ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!

ನೀವು ಕೂಡ ದುಬೈನಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಳ್ಳುವಂತಹ ಪ್ಲಾನಿಂಗ್ ಮಾಡ್ತಾ ಇದ್ರೆ ಅಲ್ಲಿನ ದುಬಾರಿ ಜೀವನ ಶೈಲಿಯಲ್ಲಿ ಬಾಡಿಗೆ ಎಷ್ಟಿರಬಹುದು ಅನ್ನೋ ಮಾಹಿತಿಯನ್ನು ಮೊದಲಿಗೆ ತಿಳಿಯಿರಿ

  • ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ನೋಡಿ.
  • ದುಬೈಗೆ ಕೆಲಸಕ್ಕೆ ಹೋಗೋರು ಬಾಡಿಗೆ ಮನೆಯ ಬೆಲೆ ಕೇಳಿದ್ರೆ ಆಶ್ಚರ್ಯ ಬೀಳ್ತೀರಾ.
  • ಬಾಡಿಗೆ ಮನೆ ಪಡೆಯೋದಕ್ಕೆ ದುಬೈನಲ್ಲಿ ಈ ಸ್ಥಳಗಳು ಭಾರತೀಯರಿಗೆ ಪರ್ಫೆಕ್ಟ್.

Planning to Move to Dubai : ಜಗತ್ತಿನ ಅತ್ಯಂತ ಐಷಾರಾಮಿ ನಗರಗಳಲ್ಲಿ ದುಬೈ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ದುಬೈನಲ್ಲಿ ಕೆಲಸ ಮಾಡೋದಕ್ಕೆ (Jobs in Dubai) ಅಂತ ನಮ್ಮ ಭಾರತೀಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಹೋಗ್ತಾರೆ. ಅಲ್ಲಿ ಕೆಲಸ ಮಾಡೋದು ಒಂದು ಕಡೆಯಾದರೆ ಅಲ್ಲಿಯೇ ನೆಲೆಸಬೇಕು ಎನ್ನುವಂತಹ ಇಚ್ಛೆಯನ್ನು ಹೊಂದಿರುವವರು ಕೂಡ ಅದರಲ್ಲಿ ಇರುತ್ತಾರೆ.

ಒಂದು ವೇಳೆ ನೀವು ಕೂಡ ದುಬೈನಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಳ್ಳುವಂತಹ ಪ್ಲಾನಿಂಗ್ ಮಾಡ್ತಾ ಇದ್ರೆ ಅಲ್ಲಿನ ದುಬಾರಿ ಜೀವನ ಶೈಲಿಯಲ್ಲಿ ಬಾಡಿಗೆ ಎಷ್ಟಿರಬಹುದು ಅನ್ನೋ ಮಾಹಿತಿಯನ್ನು ಮೊದಲಿಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಇಂಟರ್ನೆಟ್ ಇಲ್ಲದೆ ಇದ್ರು ಯುಪಿಐ ಪೇಮೆಂಟ್ ಮಾಡೋದು ಹೇಗೆ? ಸುಲಭ ವಿಧಾನ

ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!

ದುಬೈನಲ್ಲಿ 1bhk ಮನೆಯ ಬಾಡಿಗೆ ಎಷ್ಟಿರುತ್ತೆ?

ಲಾಕ್ಡೌನ್ ನಂತರದಿಂದ ದುಬೈನಲ್ಲಿ ಪ್ರಾಪರ್ಟಿಗಳ ವ್ಯಾಲ್ಯೂ ತುಂಬಾನೇ ಚೆನ್ನಾಗಿದೆ ಅನ್ನೋ ಮಾಹಿತಿ ಇದೆ.

ಅಲ್ಲಿನ ಸಿಂಗಲ್ ಬೆಡ್ರೂಮ್ ಫ್ಲಾಟ್ ತಿಂಗಳಿಗೆ 3,000-10,000 ದಿರ್ಹಮ್ ಗಳವರೆಗೆ ಅಂದರೆ ಭಾರತದ ರೂಪಾಯಿಯಲ್ಲಿ ಕನ್ವರ್ಟ್ ಮಾಡಿದರೆ 67,000 ದಿಂದ 2.25 ಲಕ್ಷ ರೂಪಾಯ್ಗಳವರೆಗೆ ಇರುತ್ತೆ. ಇದೇ ದುಡ್ಡಿನಲ್ಲಿ ನಮ್ಮ ಭಾರತ ದೇಶದಲ್ಲಿ ದೊಡ್ಡ ಬಂಗಲೆ ತರ ಇರೋ ಮನೆನೇ ಬಾಡಿಗೆಗೆ ಸಿಗುತ್ತೆ ಅಂತ ಹೇಳಬಹುದು.

ಭಾರತದಲ್ಲಿ ಪ್ರೀಮಿಯಂ ಲೊಕೇಶನ್ ನಲ್ಲಿ ಕೂಡ 56 ರಿಂದ ಮ್ಯಾಕ್ಸಿಮಮ್ ಅಂದ್ರೆ 90 ಸಾವಿರ ರೂಪಾಯಿಗಳ ತಿಂಗಳ ಬಾಡಿಗೆ ಇರಬಹುದು. ಆದರೆ ದುಬೈನಲ್ಲಿ ಇದಕ್ಕೆ ತದ್ವಿರುದ್ಧವಾಗಿರುವಂತಹ ಪರಿಸ್ಥಿತಿ ಇದೆ.

ದುಬೈನಲ್ಲಿ ಇರುವಂತಹ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿನ ಬಾಡಿಗೆಯ ಮಾಹಿತಿಯನ್ನು ತಿಳಿಯೋಣ.

10ನೇ ತರಗತಿ ಪಾಸಾಗಿದ್ರೆ ಸ್ವಂತ ಪೆಟ್ರೋಲ್ ಬಂಕ್ ಶುರು ಮಾಡಿ; ಇಲ್ಲಿದೆ ಡೀಟೇಲ್ಸ್!

1BHK Apartment Rent in Dubai

ಹಸಿರಿನಿಂದ ಕೂಡಿರುವಂತಹ ಡಿಸ್ಕವರಿ ಗಾರ್ಡನ್ಸ್ ನಲ್ಲಿ ತಿಂಗಳಿಗೆ 67 ಸಾವಿರದಿಂದ 1 ಲಕ್ಷ ರೂಪಾಯಿಗಳ ಬಾಡಿಗೆ ಇದೆ. ಸಾಕಷ್ಟು ಶಾಂತಿಯನ್ನು ಹೊಂದಿರುವಂತಹ ಪ್ರದೇಶ ಕೂಡ ಇದಾಗಿದೆ.

ಇದೇ ರೇಂಜ್ ನಲ್ಲಿ ದುಬೈನ ಸಿಲಿಕಾನ್ ಓಯಸಿಸ್ ನಲ್ಲಿ ಕೂಡ ಬಾಡಿಗೆ ಮನೆಗಳು (Rent House in Dubai) ಸಿಗುತ್ತವೆ. ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳನ್ನು ಪಡೆದುಕೊಳ್ಳುವುದಕ್ಕೆ ಇದು ಹೇಳಿ ಮಾಡಿಸಿದ ಪ್ರದೇಶ. ಅದರಲ್ಲಿ ವಿಶೇಷವಾಗಿ ಇಲ್ಲಿರುವಂತಹ ಟೆಕ್ ಪಾರ್ಕ್ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ ಎಂದು ಹೇಳಬಹುದಾಗಿದೆ.

ಭಾರತದ ಕುಟುಂಬಗಳು ಹಾಗೂ ಉದ್ಯೋಗ ಮಾಡುತ್ತಿರುವವರಿಗೆ ಬಾಡಿಗೆ ಮನೆ ಪಡೆಯಲು ಹೇಳಿ ಮಾಡಿಸಿರುವಂತಹ ಮತ್ತೊಂದು ಸ್ಥಳ ಅಂದ್ರೆ ಅಲ್ ನಹ್ದಾ. ದುಬೈನ ಮತ್ತೊಂದು ಪ್ರಮುಖ ಸ್ಥಳವಾಗಿರುವಂತಹ ಶಾರ್ಜಾಗೆ ಅತ್ಯಂತ ಹತ್ತಿರದಲ್ಲಿರುವಂತಹ ಪ್ರದೇಶ ಇದಾಗಿದೆ.

ಇದರ ಜೊತೆಗೆ ಜುಮೇರ್ ವಿಲೇಜ್ ಸರ್ಕಲ್ ಅಲ್ಲಿ ಕೂಡ ನೀವು ನಿಮಗೆ ಇಷ್ಟವಾಗಿರುವಂತಹ ಕೈಗೆಟಕುವ ದರದ ಬಾಡಿಗೆ ಮನೆಗಳನ್ನು ಪಡೆಯಬಹುದಾಗಿದೆ.

How Much Does a 1BHK Apartment Cost in Dubai

English Summary
Related Stories