ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ವಾ? ದಂಡ ಎಷ್ಟು ಕಟ್ಟಬೇಕು ಗೊತ್ತಾ?
2024ರ ಆರ್ಥಿಕ ವರ್ಷದಲ್ಲಿ ಭರ್ಜರಿ 5,500 ಕೋಟಿ ರೂಪಾಯಿಗಳನ್ನು ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿಲ್ಲ ಅಂತ ಹೇಳಿ ಶುಲ್ಕದ ರೂಪದಲ್ಲಿ ಪಡೆದುಕೊಂಡಿವೆ.
- ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ RBI ಏನ್ ಹೇಳುತ್ತೆ?
- ಮಿನಿಮಮ್ ಬ್ಯಾಲೆನ್ಸ್ ಅಕೌಂಟ್ ನಿರ್ವಹಣೆ ಮಾಡದೇ ಇರುವಾಗ ಏನಾಗುತ್ತದೆ
- ಅಕೌಂಟ್ ಬ್ಯಾಲೆನ್ಸ್ ಮೈನಸ್ ಆಗೋಕಿಂತ ಮುಂಚೆ ಏನು ಮಾಡಬೇಕು
ಇಂದಿನ ದಿನದಲ್ಲಿ ಭಾರತದಲ್ಲಿ ಜನಸಾಮಾನ್ಯರಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕಿನಲ್ಲಿ ಒಂದಲ್ಲ ಒಂದು ರೀತಿಯ ಬ್ಯಾಂಕ್ ಅಕೌಂಟ್ಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಉದ್ಯೋಗಕ್ಕೆ ಹೋಗೋರು ಸ್ಯಾಲರಿ ಅಕೌಂಟ್ ಹಾಗೂ ಸೇವಿಂಗ್ ಅಕೌಂಟ್ ಗಳನ್ನು ಹೊಂದಿರುತ್ತಾರೆ ಹಾಗೂ ವ್ಯಾಪಾರಿಗಳು ಕರೆಂಟ್ ಅಕೌಂಟ್ ಗಳನ್ನ ಹೊಂದಿರುತ್ತಾರೆ.
ಹೀಗೆ ಒಂದೊಂದು ರೀತಿಯ ವಿವಿಧ ಬಗೆಯ ಅಕೌಂಟ್ಗಳು ಇರುತ್ತವೆ. ಇನ್ನು ಈ ರೀತಿಯ ಅಕೌಂಟ್ಗಳಿಗೆ ಬ್ಯಾಂಕ್ ಗಳು ಕೂಡ ಬೇರೆ ಬೇರೆ ರೀತಿಯ ಚಾರ್ಜಸ್ ಗಳ ಮೂಲಕ ಹಣವನ್ನು ಕಡಿತುಗೊಳಿಸುವಂತಹ ಪ್ರಕ್ರಿಯೆಯನ್ನು ಕೂಡ ಮಾಡುತ್ತವೆ. ಇಂತಹ ಚಾರ್ಜಸ್ ಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಅನ್ನು ಅಕೌಂಟ್ ನಲ್ಲಿ ಹೊಂದಿಲ್ಲದೆ ಹೋದಲ್ಲಿ ಬ್ಯಾಂಕ್ ವಿಧಿಸುವಂತಹ ಶುಲ್ಕ ಕೂಡ ಸೇರಿದೆ.
2024ರ ಆರ್ಥಿಕ ವರ್ಷದಲ್ಲಿ ಭರ್ಜರಿ 5,500 ಕೋಟಿ ರೂಪಾಯಿಗಳನ್ನು ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಹೊಂದಿಲ್ಲ ಅಂತ ಹೇಳಿ ಶುಲ್ಕದ ರೂಪದಲ್ಲಿ ಪಡೆದುಕೊಂಡಿವೆ.
ಈ ಹಳೆಯ ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ
ಬ್ಯಾಂಕಿನ ಮಿನಿಮಮ್ ಬ್ಯಾಲೆನ್ಸ್ ನಿಯಮದ ಸಂಪೂರ್ಣ ಮಾಹಿತಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮದ ಪ್ರಕಾರ ಒಂದು ವೇಳೆ ನೀವು ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನಿರ್ವಹಣೆ ಮಾಡದೇ ಹೋದಲ್ಲಿ 400 ರಿಂದ 500 ರೂಪಾಯಿಗಳ ದಂಡವನ್ನು ವಿಧಿಸುತ್ತದೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಹಣವೇ ಇಲ್ಲದಿದ್ರೆ ಆ ದಂಡವನ್ನು ವಿಧಿಸಿದಾಗ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಮೈನಸ್ ಗೆ ಪರಿವರ್ತನೆ ಆಗುತ್ತದೆ.
ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಹಣ ಇಲ್ಲದೆ ಹೋದಲ್ಲಿ ಅಂದರೆ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡದೆ ಹೋದಲ್ಲಿ ಬ್ಯಾಂಕುಗಳು ದಂಡವನ್ನು ವಿಧಿಸಬೇಕಾಗಿರುವುದು ನಿಯಮದ ಪ್ರಕಾರ ಸರೀನೇ. ಆದರೆ ನಿಮ್ಮ ಅಕೌಂಟ್ ಮೈನಸ್ಗೆ ಹೋಗದಂತೆ ಎಚ್ಚರಿಸುವುದು ಕೂಡ ನಿಮ್ಮ ಬ್ಯಾಂಕಿನ ಕರ್ತವ್ಯ ಆಗಿರುತ್ತದೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.
ಮದುವೆಗೂ ಸಿಗುತ್ತೆ ಸಾಲ, ಹಾಗಾದ್ರೆ ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ
ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಗಿಂತ ನಿಮ್ಮ ಖಾತೆಯಲ್ಲಿ ಅಮೌಂಟ್ ಕಡಿಮೆ ಇದ್ರೆ ಆ ಸಂದರ್ಭದಲ್ಲಿ ಬ್ಯಾಂಕಿನವರು ನಿಮಗೆ ಈ ವಿಚಾರದ ಬಗ್ಗೆ ಎಚ್ಚರಿಸ ಬೇಕಾಗಿರುತ್ತದೆ. ನಿಮಗೆ ವಿಧಿಸುವಂತಹ ದಂಡದ ಬಗ್ಗೆ ಮೊದಲೇ ನಿಮಗೆ ಎಚ್ಚರಿಸ ಬೇಕಾಗಿರುತ್ತದೆ.
ಒಂದು ವರ್ಷಕ್ಕೆ ಅಂತ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ!
ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ 0 ಇದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳ ಪ್ರಕಾರ ದಂಡವನ್ನು ಹಾಕಬಾರದು. ಹೀಗಾಗಿ ಒಂದು ವೇಳೆ ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮಕ್ಕಿಂತ ಕಡಿಮೆ ಅಮೌಂಟ್ ಇದ್ದರೆ ದಂಡವನ್ನು ವಿಧಿಸುವುದಕ್ಕಿಂತ ಮುಂಚೆ ಅಥವಾ ಅಕೌಂಟ್ ಮೈನಸ್ ಬ್ಯಾಲೆನ್ಸ್ ಆಗುವುದಕ್ಕಿಂತ ಮುಂಚೆ ಬ್ಯಾಂಕುಗಳು ನಿಮಗೆ ಇದರ ಬಗ್ಗೆ ಎಚ್ಚರಿಸಬೇಕಾಗಿರುವುದು ಕಡ್ಡಾಯವಾಗಿದೆ.
What Does RBI Say If There Is No Minimum Balance in Your Bank Account