ಒಂದು ವರ್ಷಕ್ಕೆ ಅಂತ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ!
ಒಂದು ವರ್ಷಕ್ಕೆ ಎಫ್ ಡಿ ಇಟ್ಟರೆ ಸಿಗುವ ಬಡ್ಡಿದರಕ್ಕಿಂತ ಮೂರು ವರ್ಷ ಎಫ್ ಡಿ ಇಟ್ಟರೆ ಸಿಗುವ ಬಡ್ಡಿದರ ಹೆಚ್ಚಿನದು. ಈಗ ಯಾವ ಬ್ಯಾಂಕ್ ಎಷ್ಟು FD ಬಡ್ಡಿ ದರವನ್ನು ನಿಗದಿಪಡಿಸಿದೆ ಎಂಬುದನ್ನು ನೋಡೋಣ.
- ಒಂದು ವರ್ಷಕ್ಕೆ ಅಂತ ಸ್ಥಿರ ಠೇವಣಿ ಇಟ್ಟರೆ ಸಿಗುವ ರಿಟರ್ನ್ ಎಷ್ಟು?
- ಹಣ ಫಿಕ್ಸೆಡ್ ಇಟ್ಟರೆ ಎಸ್ ಬಿ ಐ ನೀಡುತ್ತೆ 7.5% ವಾರ್ಷಿಕ ಬಡ್ಡಿ
- ಅಲ್ಪಾವಧಿಯ ಠೇವಣಿಗಿಂತ ದೀರ್ಘಾವಧಿಯ ಠೇವಣಿಗೆ ಸಿಗುವ ಬಡ್ಡಿ ಹೆಚ್ಚು
Fixed Deposit : ನೀವು ಹೂಡಿಕೆ ಮಾಡಲು ಬಯಸಿದರೆ ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಉತ್ತಮ ಯೋಜನೆಗಳು ಲಭ್ಯವಿವೆ. ನೀವು ಯಾವ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಬರುವ ರಿಟರ್ನ್ ನಿರ್ಧಾರವಾಗುತ್ತದೆ. ಅಂದರೆ ನಿಮ್ಮ ಹೂಡಿಕೆ ಮೇಲೆ ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿದರವನ್ನು ನೀಡುತ್ತವೆ. ಹಾಗಾಗಿ ನೀವು ಹೂಡಿಕೆ ಮಾಡುವಾಗ ಬೇರೆ ಬೇರೆ ಬ್ಯಾಂಕ್ಗಳನ್ನು ಸಂಪರ್ಕಿಸಿ ಬಡ್ಡಿ ದರವನ್ನು ಚೆಕ್ ಮಾಡಬೇಕು.
ಅಲ್ಪಕಾಲದ ಹೂಡಿಕೆಗಿಂತ ದೀರ್ಘಕಾಲದ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಉದಾಹರಣೆಗೆ ಒಂದು ವರ್ಷಕ್ಕೆ ಎಫ್ ಡಿ ಇಟ್ಟರೆ ಸಿಗುವ ಬಡ್ಡಿದರಕ್ಕಿಂತ ಮೂರು ವರ್ಷ ಎಫ್ ಡಿ ಇಟ್ಟರೆ ಸಿಗುವ ಬಡ್ಡಿದರ ಹೆಚ್ಚಿನದು. ಈಗ ಯಾವ ಬ್ಯಾಂಕ್ ಎಷ್ಟು FD ಬಡ್ಡಿ ದರವನ್ನು ನಿಗದಿಪಡಿಸಿದೆ ಎಂಬುದನ್ನು ನೋಡೋಣ.
ಪ್ಯಾನ್ ಕಾರ್ಡ್ ಇರುವವರಿಗೆ ಕೊನೆಯ ಅವಕಾಶ, ಈ ಕೆಲಸ ಮಾಡದೆ ಇದ್ರೆ 10,000 ದಂಡ!
ಹೆಚ್ ಡಿ ಎಫ್ ಸಿ ಬ್ಯಾಂಕ್ – ಒಂದು ವರ್ಷದ ಎಫ್ಡಿ ಮೇಲೆ ವಾರ್ಷಿಕ 6.6% ಬಡ್ಡಿದರ (ಸಾಮಾನ್ಯ ಹೂಡಿಕೆದಾರನಿಗೆ), 7.1% ಬಡ್ಡಿದರ (ಹಿರಿಯ ನಾಗರಿಕರಿಗೆ) ನೀಡಲಾಗುತ್ತದೆ.
ಐಸಿಐಸಿಐ ಬ್ಯಾಂಕ್ – 15 ತಿಂಗಳವರೆಗೆ ಈ ಬ್ಯಾಂಕಿನಲ್ಲಿ ಎಫ್ ಡಿ ಠೇವಣಿ ಮಾಡಿದರೆ ಸಾಮಾನ್ಯರಿಗೆ 6.7% ಹಾಗೂ ಹಿರಿಯ ನಾಗರಿಕರಿಗೆ 7.20% ಬಡ್ಡಿ ದರದಲ್ಲಿ ಉತ್ತಮ ರಿಟರ್ನ್ ನೀಡಲಾಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ – 2024ರ ಜೂನ್ ತಿಂಗಳಿನಲ್ಲಿ ಎಫ್ ಡಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಲಾಗಿದ್ದು, ಸಾಮಾನ್ಯ ನಾಗರಿಕರಿಗೆ 7.1% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ 7.6% ಬಡ್ಡಿ ನೀಡಲಾಗುವುದು.
ಫೆಡರಲ್ ಬ್ಯಾಂಕ್ – ಈ ಬ್ಯಾಂಕ್ ನಲ್ಲಿ ನೀವು ಇಡುವ ಒಂದು ವರ್ಷದ ಠೇವಣಿಗೆ 6.8% ಬಡ್ಡಿ ನೀಡಲಾಗುತ್ತದೆ ಹಾಗೂ ಹಿರಿಯ ನಾಗರಿಕರಿಗೆ ವಾರ್ಷಿಕ 7.3% ಬಡ್ಡಿ ಸಿಗುತ್ತದೆ.
ಕೇಂದ್ರ ಸರ್ಕಾರದ ಹೊಸ ಯೋಜನೆ; ಕೇವಲ 4 ತಾಸಿನಲ್ಲಿ ಸಿಗುತ್ತೆ ಪರ್ಸನಲ್ ಲೋನ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಸರ್ಕಾರಿ ಸಾಮ್ಯದಲ್ಲಿರುವ ಸಿಬಿಐನಲ್ಲಿ ಸಾಮಾನ್ಯರಿಗೆ 6.8% ವಾರ್ಷಿಕ ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ 7.3% ವಾರ್ಷಿಕ ಬಡ್ಡಿ, ಸ್ಥಿರ ಠೇವಣಿಗೆ ನೀಡಲಾಗುವುದು.
ಎಷ್ಟು ವರ್ಷಕ್ಕೆ ನೀವು ಠೇವಣಿ ಇಡುತ್ತೀರಿ ಎಂಬುದರ ಆಧಾರದ ಮೇಲೆ ಯಾವ ಬ್ಯಾಂಕ್ ನಲ್ಲಿ ಉತ್ತಮ ಬಡ್ಡಿ ನೀಡಲಾಗುವುದು ಎಂಬುದನ್ನು ಪರಿಶೀಲಿಸಿ ನಂತರ ಹೂಡಿಕೆ ಮಾಡಿ.
Which Bank Offers the Highest Interest Rate on Fixed Deposit