ಮದುವೆಗೂ ಸಿಗುತ್ತೆ ಸಾಲ, ಹಾಗಾದ್ರೆ ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ
ಹಲವು ಬ್ಯಾಂಕುಗಳು ಮದುವೆಯ ಸಾಲವನ್ನು ವಿಶೇಷವಾಗಿ ನೀಡುತ್ತಿದ್ದು, 50 ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಮದುವೆ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ.
- ಮದುವೆಗೂ ಸಿಗುತ್ತೆ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ
- 5 ಲಕ್ಷದಿಂದ 50 ಲಕ್ಷ ರೂಪಾಯಿಗಳವರೆಗೆ ಮದುವೆ ಸಾಲ
- 11 ರಿಂದ 22% ಬಡ್ಡಿ ದರದಲ್ಲಿ ಮದುವೆ ಸಾಲ ಪಡೆಯಬಹುದು
Marriage Loan : ಇತ್ತೀಚಿಗೆ ಮದುವೆ ಅನ್ನೋದು ದೊಡ್ಡ ಸಂಭ್ರಮವಾಗಿಬಿಟ್ಟಿದೆ. ಮದುವೆಯ ಮುಂಚೆ ಹಾಗೂ ಮದುವೆಯ ನಂತರ ಈ ಸಂಭ್ರಮ ಮುಂದುವರಿಯುತ್ತದೆ. ಮದುವೆಯನ್ನು ಅತಿ ಹೆಚ್ಚು ಹಣ ಖರ್ಚು ಮಾಡಿ ಬಹಳ ಅದ್ದೂರಿಯಾಗಿ ಮಾಡಲಾಗುತ್ತದೆ. ಒಂದು ರೀತಿಯಲ್ಲಿ ಮದುವೆ ಆಡಂಬರವೇ ಆಗಿಬಿಟ್ಟಿದೆ.
ಇನ್ನೊಂದು ಅರ್ಥದಲ್ಲಿ ನೋಡುವುದಾದರೆ ಮದುವೆ ಅನ್ನುವುದು ಜೀವನದಲ್ಲಿ ನಡೆಯುವ ಒಂದು ಪ್ರಮುಖ ಘಟನೆ ಆಗಿರುವ ಹಿನ್ನೆಲೆಯಲ್ಲಿ ಮದುವೆ ಆಗುವವರು ಹಾಗೂ ತಂದೆ ತಾಯಿಗಳು ತಮ್ಮ ಮಕ್ಕಳ ಮದುವೆಯ ಕನಸನ್ನು ಹೊತ್ತಿರುತ್ತಾರೆ. ಹೀಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮದುವೆ ಮಾಡುತ್ತಾರೆ. ಇನ್ನೂ ಕೆಲವರು ಸಾಲ (Loan) ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡುತ್ತಾರೆ.
ಒಂದು ವರ್ಷಕ್ಕೆ ಅಂತ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ!
ಮದುವೆಗಾಗಿ ಸಾಲ
ಹೌದು, ಹಲವು ಬ್ಯಾಂಕುಗಳು ಮದುವೆಯ ಸಾಲವನ್ನು (Marriage Loan) ವಿಶೇಷವಾಗಿ ನೀಡುತ್ತಿದ್ದು, 50 ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಮದುವೆ ಸಾಲವಾಗಿ ಪಡೆದುಕೊಳ್ಳಬಹುದಾಗಿದೆ. ಮ್ಯಾರೇಜ್ ಲೋನ್ ಕೂಡ ವಯಕ್ತಿಕ ಸಾಲದಂತೆ (Personal Loan) ಇರುತ್ತದೆ ಅಂದರೆ ಇಲ್ಲಿ ಐದು ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದು.
ಮದುವೆ ಸಾಲ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!
* 21 ರಿಂದ 60 ವರ್ಷ ವಯಸ್ಸಿನ ಭಾರತೀಯ ನಾಗರಿಕರಿಗೆ ಮದುವೆ ಸಾಲ ಸಿಗುತ್ತದೆ
* ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಗಳಿಗೆ ಈ ಸಾಲ ಸೌಲಭ್ಯ ದೊರೆಯುತ್ತದೆ.
* ಕನಿಷ್ಠ 15,000 ತಿಂಗಳ ಸಂಬಳ ಪಡೆದುಕೊಳ್ಳುವವರಾಗಿರಬೇಕು.
* ಸಂಬಳದ ಸ್ಲಿಪ್, ಬ್ಯಾಂಕ್ ಸ್ಟೇಟ್ಮೆಂಟ್ ಹೊಂದಿರಬೇಕು.
* ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿರಬೇಕು.
ಪ್ಯಾನ್ ಕಾರ್ಡ್ ಇರುವವರಿಗೆ ಕೊನೆಯ ಅವಕಾಶ, ಈ ಕೆಲಸ ಮಾಡದೆ ಇದ್ರೆ 10,000 ದಂಡ!
ಮದುವೆ ಸಾಲ ವೈಯಕ್ತಿಕ ಸಾಲದಂತೆ ಇದ್ದು ಈ ಸಾಲ ಪಡೆದುಕೊಳ್ಳುವುದಕ್ಕೆ ಮೂರು ತಿಂಗಳ ಸ್ಯಾಲರಿ ಸ್ಲಿಪ್ ಮತ್ತು ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ವೈಯಕ್ತಿಕ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ ಮೊದಲಾದವುಗಳನ್ನು ಕೊಡಬೇಕು.
ಇನ್ನು ಸಾಲ ತೆಗೆದುಕೊಳ್ಳುವಾಗ ನೀವು ಗಮನಿಸಬೇಕಾದ ಮುಖ್ಯ ಅಂಶ ಅಂದ್ರೆ, ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರವನ್ನು ವಿಧಿಸಲಾಗುತ್ತದೆ ಹಾಗಾಗಿ ಯಾವ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ ಎಂಬುದನ್ನು ಪರಿಶೀಲಿಸಿ.
ಮದುವೆ ಲೋನ್ ನೀಡುವ ಬ್ಯಾಂಕ್ ಗಳು ಮತ್ತು ಬಡ್ಡಿದರ!
ಹೆಚ್ ಡಿ ಎಫ್ ಸಿ ಬ್ಯಾಂಕ್ – 11 ರಿಂದ 22% ಬಡ್ಡಿದರ
ಐಸಿಐಸಿಐ ಬ್ಯಾಂಕ್ – 10.85% ಬಡ್ಡಿದರ
ಎಕ್ಸಿಸ್ ಬ್ಯಾಂಕ್ – 11.25% ಬಡ್ಡಿದರ
ಬ್ಯಾಂಕ್ ಆಫ್ ಬರೋಡ 11.10% ಬಡ್ಡಿದರ.
ಕೇಂದ್ರ ಸರ್ಕಾರದ ಹೊಸ ಯೋಜನೆ; ಕೇವಲ 4 ತಾಸಿನಲ್ಲಿ ಸಿಗುತ್ತೆ ಪರ್ಸನಲ್ ಲೋನ್
ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಈ ಬ್ಯಾಂಕ್ಗಳಲ್ಲಿ ಐದರಿಂದ 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು.
ನಿಮ್ಮ ಬಜೆಟ್ಗಿಂತ ಮದುವೆ ಖರ್ಚು ಹೆಚ್ಚಾಗಿದ್ದಲ್ಲಿ ಸಾಲ ಪಡೆದುಕೊಳ್ಳುವುದು ಸೂಕ್ತ ಆದರೂ ಸಾಲ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಮದುವೆಯಾದ ನಂತರ ಇದು ದೊಡ್ಡ ಆರ್ಥಿಕ ಸಮಸ್ಯೆಯಾಗಿ ನಿಮ್ಮನ್ನು ಕಾಡಬಹುದು ಹಾಗಾಗಿ ನಿಮ್ಮ ಮಿತಿಯನ್ನು ಅರಿತು ಸಾಲ ಮಾಡುವುದು ಸೂಕ್ತ.
Get Up to 50 Lakh for Wedding as a Marriage Loan