ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡೋಕೆ ಎಷ್ಟು ಶುಲ್ಕ ಕಟ್ಟಬೇಕು? ಬ್ಯಾಂಕಿಂಗ್ ನಿಯಮ ತಿಳಿಯಿರಿ
ಬ್ಯಾಂಕ್ ನಲ್ಲಿ ಲಾಕರ್ ಸೇವೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಚಿನ್ನಭರಣ ಸೇರಿದಂತೆ ಸಾಕಷ್ಟು ಮೌಲ್ಯಯುತ ಆಗಿರುವಂತಹ ವಸ್ತುಗಳನ್ನ ಜನರು ಇಡ್ತಾರೆ. ಅದೇ ರೀತಿಯಲ್ಲಿ ಬ್ಯಾಂಕ್ ಶುಲ್ಕವನ್ನು ಕೂಡ ವಿಧಿಸುತ್ತದೆ.
- ಬ್ಯಾಂಕ್ ಲಾಕರ್ ನಿಯಮಗಳನ್ನು ಸಂಪೂರ್ಣವಾಗಿ ತಿಳಿಯಿರಿ.
- ಬ್ಯಾಂಕಿನ ಲಾಕರ್ ಗಳನ್ನು ಯಾಕೆ ಬಳಸ್ತಾರೆ ಗೊತ್ತಾ?
- ಬ್ಯಾಂಕಿನ ಲಾಕರ್ ನಲ್ಲಿ ಚಿನ್ನ ಇಡೋಕೆ ಎಷ್ಟು ಶುಲ್ಕ ಕಟ್ಟಬೇಕು
Bank Locker Charges : ಬ್ಯಾಂಕ್ ಅನ್ನೋದು ಕೇವಲ ಹಣವನ್ನ ಸೇವಿಂಗ್ ರೂಪದಲ್ಲಿ ಇಡುವುದಕ್ಕೆ ಬಳಸಲಾಗುವಂತಹ ಒಂದು ಸ್ಥಳ ಮಾತ್ರ ಅಲ್ಲ ಇದರಲ್ಲಿ ನೀವು ನಿಮ್ಮ ಅಮೂಲ್ಯವಾಗಿರುವಂತಹ ವಸ್ತುಗಳನ್ನು ಕೂಡ ಸುರಕ್ಷಿತವಾಗಿ ಲಾಕರ್ ನಲ್ಲಿ ಇಡುವಂತಹ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಕಳ್ಳತನದ ಭಯದಿಂದಾಗಿ ಬ್ಯಾಂಕ್ ನಲ್ಲಿ ಲಾಕರ್ ಸೇವೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಚಿನ್ನಭರಣ (gold jewelry) ಸೇರಿದಂತೆ ಸಾಕಷ್ಟು ಮೌಲ್ಯಯುತ ಆಗಿರುವಂತಹ ವಸ್ತುಗಳನ್ನ ಜನರು ಇಡ್ತಾರೆ. ಅದೇ ರೀತಿಯಲ್ಲಿ ಬ್ಯಾಂಕ್ ಈ ಸೇವೆಯನ್ನು ನೀಡುವುದಕ್ಕಾಗಿ ನಿರ್ದಿಷ್ಟ ಸಮಯಕ್ಕೆ ಅದರದ್ದೇ ಆಗಿರುವಂತಹ ಶುಲ್ಕವನ್ನು ಕೂಡ ವಿಧಿಸುತ್ತದೆ.
ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ವಾ? ದಂಡ ಎಷ್ಟು ಕಟ್ಟಬೇಕು ಗೊತ್ತಾ?
ಬ್ಯಾಂಕ್ ಲಾಕರ್ ಚಾರ್ಜಸ್
ನಿಮ್ಮ ಅಮೂಲ್ಯವಾದ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಡಬೇಕು ಅಂದ್ರೆ ಬ್ಯಾಂಕ್ ಲಾಕರ್ ಗಳು ಯಾವುದೇ ಅನುಮಾನವಿಲ್ಲದೆ ಅತ್ಯಂತ ಸುರಕ್ಷಿತವಾದ ಸ್ಥಳ ಎಂದು ಹೇಳಬಹುದು. ಆದರೆ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಲಾಕರ್ ಚಾರ್ಜರ್ಸ್ ಗಳಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಪ್ರತಿಯೊಂದು ಪ್ರಮುಖ ಬ್ಯಾಂಕುಗಳ ಲಾಕರ್ ಚಾರ್ಜಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಇಲ್ಲಿ ದೊಡ್ಡ ಲಾಕರ್ ಗೆ ಜಿಎಸ್ಟಿ ಶುಲ್ಕದ ಜೊತೆಗೆ ಹನ್ನೆರಡು ಸಾವಿರ ರೂಪಾಯಿ ಇದೆ. ಚಿಕ್ಕ ಲಾಕರ್ ಗೆ 2000 ರೂಪಾಯಿ ಜೊತೆಗೆ ಜಿಎಸ್ಟಿ ಶುಲ್ಕವನ್ನು ವಿಧಿಸಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಗರ ಪ್ರದೇಶದಲ್ಲಿ 2000 ರೂಪಾಯಿವರೆಗೆ ಇದ್ರೆ ಗ್ರಾಮೀಣ ಭಾಗದಲ್ಲಿ, 1250 ರೂಪಾಯಿ ಆಗಿರುತ್ತದೆ.
ಕೆನರಾ ಬ್ಯಾಂಕ್ ನಲ್ಲಿ ನಗರ ಭಾಗದಲ್ಲಿ 2000 ರೂಪಾಯಿ ಹಾಗೂ ಜಿಎಸ್ಟಿ ಶುಲ್ಕ ಇದ್ರೆ ಗ್ರಾಮೀಣ ಭಾಗದಲ್ಲಿ ಸಾವಿರ ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಈ ಹಳೆಯ ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ
ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ನಗರ ಭಾಗದಲ್ಲಿ 1350 ರೂಪಾಯಿಗಳ ಜೊತೆಗೆ ಜಿಎಸ್ಟಿ ಶುಲ್ಕ ಇದ್ರೆ ಗ್ರಾಮೀಣ ಭಾಗದಲ್ಲಿ 550 ರೂಪಾಯಿಗಳ ಜೊತೆ ಜಿಎಸ್‌ಟಿ ಶುಲ್ಕವನ್ನ ವಿಧಿಸಲಾಗಿದೆ.
ಐಸಿಐಸಿಐ ಬ್ಯಾಂಕ್ ನಲ್ಲಿರುವಂತಹ ಲಾಕರ್ ಶುಲ್ಕದ ಬಗ್ಗೆ ನೋಡೋದಾದ್ರೆ ಇಲ್ಲಿ ನಗರ ಭಾಗದಲ್ಲಿ ಲಾಕರ್ ಮೇಲೆ 3500 ರೂಪಾಯಿಗಳವರೆಗೆ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿ 1, 200 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ.
What Are the Fees for Keeping Gold in a Bank Locker