10ನೇ ತರಗತಿ ಪಾಸಾಗಿದ್ರೆ ಸ್ವಂತ ಪೆಟ್ರೋಲ್ ಬಂಕ್ ಶುರು ಮಾಡಿ; ಇಲ್ಲಿದೆ ಡೀಟೇಲ್ಸ್!

ಕೇವಲ 10ನೇ ತರಗತಿ ತೇರ್ಗಡೆ ಹೊಂದಿದ್ದರು, ಪೆಟ್ರೋಲ್ ಬಂಕ್ ಮಾಲೀಕರಾಗಬಹುದು ಆದರೆ ನಗರ ಭಾಗದಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವವರು ಪದವಿ ಉತ್ತೀರ್ಣರಾಗಿರಬೇಕು.

- - - - - - - - - - - - - Story - - - - - - - - - - - - -
  • ಎರಡು ಕೋಟಿ ಬಂಡವಾಳ ಹಾಕಲು ಸಿದ್ಧರಿದ್ರೆ ನೀವಾಗ್ತಿರಾ ಪೆಟ್ರೋಲ್ ಬಂಕ್ ಮಾಲೀಕರು
  • ಪೆಟ್ರೋಲ್ ಬಂಕ್ ಶುರು ಮಾಡಿ ತಿಂಗಳಿಗೆ ಏಳರಿಂದ ಹತ್ತು ಲಕ್ಷ ರೂಪಾಯಿ ಪ್ರಾಫಿಟ್
  • ಒಂದು ಪೆಟ್ರೋಲ್ ಬಂಕ್ ನಲ್ಲಿ ಒಂದು ಕಂಪನಿಯ ತೈಲ ಮಾರಾಟಕ್ಕೆ ಮಾತ್ರ ಅವಕಾಶ

Petrol Bunk Business : ನಿಮ್ಮ ಹತ್ರ ಸ್ವಲ್ಪ ಹೆಚ್ಚು ಹಣ ಇದ್ದು ಅಧಿಕ ಲಾಭ ಕೊಡುವ ಉದ್ಯಮವನ್ನು ಆರಂಭಿಸಬೇಕು ಅಂದುಕೊಂಡಿದ್ದರೆ ಪೆಟ್ರೋಲ್ ಬಂಕ್ ಅನ್ನು ಆರಂಭಿಸಿ. ಪೆಟ್ರೋಲ್ ಬಂಕ್ ನಲ್ಲಿ ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ (Petrol and Diesel) ಹಾಕಿಸುವುದು ಮಾತ್ರವಲ್ಲ, ನೀವೇ ಆ ಪೆಟ್ರೋಲ್ ಬಂಕ್ ನ ಓನರ್ ಕೂಡ ಆಗಬಹುದು. ಇದಕ್ಕೆ ನೀವು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮುಖ್ಯವಾಗಿ ಪೆಟ್ರೋಲ್ ಬಂಕ್ ಆರಂಭಿಸಲು ದೊಡ್ಡ ಮೊತ್ತದ ಬಂಡವಾಳ ಬೇಕು. ಹಣ ಹೂಡಿಕೆ ಮಾಡಲು ನೀವು ರೆಡಿ ಇದ್ರೆ ಇದರಿಂದ ಲಾಭವು ಅಷ್ಟೇ ಬರುತ್ತದೆ.

ಕಾರು, ಬೈಕಿಗೆ ಅಪಘಾತ ಆದ್ಮೇಲೆ ಇನ್ಸುರೆನ್ಸ್ ಕ್ಲೈಮ್ ಮಾಡೋದು ಹೇಗೆ? ಮಾಹಿತಿ ಇಲ್ಲಿದೆ

ಪೆಟ್ರೋಲ್ ಬಂಕ್ ಉದ್ಯಮಕ್ಕೆ ಬೇಕಾಗಿರುವ ಅರ್ಹತೆಗಳು

* ಮೊಟ್ಟಮೊದಲನೆದಾಗಿ ನೀವು ಉತ್ತಮ ಬಂಡವಾಳ ಹೂಡಿಕೆ (Investment)  ಮಾಡಲು ಸಿದ್ಧರಿರಬೇಕು. ಎರಡರಿಂದ ನಾಲ್ಕು ಕೋಟಿಯವರೆಗೆ ಬಂಡವಾಳ ಹೂಡಿಕೆ ಮಾಡಬೇಕು.
* ಕೇವಲ 10ನೇ ತರಗತಿ ತೇರ್ಗಡೆ ಹೊಂದಿದ್ದರು, ಪೆಟ್ರೋಲ್ ಬಂಕ್ ಮಾಲೀಕರಾಗಬಹುದು ಆದರೆ ನಗರ ಭಾಗದಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವವರು ಪದವಿ ಉತ್ತೀರ್ಣರಾಗಿರಬೇಕು.
* 21ರಿಂದ 55 ವರ್ಷ ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು.
* ಒಂದು ಪೆಟ್ರೋಲ್ ಬಂಕ್ ನಲ್ಲಿ ಒಂದು ಕಂಪನಿಯ ತೈಲ ಮಾರಾಟಕ್ಕೆ ಮಾತ್ರ ಅವಕಾಶ.
* ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ಮುಂತಾದ ತೈಲ ಕಂಪನಿಗಳ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ ನಂತರ ನೀವು ಡೀಲರ್ಶಿಪ್ ಪಡೆದುಕೊಳ್ಳಬಹುದು.

10ನೇ ತರಗತಿ ಪಾಸಾಗಿದ್ರೆ ಸ್ವಂತ ಪೆಟ್ರೋಲ್ ಬಂಕ್ ಶುರು ಮಾಡಿ; ಇಲ್ಲಿದೆ ಡೀಟೇಲ್ಸ್!

ಇನ್ನು ಪೆಟ್ರೋಲ್ ಬಂಕ್ (Petrol Bunk) ಆರಂಭಿಸುವುದಕ್ಕೆ, ಒಂದು ಪಂಪ್ ಇಟ್ಟುಕೊಂಡರೆ 500 ಚದರ ಮೀಟರ್ ಹಾಗೂ ಎರಡು ಪಂಪ್ ಇಡುವುದಕ್ಕೆ ಕನಿಷ್ಠ 800 ಚದರ ಮೀಟರ್ ಸ್ಥಳಾವಕಾಶ ಬೇಕು. ಇನ್ನು ಹೆದ್ದಾರಿಯಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವುದಕ್ಕೆ ಹೆಚ್ಚಿನ ಜಾಗ ಬೇಕಾಗುತ್ತದೆ. ನೀವು ಎಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲು ಸಿದ್ಧರಿದ್ದೀರಿ ಎಂಬುದನ್ನು ತೈಲ ಕಂಪನಿಗೆ ತಿಳಿಸಿ ನಂತರ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ.

ಪೆಟ್ರೋಲ್ ಬಂಕ್ ಮಾಲೀಕರಾಗಲು ನಿಮ್ಮ ನಿವ್ವಳ ಆಸ್ತಿ ಮೌಲ್ಯ ಕನಿಷ್ಠ 25 ಲಕ್ಷ ರೂಪಾಯಿಗಳಷ್ಟಿರಬೇಕು. ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಡೀಫಾಲ್ಟರ್ ಆಗಿದ್ದರೆ ಅಂತವರಿಗೆ ಪೆಟ್ರೋಲ್ ಬಂಕ್ ಆರಂಭಿಸಲು ಪರವಾನಿಗೆ ಸಿಗುವುದಿಲ್ಲ.

ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡೋಕೆ ಎಷ್ಟು ಶುಲ್ಕ ಕಟ್ಟಬೇಕು? ಬ್ಯಾಂಕಿಂಗ್ ನಿಯಮ ತಿಳಿಯಿರಿ

ಪೆಟ್ರೋಲ್ ಬಂಕ್ ಆರಂಭಿಸಿದ್ರೆ ಲಾಭ ಇದೆಯಾ?

ಸಾಮಾನ್ಯವಾಗಿ ಶ್ರೀಮಂತರು ಎಲ್ಲಿ ಹೂಡಿಕೆ ಮಾಡುತ್ತಾರೆ ಅಂದರೆ ಹೋಟೆಲ್ ಗಳು, ರಿಯಲ್ ಎಸ್ಟೇಟ್ ಅಥವಾ ಪೆಟ್ರೋಲ್ ಬಂಕ್. ಇದರಿಂದಾನೆ ಪೆಟ್ರೋಲ್ ಬಂಕ್ ಇಂದ ಎಷ್ಟು ಲಾಭ ಪಡೆಯಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಲಾಭದ ಲೆಕ್ಕಾಚಾರ ಹಾಕುವುದಾದರೆ, ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೆ 1.5 ರೂಪಾಯಿನಿಂದ ರೂ.3ವರೆಗೆ ಪ್ರಾಫಿಟ್ ಸಿಗುತ್ತದೆ. ಅದೇ ಡೀಸೆಲ್ ಮಾರಾಟ ಮಾಡಿದರೆ ಒಂದು ಲೀಟರ್ಗೆ ಎರಡರಿಂದ ಮೂರು ರೂಪಾಯಿ ಲಾಭ ಪಡೆಯಬಹುದು. ಆದ್ರೆ ತೈಲ ಸೋರಿಕೆಯ ಭಯ ಇರುವುದರಿಂದ ಮಾಲೀಕರು ಎಚ್ಚರಿಕೆಯಿಂದ ಇರಬೇಕು.

ನಗರ ಭಾಗದಲ್ಲಿ ಒಂದು ದಿನಕ್ಕೆ 10 ರಿಂದ 20 ಸಾವಿರ ಲೀಟರ್ ಪೆಟ್ರೋಲ್ ಮಾರಾಟವಾಗುವ ಸಾಧ್ಯತೆ ಇರುತ್ತದೆ. ಅಲ್ಲಿಗೆ ಒಂದು ಲೀಟರ್ ಗೆ ಎರಡು ರೂಪಾಯಿ ಉಳಿತಾಯ ಅಂದ್ರು ಸುಮಾರು 40 ಸಾವಿರ ರೂಪಾಯಿ ದಿನಕ್ಕೆ ಉಳಿತಾಯವಾಗುತ್ತದೆ. ಅಂದರೆ ಒಂದು ಪೆಟ್ರೋಲ್ ಪಂಪ್ ಇಟ್ಟುಕೊಂಡರೆ ತಿಂಗಳಿಗೆ ಕನಿಷ್ಠ ಏಳರಿಂದ ಹತ್ತು ಲಕ್ಷ ರೂಪಾಯಿ ಆದಾಯ ಗಳಿಸಬಹುದು.

Petrol Bunk Business in Indiaಪೆಟ್ರೋಲ್ ಬಂಕ್ ಆರಂಭಿಸಲು ಎಷ್ಟು ಬಂಡವಾಳ ಬೇಕು?

ಪೆಟ್ರೋಲ್ ಪಂಪ್ ಸ್ಥಳಕ್ಕಾಗಿ 20 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇನ್ನು ಪೆಟ್ರೋಲ್ ಬಂಕ್ ನ ಮೂಲ ಸೌಕರ್ಯಕ್ಕಾಗಿ ಪೆಟ್ರೋಲ್ ಶೇಖರಣೆಗಾಗಿ 30 ಲಕ್ಷ ದಿಂದ ಒಂದು ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ವಾ? ದಂಡ ಎಷ್ಟು ಕಟ್ಟಬೇಕು ಗೊತ್ತಾ?

ಪೆಟ್ರೋಲ್ ಹಾಕುವ ಯೂನಿಟ್, ಸ್ಟೋರೇಜ್ ಟ್ಯಾಂಕ್ ಮೊದಲಾದವುಗಳಿಗೆ 20 ರಿಂದ 50 ಲಕ್ಷ ರೂಪಾಯಿಗಳನ್ನು ಮೀಸಲಿಡಬೇಕು. ಇನ್ನು ಪೆಟ್ರೋಲ್ ಬಂಕ್ ಆರಂಭಿಸಲು ಬೇಕಾಗಿರುವ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ಎರಡರಿಂದ 5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು.

ಒಟ್ಟಾರೆ ಎರಡರಿಂದ ನಾಲ್ಕು ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಲು ಸಿದ್ಧರಿದ್ದರೆ ನೀವು ಪೆಟ್ರೋಲ್ ಬಂಕ್ ಮಾಲೀಕರಾಗಬಹುದು ಹಾಗೆಯೇ ಪ್ರತಿದಿನ ಕೈತುಂಬ ಆದಾಯ ಗಳಿಸಬಹುದು.

start your profitable journey as a petrol Bunk owner

English Summary
Related Stories