ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
ಕಳ್ಳತನ ಆಗಿರುವಂತಹ ಚಿನ್ನಕ್ಕೂ ಕೂಡ ನೀವು ಇನ್ಸೂರೆನ್ಸ್ ಮಾಡಬಹುದಾಗಿದ್ದು, ಇದರಿಂದ ಚಿನ್ನ ಕಳ್ಳತನ ಆದರೂ ಕೂಡ ನಿಮ್ಮ ಚಿನ್ನದ ಮೌಲ್ಯದ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ.
- ಚಿನ್ನ ಕಳ್ಳತನ ಆದ್ರೆ ಇನ್ಮುಂದೆ ತಲೆ ಬಿಸಿ ಇಲ್ಲ, ಇಲ್ಲಿದೆ ಮಾಹಿತಿ
- ಚಿನ್ನದ ಮೇಲೆ ಕೂಡ ಇರುತ್ತೆ ಇನ್ಸೂರೆನ್ಸ್, ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
- ಕಳ್ಳತನ ಆದ ಚಿನ್ನಕ್ಕೆ ದುಡ್ಡು ಬೇಕು ಅಂದ್ರೆ ಈ ರೀತಿ ಮಾಡಿ.
Gold Insurance : ಭಾರತದಲ್ಲಿ ಚಿನ್ನಕ್ಕಿರುವಂತಹ ಮೌಲ್ಯ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ಭಾರತದ ಮಹಿಳೆಯರು ಪ್ರತಿಯೊಂದು ಹಬ್ಬ ಹರಿದಿನಗಳಿಗೂ ಕೂಡ ಶುಭಸೂಚಕವಾಗಿ ಚಿನ್ನವನ್ನು ಖರೀದಿ ಮಾಡುವಂತಹ ಕೆಲಸವನ್ನು ಮಾಡ್ತಾರೆ. ಚಿನ್ನ ಖರೀದಿ (Buy Gold) ಮಾಡೋದ್ರಿಂದ ಆ ಶುಭ ಸಮಾರಂಭ ಅಥವಾ ಕಾರ್ಯಕ್ರಮ ಇನ್ನಷ್ಟು ಶುಭವಾಗುತ್ತದೆ ಎನ್ನುವುದು ಅವರ ನಂಬಿಕೆ ಆಗಿರುತ್ತದೆ.
ಇದೇ ಕಾರಣಕ್ಕಾಗಿ ಚಿನ್ನದ ಆಮದಿನ ವಿಚಾರಕ್ಕೆ ಬಂದರೆ ಪ್ರತಿ ವರ್ಷ ಭಾರತ 800 ರಿಂದ 900 ಟನ್ಗಳಷ್ಟು ಚಿನ್ನವನ್ನ ಆಮದು ಮಾಡಿಕೊಳ್ಳುತ್ತದೆ. ಚಿನ್ನದ ವಿಚಾರಕ್ಕೆ ಬಂದರೆ ಜಾಗತಿಕ ಮಟ್ಟದಲ್ಲಿ ಭಾರತ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿರುವಂತಹ ದೇಶವಾಗಿದ್ದು, ಅದೇ ರೀತಿಯಲ್ಲಿ ಇಲ್ಲಿ ಚಿನ್ನದ ಕಳ್ಳತನ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ನಡೆಯುತ್ತೆ.
ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ
ಹೀಗಾಗಿ ಈ ವಿಚಾರದಲ್ಲಿ ಕೂಡ ಚಿನ್ನವನ್ನು ಖರೀದಿ ಮಾಡುವವರು ಸ್ವಲ್ಪಮಟ್ಟಿಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಇಂತಹ ಕಳ್ಳತನದ ಸಂದರ್ಭದಲ್ಲಿ ಸಾಕಷ್ಟು ಪ್ರಾಣ ಹಾನಿಯಾಗಿರುವಂತಹ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದಿವೆ. ಅದನ್ನು ಹೊರತುಪಡಿಸಿ ಮಾತನಾಡುವುದಾದರೆ ಕಳ್ಳತನ ಆಗಿರುವಂತಹ ಚಿನ್ನಕ್ಕೂ ಕೂಡ ನೀವು ಇನ್ಸೂರೆನ್ಸ್ (Gold Insurance) ಮಾಡಬಹುದಾಗಿದ್ದು, ಇದರಿಂದ ಚಿನ್ನ ಕಳ್ಳತನ ಆದರೂ ಕೂಡ ನಿಮ್ಮ ಚಿನ್ನದ ಮೌಲ್ಯದ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಚಿನ್ನಕ್ಕೆ ಇನ್ಸೂರೆನ್ಸ್!
ಕೇವಲ ಕಳ್ಳತನ ಅಂತ ಮಾತ್ರ ಅಲ್ಲ ಯಾವುದೇ ರೀತಿಯ ಪ್ರಕೃತಿ ವಿಕೋಪಕ್ಕೆ ಒಳಗಾಗಿ ನಿಮ್ಮ ಚಿನ್ನ ಹಾನಿಯಾದ್ರು ಅಥವಾ ಕಳೆದು ಹೋದ್ರು ಕೂಡ ಆ ಇನ್ಸೂರೆನ್ಸ್ ನಿಮಗೆ ನಿಮ್ಮ ನಷ್ಟವನ್ನು ಭರಿಸುವಂತಹ ಕೆಲಸವನ್ನು ಮಾಡುತ್ತದೆ.
ಮಹಿಳೆಯರೆ, ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದನೆ ಮಾಡಿ! ಇಲ್ಲಿದೆ ಐಡಿಯಾ
ಯಾವುದೇ ಬ್ರಾಂಡೆಡ್ ಚಿನ್ನದ ಮಳಿಗೆಯಲ್ಲಿ ನೀವು ಚಿನ್ನವನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ಚಿನ್ನದ ಮೇಲೆ ಇನ್ಸೂರೆನ್ಸ್ ಇದೆಯಾ ಎನ್ನುವುದನ್ನು ಖಚಿತಪಡಿಸಿಕೊಂಡು ನಂತರ ಖರೀದಿ ಮಾಡಿ. ಒಂದು ವೇಳೆ ಚಿನ್ನ ಕಳ್ಳತನ ಆದರೆ ಅದರ ವಿರುದ್ಧ ನೀವು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ನೀಡಬೇಕಾಗಿರುತ್ತದೆ.
ಕಂಪ್ಲೇಂಟ್ ನೀಡಿದ ನಂತರ ಪೊಲೀಸ್ ಸ್ಟೇಷನ್ ಅವರು ಚಿನ್ನ ಕಳ್ಳತನವಾಗಿದೆ ಎನ್ನುವಂತಹ ಒಂದು ಅಧಿಕೃತ ಲೆಟರ್ ಅನ್ನು ನೀಡುತ್ತಾರೆ. ಆ ಲೆಟರ್ ಅನ್ನು ನೀವು ಚಿನ್ನ ಖರೀದಿ ಮಾಡಿರುವಂತಹ ಚಿನ್ನದ ಅಂಗಡಿಗೆ ಹೋಗಿ ನೀಡಿದ್ರೆ, ಚಿನ್ನದ ಮೇಲಿನ ಇನ್ಸೂರೆನ್ಸ್ ನಿಯಮಗಳ ಪ್ರಕಾರವಾಗಿ ಆ ಚಿನ್ನದ ಮೌಲ್ಯದ (Gold Rate) ಹಣವನ್ನು ಅವರು ನಿಮಗೆ ನೀಡುತ್ತಾರೆ. ಈ ಮೂಲಕ ನಿಮ್ಮ ನಷ್ಟದ ಪರಿಹಾರ ತಕ್ಷಣವೇ ಸಿಕ್ಕಿಬಿಡುತ್ತದೆ.
Get Your Money Back with Gold Insurance in Case of Gold Theft