ಕಾರು, ಬೈಕಿಗೆ ಅಪಘಾತ ಆದ್ಮೇಲೆ ಇನ್ಸುರೆನ್ಸ್ ಕ್ಲೈಮ್ ಮಾಡೋದು ಹೇಗೆ? ಮಾಹಿತಿ ಇಲ್ಲಿದೆ

ಅಪಘಾತಗಳು ನಡೆದಾಗ ಮೊದಲಿಗೆ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿ ಗೆ ಕರೆ ಮಾಡಿ ನಡೆದಿರುವಂತಹ ಪ್ರತಿಯೊಂದು ಘಟನೆಗಳನ್ನು ಕೂಡ ಯಾವುದೇ ಮುಚ್ಚು ಮರೆ ಇಲ್ಲದೆ ನೇರವಾಗಿ ಹೇಳಿಕೊಳ್ಳಿ.

- - - - - - - - - - - - - Story - - - - - - - - - - - - -
  • ಕಾರು, ಬೈಕು ವಾಹನಗಳಿಗೆ ಅಪಘಾತ ಆದ್ಮೇಲೆ ಇನ್ಸುರೆನ್ಸ್ ಕ್ಲೈಮ್ ಮಾಡೋದು ಹೇಗೆ?
  • ಇನ್ಸೂರೆನ್ಸ್ ಕ್ಲೇಮ್ ಮಾಡೋದಕ್ಕೆ ಸರಿಯಾದ ಡಾಕ್ಯುಮೆಂಟ್ಸ್ ಕೊಡಲೇಬೇಕು
  • ಇನ್ಸೂರೆನ್ಸ್ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತೆ

insurance claim : ನಮ್ಮ ದೇಶದಲ್ಲಿ ವಾಹನ ಚಲಾವಣೆ ಮಾಡ್ಬೇಕು ಅಂತ ಅಂದ್ರೆ ಡ್ರೈವಿಂಗ್ ಲೈಸೆನ್ಸ್ ಹಾಗೂ ಗಾಡಿಯ ಆರ್ ಸಿ ಕಾರ್ಡ್ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಇನ್ಸೂರೆನ್ಸ್ (Vehicle Insurance) ಕೂಡ ಇರಬೇಕಾಗುತ್ತೆ. ಇನ್ನು ಯಾವುದೇ ರೀತಿಯ ಅಪ-ಘಾತಗಳು ಸಂಭವಿಸಿದಾಗ ವಾಹನಕ್ಕೆ ಇನ್ಸೂರೆನ್ಸ್ ಕ್ಲೈಮ್ (insurance claim) ಮಾಡೋದು ಹೇಗೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುವುದು ಕೂಡ ಪ್ರಮುಖವಾಗಿದ್ದು, ಈ ಲೇಖನದ ಮೂಲಕ ಆ ಮಾಹಿತಿಯನ್ನು ನೀವು ತಿಳಿದುಕೊಳ್ಳಲಿದ್ದೀರಿ.

ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡೋಕೆ ಎಷ್ಟು ಶುಲ್ಕ ಕಟ್ಟಬೇಕು? ಬ್ಯಾಂಕಿಂಗ್ ನಿಯಮ ತಿಳಿಯಿರಿ

ಇನ್ಸೂರೆನ್ಸ್ ಕ್ಲೈಮ್ ಮಾಡುವ ರೀತಿ

ಇಂತಹ ಅಪಘಾತಗಳು ನಡೆದಾಗ ಮೊದಲಿಗೆ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿ ಗೆ (insurance Company) ಕರೆ ಮಾಡಿ ನಡೆದಿರುವಂತಹ ಪ್ರತಿಯೊಂದು ಘಟನೆಗಳನ್ನು ಕೂಡ ಯಾವುದೇ ಮುಚ್ಚು ಮರೆ ಇಲ್ಲದೆ ನೇರವಾಗಿ ಹೇಳಿಕೊಳ್ಳಿ. ಇದಾದ ನಂತರ ಪೊಲೀಸ್ ಸ್ಟೇಷನ್ ನಿಂದ ಎಫ್ಐಆರ್ ಪಡೆದುಕೊಳ್ಳಿ.

ಕಾರು, ಬೈಕಿಗೆ ಅಪಘಾತ ಆದ್ಮೇಲೆ ಇನ್ಸುರೆನ್ಸ್ ಕ್ಲೈಮ್ ಮಾಡೋದು ಹೇಗೆ? ಮಾಹಿತಿ ಇಲ್ಲಿದೆ

ಯಾವುದು ಲೀಗಲ್ ಪ್ರಾಬ್ಲಮ್ ಇಲ್ಲ ಅಂದ್ರೆ ಎಫ್ ಐ ಆರ್ ಅಗತ್ಯ ಕೂಡ ಇರೋದಿಲ್ಲ. ನಿಮ್ಮ ಅಪಘಾತದ ಪ್ರೂಫ್ ಗಾಗಿ ಘಟನೆ ನಡೆದಿರುವಂತಹ ಸ್ಥಳದ ಹಾಗೂ ನಿಮ್ಮ ವಾಹನದ ಫೋಟೋವನ್ನು ಕೂಡಲೇ ತೆಗೆದುಕೊಳ್ಳಿ. ಇದು ಅತ್ಯಂತ ಪ್ರಮುಖವಾಗಿ ಈ ಸಂದರ್ಭದಲ್ಲಿ ಬೇಕಾಗಿರುವಂತಹ ಒಂದು ಪ್ರೂಫ್ ಆಗಿರುತ್ತದೆ.

Vehicle Insuranceಇದಾದ ನಂತರ ನಿಮ್ಮ ಇನ್ಸೂರೆನ್ಸ್ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಲಾಗಿನ್ ಆಗ್ಬೇಕು. ಇನ್ಸೂರೆನ್ಸ್ ಕ್ಲೈಮ್ ಮಾಡುವಂತಹ ಪೇಜ್ ಗೆ ಹೋಗಿ ಅಲ್ಲಿ ಡಾಕ್ಯುಮೆಂಟ್, ಪಾಲಿಸಿ ಡೀಟೇಲ್ಸ್, ವಾಹನದ ಆರ್‌ಸಿ ಕಾರ್ಡ್, ಎಫ್ ಐ ಆರ್ ಕಾಪಿ ಹಾಗೂ ಕ್ಲೈಮ್ ಮಾಡುವಂತಹ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಸಬ್ಮಿಟ್ ಮಾಡಿ.

ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ವಾ? ದಂಡ ಎಷ್ಟು ಕಟ್ಟಬೇಕು ಗೊತ್ತಾ?

ಇನ್ನು ಈ ಘಟನೆ ನಡೆದಿರುವಂತಹ ಸ್ಥಳಕ್ಕೆ ಹೋಗಿ ನಿಮ್ಮ ವಾಹನವನ್ನು ಪರಿಶೀಲನೆ ಮಾಡುವುದಕ್ಕೆ ಕಂಪನಿಯಿಂದ ಅಧಿಕಾರಿಗಳು ಬರ್ತಾರೆ. ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ಅಪ್ರೂವ್ ಆದಮೇಲೆ ನೀವು ನಿಮ್ಮ ವಾಹನವನ್ನು ರಿಪೇರಿ ಮಾಡೋದಿಕ್ಕೆ ಗ್ಯಾರೇಜ್ ಅಥವಾ ನಿಮ್ಮ ಕಾರಿನ ಸರ್ವಿಸ್ ಸ್ಟೇಷನ್ ನಲ್ಲಿ ಕೊಡಬಹುದು. ಬೇರೆ ಗ್ಯಾರೇಜ್ ಅಲ್ಲಿ ರಿಪೇರಿ ಮಾಡಿದ್ರೆ ರಿಪೇರಿ ಬಿಲ್ ಕೊಟ್ಟು ನಿಮ್ಮ ಕ್ಲೇಮ್ ಹಣವನ್ನು ಪಡೆದು ಅದನ್ನ ಭರ್ತಿ ಮಾಡಬಹುದಾಗಿದೆ.

How to File an Insurance Claim for Car and Bike Accidents, Step-by-Step Guide

English Summary
Related Stories