ಆಸ್ತಿ, ಜಮೀನು, ಮನೆ ಪತ್ರವನ್ನು ಕಳೆದುಕೊಂಡಿದ್ದರೆ ಚಿಂತೆ ಬೇಡ, ಇಲ್ಲಿದೆ ಪರಿಹಾರ!
- ಆಸ್ತಿ ಪತ್ರ ಕಳ್ಳತನ ಅಥವಾ ಕಳೆದುಕೊಂಡಿದ್ದರೆ ಚಿಂತೆ ಬೇಡ.
- ಆಸ್ತಿ ಪತ್ರ ಕಳೆದು ಹೋದರು ಕೂಡ ಸುಲಭವಾಗಿ ಸಿಗುತ್ತೆ.
- ಕಳೆದು ಹೋಗಿರುವ ಆಸ್ತಿ ಪತ್ರವನ್ನು ಮತ್ತೆ ಪಡೆದುಕೊಳ್ಳಲು ವಿಧಾನ ಇಲ್ಲಿದೆ.
Property Documents : ನಿಮ್ಮ ಬಳಿ ಯಾವುದೇ ಪ್ರಾಪರ್ಟಿ ಇರಲಿ ಆದರೆ ಅದು ನಿಮ್ಮದೇ ಪ್ರಾಪರ್ಟಿ ಅಂತ ಹೇಳಿಕೊಳ್ಳುವುದಕ್ಕೆ ಆ ಪ್ರಾಪರ್ಟಿಯ ಡಾಕ್ಯುಮೆಂಟ್ ಗಳು ನಿಮ್ಮ ಬಳಿ ಸುರಕ್ಷಿತವಾಗಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
ಸಾಕಷ್ಟು ಬಾರಿ ಪ್ರಾಪರ್ಟಿ ಡಾಕ್ಯೂಮೆಂಟ್ ಗಳು ಕಳೆದು ಹೋದ ನಂತರ, ಆ ಆಸ್ತಿಯನ್ನು ಬೇರೆಯವರು ತಮ್ಮದೇ ಎಂಬುದಾಗಿ ಅನಧಿಕೃತವಾಗಿ ಹೇಳಿಕೊಂಡು ಆಸ್ತಿಯನ್ನು ಹೊಂದಿರುವವರಿಗೆ ಮೋಸ ಮಾಡಿರುವಂತಹ ಘಟನೆಗಳು ಸಾಕಷ್ಟು ಬಾರಿ ನಡೆದಿವೆ.

ಹೀಗಾಗಿ ಡಾಕ್ಯುಮೆಂಟ್ಗಳು ನಿಮ್ಮ ಬಳಿ ಇಲ್ಲ ಎಂದಾದಲ್ಲಿ ಅಥವಾ ಕಳೆದುಹೋದಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ನೀವು ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
ಸಂಬಳ ಕಡಿಮೆ ಅಂತ ಚಿಂತೆ ಬೇಡ, ಈ ಬ್ಯಾಂಕಿನಲ್ಲಿ ನಿಮಗೂ ಸಿಗುತ್ತೆ ಪರ್ಸನಲ್ ಲೋನ್
ಪ್ರಾಪರ್ಟಿ ಪತ್ರಗಳು ಕಳೆದುಹೋದಲ್ಲಿ ಇದನ್ನ ಫಾಲೋ ಮಾಡಿ!
ಒಂದು ವೇಳೆ ಯಾರೇ ಆಗಲಿ ನಿಮ್ಮ ಆಸ್ತಿ ಪತ್ರವನ್ನು ಕದ್ದಿದ್ದಲ್ಲಿ ಅಥವಾ ಏನೇ ಆಗಿದ್ದಲ್ಲಿ ಮೊದಲಿಗೆ ನೀವು ಪೊಲೀಸ್ ಠಾಣೆಗೆ ಹೋಗಿ ಎಫ್ ಐ ಆರ್ ದಾಖಲಿಸಿ. ಸ್ಥಳೀಯ ಪೊಲೀಸರು ನಿರಾಕರಿಸಿದರೆ ಆನ್ಲೈನ್ ಮೂಲಕ ಕೂಡ ನೀವು ಇದನ್ನು ದಾಖಲಿಸಬಹುದಾಗಿದ್ದು, ಪೊಲೀಸರು ಇದನ್ನ ಹುಡುಕುವ ಪ್ರಯತ್ನವನ್ನು ಮಾಡುತ್ತಾರೆ ಅಥವಾ ಸಿಗದೇ ಹೋದಲ್ಲಿ ಕಂಡು ಬಂದಿಲ್ಲ ಎನ್ನುವಂತಹ ಸರ್ಟಿಫಿಕೇಟ್ ಅನ್ನು ಕೂಡ ಅವರೇ ನೀಡ್ತಾರೆ.
ಇದಾದ ನಂತರ ನೀವು ಆಸ್ತಿ ನಷ್ಟವಾಗಿದೆ ಎನ್ನುವುದನ್ನ ಜಾಹೀರಾತಿನ ಮೂಲಕ ಕೂಡ ಪ್ರಕಟಿಸಬೇಕಾಗಿರುತ್ತದೆ. ಆಸ್ತಿ ನಷ್ಟ ಹಾಗೂ ಅದರ ಸಂಪೂರ್ಣ ವಿವರಗಳನ್ನು ಈ ಜಾಹೀರಾತಿನಲ್ಲಿ ನೀವು ದಾಖಲಿಸಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ಸಿಬಿಲ್ ಸ್ಕೋರ್ ಜಾಸ್ತಿ ಇದಿಯಾ? ಹಾಗಾದ್ರೆ ನಿಮಗೆ ಈ ಎಲ್ಲಾ ಪ್ರಯೋಜನ ಸಿಗುತ್ತೆ
ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ 15 ದಿನಗಳ ಕಾಲ ನೀವು ಕಾಯಬೇಕಾಗಿರುತ್ತದೆ. ಈ ಜಾಹೀರಾತನ್ನು ನೋಡಿದ ನಂತರ ಒಂದು ವೇಳೆ ಯಾರಾದರೂ ಆಸ್ತಿ ಪತ್ರವನ್ನು ಹೊಂದಿದ್ದರೆ ಅದನ್ನು ನಿಮಗೆ ಮರಳಿ ತಂದು ಕೊಡುವಂತಹ ಕೆಲಸವನ್ನು ಮಾಡುತ್ತಾರೆ.
ಸಿಗದೇ ಹೋದಾಗ ಆಸ್ತಿಯನ್ನು ನೀವು ಮೊದಲು ಎಲ್ಲಿ ನೋಂದಾಯಿಸಿದ್ದೀರೋ ಅದೇ ಸಬ್ ರಿಜಿಸ್ಟ್ರಾರ್ ಆಫೀಸ್ ಗೆ ಹೋಗಿ ನಕಲಿ ಪತ್ರಕ್ಕಾಗಿ ಅರ್ಜಿ ಸಲ್ಲಿಸ ಬೇಕಾಗಿರುತ್ತದೆ.
ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
ಅರ್ಜಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಲಾಗಿರುವಂತಹ ಎಫ್ ಐ ಆರ್ ಡೀಟೇಲ್ಸ್ ಹಾಗೂ ಜಾಹೀರಾತಿನ ಪ್ರತಿಯೊಂದು ಕೂಡ ಲಗತ್ತಿಸಬೇಕಾಗಿರುತ್ತದೆ. 15 ರಿಂದ 20 ದಿನಗಳ ಒಳಗಾಗಿ ನೀವು ಅರ್ಜಿ ಸಲ್ಲಿಸಿರುವಂತಹ ನಕಲಿ ಆಸ್ತಿ ಪತ್ರವನ್ನು ನೀವು ಪಡೆದುಕೊಳ್ಳಬಹುದಾಗಿದೆ.
Lost Your Property, Land, or House Documents, Here’s the Solution