ಪ್ಯಾನ್ ಕಾರ್ಡ್ ಇರುವವರಿಗೆ ಕೊನೆಯ ಅವಕಾಶ, ಈ ಕೆಲಸ ಮಾಡದೆ ಇದ್ರೆ 10,000 ದಂಡ!
ಆದಾಯ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಜನ ಸರ್ಕಾರಕ್ಕೆ ವಂಚನೆ ಮಾಡುವ ಸಲುವಾಗಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದು ಅಂತಹವರು ಭಾರೀ ದಂಡ ಪಾವತಿಸಬೇಕಾಗುತ್ತದೆ
- ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ 10,000 ದಂಡ
- ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ
- ಪಿಂಚಣಿ ಹಣ ಸಕಾಲಕ್ಕೆ ನಿಮ್ಮ ಕೈ ಸೇರಬೇಕು ಅಂದ್ರೆ ಈ ಕೆಲಸ ಮಾಡಿ
Pan Card: ನಮಗೆಲ್ಲ ತಿಳಿದಿರುವ ಹಾಗೆ ಶಾಶ್ವತ ಖಾತೆಯ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬರಿಗೂ ಬೇಕಾಗಿರುವ ಅತ್ಯಗತ್ಯ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಪ್ಯಾನ್ ಕಾರ್ಡ್ ವಿತರಿಸಿದೆ.
ಯಾವುದೇ ತೆರಿಗೆ ಪಾವತಿಸುವುದಕ್ಕೆ ಹಾಗೂ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಪ್ಯಾನ್ ಕಾರ್ಡಿಗೆ ಸಂಬಂಧಪಟ್ಟ ಹಾಗೆ ಸರ್ಕಾರ ಹಲವು ನಿಯಮಗಳನ್ನು ರೂಪಿಸಿ ಅವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದೆ.
ಆದರೂ ಪ್ಯಾನ್ ಕಾರ್ಡ್ ವಿಚಾರದಲ್ಲಿ ಜನರು ತೋರಿಸಿರುವ ನಿರ್ಲಕ್ಷದಿಂದಾಗಿ ಇಂದು ಹೆಚ್ಚುವರಿ ದಂಡ ಪಾವತಿಸುವ ಪರಿಸ್ಥಿತಿ ಎದುರಾಗಿದೆ.
ಕೇಂದ್ರ ಸರ್ಕಾರದ ಹೊಸ ಯೋಜನೆ; ಕೇವಲ 4 ತಾಸಿನಲ್ಲಿ ಸಿಗುತ್ತೆ ಪರ್ಸನಲ್ ಲೋನ್
ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವಂತಿಲ್ಲ
ಈ ಬಗ್ಗೆ ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿದೆ. ಯಾವುದೇ ವ್ಯಕ್ತಿ ಒಂದು ಪ್ಯಾನ್ ಕಾರ್ಡ್ ಹೊಂದಿರುವುದಕ್ಕೆ ಅವಕಾಶ ಇದೆ. ಆದರೆ ಆದಾಯ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಜನ ಸರ್ಕಾರಕ್ಕೆ ವಂಚನೆ ಮಾಡುವ ಸಲುವಾಗಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವ ಸಾಧ್ಯತೆ ಇರುತ್ತದೆ.
ಈಗಾಗಲೇ ಇಂಥವರನ್ನು ಗುರುತಿಸಿ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 272 ಬಿ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದು ಆದಾಯ ತೆರಿಗೆ ಇಲಾಖೆಗೆ ಮೋಸ ಮಾಡಿದ ವ್ಯಕ್ತಿಗೆ 10,000 ದಂಡ ಅಥವಾ ಅದಕ್ಕಿಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು.
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್
ಭಾರತದ ಪ್ರತಿಯೊಬ್ಬ ನಾಗರಿಕನು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಕಳೆದ ವರ್ಷ ಹಲವು ಬಾರಿ ಗಡುವು ನೀಡಿತ್ತು. ಆದರೂ ಸಾಕಷ್ಟು ಜನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಉದಾಹರಣೆಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಪಿಂಚಣಿ ಹಣ ನಿಮ್ಮ ಕೈ ಸೇರದೆ ಇರಬಹುದು ಅಥವಾ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇರುವುದಕ್ಕಾಗಿ ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತಗೊಳ್ಳಬಹುದು. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಕೊಂಡು ಪಿಂಚಣಿ ಹಣವನ್ನು ಬಿಡುಗಡೆ ಮಾಡಿಸಿಕೊಂಡಿರುವ ಉದಾಹರಣೆಗಳು ಇವೆ.
ನಿಮ್ಮ ಸಂಬಳಕ್ಕೆ HDFC ಬ್ಯಾಂಕ್ ನಲ್ಲಿ ಹೋಂ ಲೋನ್ ಸಿಗುತ್ತಾ? ಇಲ್ಲಿದೆ ಡೀಟೇಲ್ಸ್
ಹಾಗಾಗಿ ಇನ್ನು ಮುಂದೆ ಸಮಸ್ಯೆ ಎದುರಿಸಬಾರದು ಎಂದಾದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀವು ಆನ್ಲೈನ್ ಮೂಲಕ ಲಿಂಕ್ ಮಾಡಿಸಿಕೊಳ್ಳಬಹುದು. ಆದರೆ ಇದಕ್ಕೆ ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಈ ಹಿಂದೆ ಲಿಂಕ್ ಮಾಡಿಕೊಳ್ಳಲು ಯಾವುದೇ ರೀತಿಯ ಹಣ ಪಾವತಿಸುವ ಅಗತ್ಯ ಇರಲಿಲ್ಲ. ಆದರೆ ಸರ್ಕಾರದ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಸಾವಿರ ರೂಪಾಯಿಗಳನ್ನು ಪಾವತಿಸಬೇಕು.
ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಏನಾಗುತ್ತೆ?
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ನೀವು ಮ್ಯೂಚುವಲ್ ಫಂಡ್ ನಲ್ಲಿ (Mutual Fund) 50,000 ಕ್ಕಿಂತ ಹೆಚ್ಚಿನ ಠೇವಣಿ ಇಡಲು ಸಾಧ್ಯವಿಲ್ಲ. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಯಾವುದೇ ರೀತಿಯ ಆರ್ಥಿಕ ವ್ಯವಹಾರವನ್ನು ಮಾಡಲು ಕಷ್ಟವಾಗಬಹುದು. ಹಾಗೆಯೇ ಸರ್ಕಾರಿ ಯೋಜನೆಗಳ ಪ್ರಯೋಜನ ಸರಿಯಾಗಿ ನಿಮ್ಮ ಕೈಗೆ ಸೇರುವುದಿಲ್ಲ.
ಅದೂ ಅಲ್ಲದೆ ಪ್ಯಾನ್ ಕಾರ್ಡ್ ಹಳೆಯದಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೊಡದೆ ನೀವು ಹೊಸ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಅಥವಾ ಈ ಪ್ರಕ್ರಿಯೆ ತುಂಬಾ ವಿಳಂಬವಾಗಬಹುದು. ಇದೆಲ್ಲದರ ಜೊತೆಗೆ ಆದಾಯ ತೆರಿಗೆ ಪಾವತಿ ಮಾಡಲು ಕಷ್ಟವಾಗುತ್ತದೆ.
ಇಂತಹ ಸಂದರ್ಭದಲ್ಲಿ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ವಿನಾಕಾರಣ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಹಾಗೂ ಸರಿಯಾದ ಪಾನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ.
Penalty of 10,000 for Holding Multiple PAN Cards