ಇಂಟರ್ನೆಟ್ ಇಲ್ಲದೆ ಇದ್ರು ಯುಪಿಐ ಪೇಮೆಂಟ್ ಮಾಡೋದು ಹೇಗೆ? ಸುಲಭ ವಿಧಾನ
NPCI ಪರಿಹಾರವನ್ನು ಹುಡುಕಿದ್ದು ಯು ಎಸ್ ಎಸ್ ಡಿ ಮೂಲಕ ಇಂಟರ್ನೆಟ್ ಇಲ್ದೆ ಇದ್ರೂ ಕೂಡ ಕ್ಯಾಶ್ಲೆಸ್ ಟ್ರಾನ್ಸಾಕ್ಷನ್ ಮಾಡುವಂತಹ ವಿಧಾನವನ್ನು ಪರಿಚಯಿಸಿದೆ.
- ಇಂಟರ್ನೆಟ್ ಇಲ್ಲದೆ ಹಣ ರವಾನೆ ಇನ್ನಷ್ಟು ಸುಲಭ.
- ಹೊಸ ವಿಧಾನದ ಮೂಲಕ ನಿಮಗೆ ಬೇಕಾದವರಿಗೆ ಕ್ಯಾಶ್ಲೆಸ್ ಟ್ರಾನ್ಸಾಕ್ಷನ್ ಮಾಡಿ.
- NPCI ಪರಿಚಯಿಸಿದೆ ಇಂಟರ್ನೆಟ್ ರಹಿತ ಹಣ ವರ್ಗಾವಣೆ ವಿಧಾನ.
UPI Payment : ಒಂದು ಕಾಲದಲ್ಲಿ ಆನ್ಲೈನ್ ಟ್ರ್ಯಾನ್ಸಾಕ್ಷನ್ ನಮ್ಮ ಭಾರತಕ್ಕೆ ಸರಿಬರಲ್ಲ ಅಂತ ಯಾರೋ ಒಬ್ರು ಹೇಳಿದ್ರು. ಆದರೆ ಇವತ್ತು ಚಿಕ್ಕ ಅಂಗಡಿಗಳಿಂದ ಹಿಡಿದು ದೊಡ್ಡ ಉದ್ಯಮಗಳು ಕೂಡ ಆನ್ಲೈನ್ ಟ್ರಾನ್ಸಾಕ್ಷನ್ (Online Transaction) ಅನ್ನು ತಮ್ಮ ದಿನನಿತ್ಯದ ವ್ಯಾಪಾರ ವಹಿವಾಟುಗಳಿಗೆ ಪ್ರಮುಖವಾಗಿ ಬಳಸಿಕೊಳ್ಳುತ್ತಿವೆ.
ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವಂತಹ ದೇಶ ಅಂದ್ರೆ ಅದು ನಮ್ಮ ಭಾರತ. ಆದರೆ ಯುಪಿಐ ಟ್ರಾನ್ಸಾಕ್ಷನ್ಗಳನ್ನ ಮಾಡೋದಕ್ಕೆ ಸರಿಯಾದ ಇಂಟರ್ನೆಟ್ ಕನೆಕ್ಟಿವಿಟಿ (Internet Connectivity) ಬೇಕೇ ಬೇಕು ಇಲ್ಲವಾದಲ್ಲಿ, ಸಾಕಷ್ಟು ಬಾರಿ ಟ್ರಾನ್ಸ್ಯಾಕ್ಷನ್ ಮಧ್ಯಕ್ಕೆ ನಿಂತು ಹೋಗಿ ಪೇಚಿಗೆ ಸಿಲುಕಿದವರು ಕೂಡ ಸಾಕಷ್ಟು ಮಂದಿ ಇದ್ದಾರೆ.
ಗೃಹಿಣಿಯರಿಗೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹಾಗಾದ್ರೆ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಈಗ ಈ ಸಮಸ್ಯೆಗೆ NPCI ಪರಿಹಾರವನ್ನು ಹುಡುಕಿದ್ದು ಯು ಎಸ್ ಎಸ್ ಡಿ ಮೂಲಕ ಇಂಟರ್ನೆಟ್ ಇಲ್ದೆ ಇದ್ರೂ ಕೂಡ ಕ್ಯಾಶ್ಲೆಸ್ ಟ್ರಾನ್ಸಾಕ್ಷನ್ ಮಾಡುವಂತಹ ವಿಧಾನವನ್ನು ಪರಿಚಯಿಸಿದ್ದು ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
USSD ಮೂಲಕ ಹೇಗೆ ಇಂಟರ್ನೆಟ್ ಇಲ್ಲದೆ ಹಣ ಸೆಂಡ್ ಮಾಡಬಹುದು?
ಬ್ಯಾಂಕ್ ಜೊತೆಗೆ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ನಿಂದ *99# ಡಯಲ್ ಮಾಡಿ, ನಿಮಗೆ ಬೇಕಾಗಿರುವಂತಹ ಭಾಷೆಯನ್ನು ಮೊದಲಿಗೆ ಸೆಲೆಕ್ಟ್ ಮಾಡಬೇಕು.
ಇಲ್ಲಿ ಬೇರೆ ಬೇರೆ ರೀತಿಯ ಪ್ರಕ್ರಿಯೆಗಳಿಗಾಗಿ ವಿಭಿನ್ನ ರೀತಿಯ ಆಪ್ಷನ್ಗಳ ಆಯ್ಕೆ ಇರುತ್ತದೆ. ಬೇರೆಯವರಿಗೆ ಹಣವನ್ನು ಸೆಂಡ್ ಮಾಡಬೇಕಿದ್ದರೆ ನೀವು 1ನ್ನು ಆಯ್ಕೆ ಮಾಡಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ 30 ಲಕ್ಷ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ
ಒಂದು ವೇಳೆ ನೀವು ಬೇರೆಯವರ ನಂಬರ್ ಗೆ ಹಣವನ್ನ ಕಳುಹಿಸಬೇಕಿದ್ದರೆ, ಆ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ಟೈಪ್ ಮಾಡಿ ಸೆಂಡ್ ಬಟನ್ ಅನ್ನು ಒತ್ತಬೇಕು. ಒಂದು ವೇಳೆ ಅವರ ಯುಪಿಐ ಐಡಿಯನ್ನು ಬಂದಿದ್ರೆ ಅದನ್ನು ಟೈಪ್ ಮಾಡಿ ಸೆಂಡ್ ಬಟನ್ ಕ್ಲಿಕ್ ಮಾಡಬೇಕು.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ 10,000 ದಂಡ; ಏನನ್ನುತ್ತೆ ಆರ್‌ಬಿಐ ರೂಲ್ಸ್?
ಎರಡರಲ್ಲಿ ಒಂದು ಆಯ್ಕೆಯನ್ನು ಮಾಡಿದ ನಂತರ ಎಷ್ಟು ಹಣವನ್ನು ಕಳುಹಿಸಬೇಕು ಎನ್ನುವುದನ್ನ ಟೈಪ್ ಮಾಡಬೇಕು.
ಕೊನೆಯಲ್ಲಿ ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಎಂಟ್ರಿ ಮಾಡಿ ಸೆಂಡ್ ಆಯ್ಕೆಯನ್ನು ಒತ್ತಿದರೆ ನೀವು ಯಾರಿಗೆ ಹಣವನ್ನು ಕಳಿಸಬೇಕು ಎಂದಿದ್ದೀರೋ ಅವರಿಗೆ ಹಣ ರವಾನೆ ಆಗುತ್ತದೆ.
How to Make UPI Payments Without Internet, Easy Method Explained