ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ

ಒಂದು ವೇಳೆ ಸಿಬಿಲ್ ಸ್ಕೋರ್ ಜೀರೋ ಅಥವಾ ಮೈನಸ್ (Zero Cibil Score) ಆಗಿದ್ದಲ್ಲಿ ಅಂತಹ ವ್ಯಕ್ತಿಗೆ ಬ್ಯಾಂಕುಗಳು ಬಹುತೇಕ ಸಾಲವನ್ನ ನೀಡುವುದೇ ಅನುಮಾನ.

- - - - - - - - - - - - - Story - - - - - - - - - - - - -
  • ಕ್ರೆಡಿಟ್ ಸ್ಕೋರ್ ಇಂಪ್ರೂವ್ ಮಾಡಿಕೊಳ್ಳುವ ಸುಲಭ ವಿಧಾನ.
  • ಸಿಬಿಲ್ ಸ್ಕೋರ್ ಜೀರೋ ಇದ್ರೂ ಸಿಗುತ್ತೆ ಈಸಿ ಲೋನ್.
  • ಸಿಬಿಲ್ ಸ್ಕೋರ್ ಮೈನಸ್ ಆಗಿದ್ರು ಬ್ಯಾಂಕ್ ಸಾಲ ಪಡೆದುಕೊಳ್ಳುವ ಸುಲಭ ವಿಧಾನ.

ಯಾವುದೇ ರೀತಿಯ ಬ್ಯಾಂಕಿನಿಂದ ಸಾಲವನ್ನು (Bank Loan) ಪಡೆದುಕೊಳ್ಳುವುದಕ್ಕೆ ಪ್ರಮುಖವಾಗಿ ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಯ ಕ್ರೆಡಿಟ್ ಸ್ಕೋರ್ (Credit Score) ಅಥವಾ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು.

ಇದು ಒಬ್ಬ ವ್ಯಕ್ತಿಯ ಸಾಲವನ್ನು ಮರುಪಾವತಿ ಮಾಡುವಂತಹ ಸಾಮರ್ಥ್ಯದ ಅಂಕವಾಗಿರುತ್ತದೆ. ಒಂದು ವೇಳೆ ಇದು ಜೀರೋ ಅಥವಾ ಮೈನಸ್ (Zero Cibil Score) ಆಗಿದ್ದಲ್ಲಿ ಅಂತಹ ವ್ಯಕ್ತಿಗೆ ಬ್ಯಾಂಕುಗಳು ಬಹುತೇಕ ಸಾಲವನ್ನ ನೀಡುವುದೇ ಅನುಮಾನ.

ಆದರೆ ಕೆಲವು ಬ್ಯಾಂಕುಗಳು ಇಂತಹ ಸಂದರ್ಭಗಳಲ್ಲಿ ಕೂಡ ನಿಮಗೆ ಲೋನ್ (Loan) ನೀಡುವಂತಹ ಅವಕಾಶವನ್ನು ಹೊಂದಿರುತ್ತವೆ.

ನಿಮ್ಮ ಸಿಬಿಲ್ ಸ್ಕೋರ್ ಜೀರೋ ಇದ್ರೂ ಲೋನ್ ಸಿಗುತ್ತಾ? ಹಾಗಾದ್ರೆ ಪಡೆಯೋದು ಹೇಗೆ

ಮಹಿಳೆಯರೆ, ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದನೆ ಮಾಡಿ! ಇಲ್ಲಿದೆ ಐಡಿಯಾ

ಒಂದು ವೇಳೆ ನೀವು ಯಾವುದೇ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳದೆ ಹೋದಲ್ಲಿ, ಇಲ್ಲವೇ ಯಾವುದೇ ಸಾಲವನ್ನು ಪಡೆದುಕೊಳ್ಳುವುದಕ್ಕೆ ಪ್ರಾರಂಭ ಮಾಡಿಲ್ಲದೆ ಹೋದಲ್ಲಿ ಆಗಲು ಕೂಡ ಇದೇ ರೀತಿ ಇರುತ್ತೆ. ಇದರ ಜೊತೆಗೆ ನೀವು ಸಾಲವನ್ನ ಪಡೆದುಕೊಂಡು ಸರಿಯಾದ ರೀತಿಯಲ್ಲಿ ಅದನ್ನ ಮರುಪಾವತಿ ಮಾಡಬಹುದು.

ನಿಮ್ಮ ಕ್ರೆಡಿಟ್ ಸ್ಕೋರ್ ಮೈನಸ್ ಗೆ ಬಂದು ನಿಲ್ಲುತ್ತೆ ಇದನ್ನ ಬ್ಯಾಂಕಿಂಗ್ ಭಾಷೆಯಲ್ಲಿ ಜೀರೋ ಎಂಬುದಾಗಿ ಹೇಳಲಾಗುತ್ತದೆ. ಸಾಮಾನ್ಯವಾಗಿ ಸಿಬಿಲ್ ಸ್ಕೋರ್ 300 ರಿಂದ 900 ಅಂಕಗಳ ವರೆಗೆ ಇರುತ್ತದೆ. 750ಕ್ಕಿಂತ ಮೇಲಿದ್ದರೆ ಅದನ್ನ ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ನೀಡುವುದಕ್ಕೆ ಯೋಗ್ಯವಾದ ಮಾಪನವಾಗಿದೆ.

Credit Score

ಜೀರೋ ಸಿಬಿಲ್ ಸ್ಕೋರ್ ಇದ್ರು ಲೋನ್ ಪಡೆದುಕೊಳ್ಳುವುದು ಹೇಗೆ?

ಈ ಸಂದರ್ಭದಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಲೋನ್ ಪಡೆದುಕೊಳ್ಳುವಂತಹ ಕೆಲಸವನ್ನು ಮಾಡಬೇಕು. ಯಾಕೆಂದ್ರೆ ಯಾವುದಾದ್ರೂ ಲೋನ್ ಪಡೆದುಕೊಂಡು ಅದನ್ನು ಸರಿಯಾದ ಸಮಯಕ್ಕೆ ಕಟ್ಟಿದಲ್ಲಿ ಮಾತ್ರ ನಿಮ್ಮ ಸಿಬಿಲ್ ಸ್ಕೋರ್ ಇಂಪ್ರೂವ್ ಆಗುತ್ತೆ.

ಫಿಕ್ಸೆಡ್ ಡೆಪಾಸಿಟ್ ಇದ್ರೆ ಅದನ್ನ ಗ್ಯಾರೆಂಟಿಯಾಗಿ ಇಟ್ಟುಕೊಂಡು ಲೋನ್ ಕೊಡೋದಕ್ಕೆ ಬ್ಯಾಂಕುಗಳು ಸಿಬಿಲ್ ಸ್ಕೋರ್ ಝೀರೋ ಕೂಡ ಒಪ್ಪಿಕೊಳ್ಳುತ್ತವೆ. ಯಾಕೆಂದ್ರೆ ನೀವು ಪಡೆದುಕೊಳ್ಳುತ್ತಿರುವಂತಹ ಸಾಲಕ್ಕೆ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಅನ್ನು ಅಡಮಾನವಾಗಿ ಇಟ್ಟಿದ್ದೀರಿ.

ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!

ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿಸುವುದಕ್ಕೆ ಇದು ಹೇಳಿ ಮಾಡಿಸಿದ ಮಾರ್ಗವಾಗಿದೆ. ಸರಿಯಾದ ಸಮಯಕ್ಕೆ ಪ್ರತಿಯೊಂದು ಕಂತುಗಳನ್ನು ಕಟ್ಟಿದಾಗ ನಿಮ್ಮ ಸಿಬಿಲ್ ಸ್ಕೋರ್ ಉತ್ತಮ ಆಗುತ್ತದೆ ಹಾಗೂ ಆಗ ಬ್ಯಾಂಕುಗಳು ನಿಮಗೆ ಲೋನ್ ನೀಡಲು ಯಾವುದೇ ತಕರಾರನ್ನ ಹೊಂದಿರುವುದಿಲ್ಲ.

Loan

ಫಿಕ್ಸೆಡ್ ಡೆಪಾಸಿಟ್ ವಿರುದ್ಧವಾಗಿ ನೀವು ಪಡೆದುಕೊಂಡಿರುವಂತಹ ಲೋನಿನ ಮರುಪಾವತಿಯ ಸಮಯ, ಆ ಫಿಕ್ಸೆಡ್ ಡೆಪಾಸಿಟ್ ನ ಮೆಚುರಿಟಿ ಅವಧಿಗಿಂತ ಮುಂಚೆ ಆಗಿರುತ್ತದೆ. ಫಿಕ್ಸೆಡ್ ಡೆಪಾಸಿಟ್ ಮೇಲೆ ಪಡೆದುಕೊಂಡಿರುವಂತಹ ಸಾಲದ ಬಡ್ಡಿ ಸಾಮಾನ್ಯ ಎಫ್ ಡಿ ಬಡ್ಡಿದರಕ್ಕಿಂತ 2% ಹೆಚ್ಚಾಗಿರುತ್ತದೆ.

ಅಂದ್ರೆ ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೇಲೆ ಬ್ಯಾಂಕ್ ನಿಮಗೆ 8% ಬಡ್ಡಿ ಕೊಡ್ತಾ ಇದ್ರೆ ನೀವು ಪಡೆದುಕೊಂಡಿರುವಂತಹ ಸಾಲದ ಮೇಲೆ 10% ಬಡ್ಡಿಯನ್ನು ವಿಧಿಸುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ನಿಗದಿತ ಸಮಯದ ಒಳಗೆ ತೀರಿಸುವ ಮೂಲಕ ನಿಮ್ಮ ಸಿಬಿಲ್ ಸ್ಕೋರ್, ಉತ್ತಮಗೊಳಿಸಬಹುದಾಗಿದೆ.

Get Loans Even with Zero or Negative CIBIL Score

English Summary
Related Stories