ಗೃಹಿಣಿಯರಿಗೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಹಾಗಾದ್ರೆ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
- ಮನೆಯಲ್ಲೇ ಇರುವ ಗೃಹಿಣಿಯರಿಗೆ ಕ್ರೆಡಿಟ್ ಕಾರ್ಡ್ ಸಿಗುತ್ತಾ
- ಕ್ರೆಡಿಟ್ ಕಾರ್ಡ್ ಪಡೆಯಲು ಇರುವ ಮಾರ್ಗ ಏನು ತಿಳಿಯಿರಿ
- ಗೃಹಿಣಿಯರು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ
Credit Card : ಉದ್ಯೋಗದಲ್ಲಿರುವಂತಹ ವ್ಯಕ್ತಿಗೆ ಬ್ಯಾಂಕುಗಳು (Banks) ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದನ್ನ ನೀವು ಗಮನಿಸಿದ್ದೀರಾ. ಆದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋಕೆ ಹೊರಟಿರೋದು ಗೃಹಿಣಿಯರಿಗೆ ಬ್ಯಾಂಕ್ಗಳು ಕ್ರೆಡಿಟ್ ಕಾರ್ಡ್ (Bank Credit Card) ಕೊಡುವುದರ ಬಗ್ಗೆ.
ಹಾಗಾದ್ರೆ ಅದಕ್ಕಿರುವಂತಹ ನಿಯಮಗಳು ಅಥವಾ ಪ್ರಕ್ರಿಯೆಗಳು ಏನು ಅನ್ನೋದನ್ನ ತಿಳಿಯೋಣ.
ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 5000 ರೂಪಾಯಿ! ಕೂಡಲೇ ಅರ್ಜಿ ಸಲ್ಲಿಸಿ
ಗೃಹಿಣಿಯರಿಗೆ ಕ್ರೆಡಿಟ್ ಕಾರ್ಡ್ ಸಿಗುತ್ತಾ?
ಆಕ್ಸಿಸ್ ಬ್ಯಾಂಕ್ (Axis Bank) ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದ್ದು ಅಲ್ಲಿ ಗೃಹಿಣಿಯರಿಗೆ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಆಗಿರುತ್ತದೆ ಅಥವಾ ಆಡ್ ಆನ್ ಕಾರ್ಡ್ ಆಗಿರುತ್ತದೆ.
ಈ ಬಗ್ಗೆ ಕ್ರೆಡಿಟ್ ಕಾರ್ಡ್ ಅಂದ್ರೆ ಏನು ಅನ್ನೋದು ಸಾಕಷ್ಟು ಜನರಿಗೆ ತಿಳಿಯದೆ ಇರುವಂತಹ ಸಾಧ್ಯತೆಗಳು ಹೆಚ್ಚಿವೆ. ಅಂದರೆ ಆ ಗೃಹಿಣಿಯರ ಗಂಡ ಅಂದರೆ ಜೀವನ ಸಂಗಾತಿಯ ಕ್ರೆಡಿಟ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಆಡ್ ಆನ್ ಕ್ರೆಡಿಟ್ ಕಾರ್ಡ್ ಗಳು ಇವುಗಳಾಗಿರುತ್ತವೆ.
ಇದದ ಲಿಮಿಟ್ ಪ್ರಾಥಮಿಕವಾಗಿರುವಂತಹ ಕ್ರೆಡಿಟ್ ಕಾರ್ಡ್ ರೀತಿಯಲ್ಲೇ ಇರುತ್ತೆ. ಆದರೆ ಆ ಕ್ರೆಡಿಟ್ ಕಾರ್ಡ್ ಅನ್ನು ಬಳಸುವಂತಹ ಗೃಹಿಣಿಯ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಅನ್ನು ಇಡಬೇಕಾಗಿರುತ್ತದೆ ಹಾಗೂ ಆ ಮೊತ್ತಕ್ಕೆ ಸರಿ ಸಮಾನ ಆಗಿರುವಂತಹ ರೀತಿಯಲ್ಲೇ ಕ್ರೆಡಿಟ್ ಕಾರ್ಡ್ ಗೆ ಲಿಮಿಟ್ ಅನ್ನು ನಿಗದಿಪಡಿಸಲಾಗುತ್ತದೆ.
ಮಹಿಳೆಯರೆ ಮನೆಯಲ್ಲೇ ಈ ಬಿಸಿನೆಸ್ ಪ್ರಾರಂಭಿಸಿ! ಲಾಭ ಕೂಡ ಜಬರ್ದಸ್ತ್ ಆಗಿದೆ
ಈ ಕ್ರೆಡಿಟ್ ಕಾರ್ಡ್ ಬಳಕೆಯ ಮೂಲಕ ಗೃಹಿಣಿಯರು ಸಾಕಷ್ಟು ಉಳಿತಾಯ ಮಾಡಬಹುದಾಗಿದ್ದು ಖರೀದಿಸುವಂತಹ ವಸ್ತುಗಳ ಮೇಲಿನ ರಿವಾರ್ಡ್ ಪಾಯಿಂಟ್ ಗಳನ್ನು ರಿಡೀಮ್ ಮಾಡಿಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಮೂಲಕ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವುದಕ್ಕೆ ಅವರಿಗೆ ಅವಕಾಶ ಇದೆ.
ಮಕ್ಕಳ ಆಸ್ತಿ ಮೇಲೆ ತಂದೆ-ತಾಯಿಗೆ ಹಕ್ಕಿದ್ಯಾ? ಕಾನೂನು ನಿಯಮ ಏನು ಗೊತ್ತಾ
ಗೃಹಿಣಿಯರಿಗೆ ಕ್ರೆಡಿಟ್ ಕಾರ್ಡ್ ನೀಡುವುದಕ್ಕೆ ಇರುವ ಷರತ್ತುಗಳು!
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಗೃಹಿಣಿಯ ಪತಿಯ ಬಳಿ ಕ್ರೆಡಿಟ್ ಕಾರ್ಡ್ ಇರಬೇಕು ಹಾಗೂ ಆ ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಾಗಿರಬೇಕು.
ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಾಗಿ ಗೃಹಿಣಿಯ ಹೆಸರಿನಲ್ಲಿ ಆ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಅನ್ನು ಇರಿಸಿರಬೇಕು. ಅದರ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.
ಇದಕ್ಕಿಂತ ಮುಂಚೆ ಅರ್ಜಿಯ ಫಾರ್ಮ್ ಅನ್ನು ಭರಿಸಬೇಕು. ಪಾಸ್ಪೋರ್ಟ್ ಸೈಜ್ ಫೋಟೋ ಜೊತೆಗೆ ಕೇಳಲಾಗುವಂತಹ ಐಡಿ ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳಂತಹ ಡಾಕ್ಯುಮೆಂಟ್ಸ್ ಗಳ್ನ ನೀಡಬೇಕು.
ಅಡ್ರೆಸ್ ಪ್ರೂಫ್, ಆದಾಯದ ಪ್ರೂಫ್, ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಗಳನ್ನು ನೀವು ಈ ಸಂದರ್ಭದಲ್ಲಿ ನೀಡಬೇಕಾಗಿ ಬರುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ 30 ಲಕ್ಷ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ
ಮಹಿಳೆಯರು ಅಧಿಕೃತ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಇಲ್ಲವೇ ನೇರವಾಗಿ ಬ್ಯಾಂಕಿಗೆ ತೆರಳಿ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನೀವು ನೀಡಿರುವಂತಹ ವಿವರ ಹಾಗೂ ಡಾಕ್ಯುಮೆಂಟ್ಸ್ಗಳನ್ನ ನೀಡಿದ ನಂತರವಷ್ಟೇ ಬ್ಯಾಂಕ್ ನಿಮಗೆ ಕ್ರೆಡಿಟ್ ಕಾರ್ಡ್ ಕೊಡುತ್ತದೆ.
Can Housewives Get a Credit Card, Learn the Process and Requirements