಸಾಲಕ್ಕೆ ಶೇಕಡ 8.5% ನಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸಲಾಗುತ್ತದೆ.
ಇನ್ನೊಬ್ಬ ವ್ಯಕ್ತಿಯ ಮಾಸಿಕ ಆದಾಯದ 50% ನಷ್ಟು ಮಾತ್ರ ಸಾಲ ತೆಗೆದುಕೊಳ್ಳಬೇಕು. ಅದನ್ನ ಮೀರಿ ಸಾಲು ತೆಗೆದುಕೊಳ್ಳುವುದು ಆರ್ಥಿಕವಾಗಿ ಸುರಕ್ಷಿತವಲ್ಲ ಎಂದು ಬ್ಯಾಂಕ್ ಸೂಚಿಸುತ್ತದೆ.
ಸಿಬಿಲ್ ಸ್ಕೋರ್ ಜಾಸ್ತಿ ಇದಿಯಾ? ಹಾಗಾದ್ರೆ ನಿಮಗೆ ಈ ಎಲ್ಲಾ ಪ್ರಯೋಜನ ಸಿಗುತ್ತೆ
ಈಗ 80 ಲಕ್ಷ ರೂಪಾಯಿಗಳನ್ನು ಸಾಲ ಪಡೆದುಕೊಂಡಿದ್ದೀರಿ ಎಂದು ಭಾವಿಸೋಣ. ಮೊದಲಿಗೆ ವಾರ್ಷಿಕ ಬಡ್ಡಿ ದರವನ್ನು 12ರಿಂದ ಭಾಗಿಸಬೇಕು ಉದಾಹರಣೆಗೆ. 8.5/100/12= 0.007083 . 30 ವರ್ಷಗಳು* 12 =360 ತಿಂಗಳುಗಳು. ಈ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು ಪಾವತಿಸಬೇಕಾದ EMI ಮೊತ್ತ 61500 ರೂಪಾಯಿಗಳು.
ಈಗ ನೀವು ಇಷ್ಟು ಹಣವನ್ನು ಈ ಎಂಐ ಆಗಿ ಪಾವತಿಸಬೇಕು ಅಂದರೆ ನಿಮ್ಮ ಮಾಸಿಕ ಆದಾಯ, 1,53,750 ರೂಪಾಯಿಗಳಾಗಿರಬೇಕು (ಸ್ಯಾಲರಿಯ 40% ನಷ್ಟು ಸಾಲ) ಅಂದರೆ ನಿಮ್ಮ ವಾರ್ಷಿಕ ವೇತನ 1,53,750*12=1845000ರೂ.
ಸ್ಟೇಟ್ ಬ್ಯಾಂಕಿನಲ್ಲಿ 2,500 ರೂಪಾಯಿಯಿಂದ 1 ಲಕ್ಷ ರೂಪಾಯಿ ದುಡಿಯೋ ಸ್ಕೀಮ್
ಇನ್ನು ಸ್ಟ್ಯಾಂಪ್ ಡ್ಯೂಟಿ ಹಾಗೂ ರಿಜಿಸ್ಟರ್ ಗಾಗಿ ಆಸ್ತಿ ಮೌಲ್ಯದ ಶೇಕಡ 6-8 ಮೀಸಲಿಡಬೇಕು. ಅಂದ್ರೆ ಶುಲ್ಕ ಪಾವತಿಸಲು ಆರರಿಂದ ಎಂಟು ಲಕ್ಷ ವೆಚ್ಚವಾಗುತ್ತದೆ. ಇದರ ಜೊತೆಗೆ ಕಾನೂನಿನ ನಿರ್ವಹಣಾ ವೆಚ್ಚ, ಇಂಟೀರಿಯರ್ ಹಾಗೂ ನಿಮಗೆ ಬೇಕಾಗಿರುವ ಇನ್ನಷ್ಟು ವ್ಯವಸ್ಥೆ ಗಳಿಗಾಗಿ ಹೆಚ್ಚುವರಿ ಹಣವನ್ನು ಮೀಸಲಿಡಬೇಕು.
What Will Be the Monthly EMI for a 1 Crore Home Loan