ಸ್ಟೇಟ್ ಬ್ಯಾಂಕ್ ನಲ್ಲಿ 30 ಲಕ್ಷ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

Personal Loan : ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಶೇಕಡಾ 11.35 ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಅನ್ನು ಕೊಡುತ್ತೆ.

  • 30 ಲಕ್ಷ ವೈಯಕ್ತಿಕ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು
  • ಸ್ಟೇಟ್ ಬ್ಯಾಂಕ್ ನಲ್ಲಿ ಸಿಗುತ್ತೆ 30 ಲಕ್ಷದವರೆಗೆ ವೈಯಕ್ತಿಕ ಸಾಲ
  • 11.25% ಬಡ್ಡಿ ದರದಲ್ಲಿ ಸಿಗುತ್ತೆ ವೈಯಕ್ತಿಕ ಸಾಲ

Personal Loan : ಈಗೆಲ್ಲ ಮುಂಚಿನ ಹಾಗೆ ಯಾರು ಯಾರನ್ನು ನಂಬುವುದಿಲ್ಲ. ಹಾಗಾಗಿ ಯಾರಿಂದಲೂ ಒಂದು ರೂಪಾಯಿ ಸಾಲ ಪಡೆದುಕೊಳ್ಳುವುದಕ್ಕೂ ಕೂಡ ಕಷ್ಟವಾಗುತ್ತೆ. ನಾಳೆ ಕೊಡ್ತೀನಿ ಅಂತ ಯಾರಿಂದಲೂ ಕೈ ಸಾಲ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ

ಅದರಲ್ಲೂ ಬಂಧು ಮಿತ್ರರ ಬಳಿ ಸಾಲ ಕೇಳುವಂತೆಯೇ ಇಲ್ಲ. ಹಾಗಾದ್ರೆ ನಮ್ಮ ತುರ್ತು ಪರಿಸ್ಥಿತಿಗೆ ನಮಗೆ ಹಣ ಯಾರು ಕೊಡುತ್ತಾರೆ ಅಂತ ಯೋಚನೆ ಮಾಡಿದರೆ ತಕ್ಷಣ ಕಣ್ಣೆದುರು ಬರೋದೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು. ಸುಲಭವಾಗಿ ಅತ್ಯಂತ ಶೀಘ್ರವಾಗಿ ಬ್ಯಾಂಕ್ ನಿಂದ (Bank Loan) ಹಣ ಸಾಲವಾಗಿ ಪಡೆದುಕೊಳ್ಳಬಹುದು.

ಹೌದು, ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು (Personal Loan) ಕೊಡುತ್ತವೆ. ನಮ್ಮ ಸಂಬಳಕ್ಕಿಂತ ಹೆಚ್ಚಿನ ಖರ್ಚು ಇದ್ದರೆ ಆ ತಿಂಗಳ ಖರ್ಚು ನಿಭಾಯಿಸುವುದಕ್ಕೆ ವೈಯಕ್ತಿಕ ಸಾಲವನ್ನು ಮಾಡಬಹುದು. ನಂತರ ಪ್ರತಿ ತಿಂಗಳು EMI ಮೂಲಕ ಮರುಪಾವತಿ ಮಾಡಬಹುದು. ಇನ್ನು ನಿಮಗೆ ವೈಯಕ್ತಿಕ ಸಾಲ ತೆಗೆದುಕೊಳ್ಳಬೇಕು ಅಂತ ಇದ್ರೆ ಎಸ್ ಬಿ ಐ ನಲ್ಲಿ ಟ್ರೈ ಮಾಡಬಹುದು.

ಸ್ಟೇಟ್ ಬ್ಯಾಂಕ್ ನಲ್ಲಿ 30 ಲಕ್ಷ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ 10,000 ದಂಡ; ಏನನ್ನುತ್ತೆ ಆರ್‌ಬಿಐ ರೂಲ್ಸ್?

ವೈಯಕ್ತಿಕ ಸಾಲಕ್ಕೆ ಎಸ್‌ಬಿಐ ಬಡ್ಡಿ ದರ

ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಶೇಕಡಾ 11.35 ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಅನ್ನು ಕೊಡುತ್ತೆ. ಈ ರೀತಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವುದಕ್ಕೆ ಬೇರೆ ಯಾವ ದಾಖಲೆಗಳನ್ನು ಕೊಡದೆ ಇದ್ದರೂ ಪರವಾಗಿಲ್ಲ, ನಿಮ್ಮ ಕ್ರೆಡಿಟ್ ಸ್ಕೋರ್ ಮಾತ್ರ ಚೆನ್ನಾಗಿರಬೇಕು.

750 ರಿಂದ 800ಕ್ಕೂ ಹೆಚ್ಚಿನ ಕ್ರೆಡಿಟ್ ಪಾಯಿಂಟ್ ಹೊಂದಿದ್ರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ. ಅದೇ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕಡಿಮೆ ಇದ್ರೆ ನಿಮ್ಮ ಸಾಲದ ಅಪ್ಲಿಕೇಶನ್ ನ್ನು ಬ್ಯಾಂಕ್ ತಿರಸ್ಕರಿಸಬಹುದು.

Personal Loan

30 ಲಕ್ಷಕ್ಕೆ ತಿಂಗಳ ಇಎಮ್ಐ ಎಷ್ಟು ಪಾವತಿಸಬೇಕು?

ಎಸ್ ಬಿ ಐ ನಲ್ಲಿ ನೀವು 15 ವರ್ಷದ ಅವಧಿಗೆ 30 ಲಕ್ಷ ರೂಪಾಯಿಗಳನ್ನು ವೈಯಕ್ತಿಕ ಸಾಲವಾಗಿ ಪಡೆದುಕೊಂಡಿದ್ದೀರಿ ಎಂದು ಭಾವಿಸಿ. ಬಡ್ಡಿ ಮತ್ತು ಅಸಲು ಸೇರಿ 62,39, 732 ರೂಪಾಯಿಗಳನ್ನು ಪಾವತಿಸಬೇಕು. ಅಂದರೆ ನೀವು ಪಾವತಿಸಬೇಕಾದ ಒಟ್ಟು ಬಡ್ಡಿ 32,39,732 ರೂಪಾಯಿಗಳು

10ನೇ ತರಗತಿ ಪಾಸಾಗಿದ್ರೆ ಸ್ವಂತ ಪೆಟ್ರೋಲ್ ಬಂಕ್ ಶುರು ಮಾಡಿ; ಇಲ್ಲಿದೆ ಡೀಟೇಲ್ಸ್!

ಯಾರಿಗೆ ಸಿಗುತ್ತೆ ದೊಡ್ಡ ಮೊತ್ತದ ವೈಯಕ್ತಿಕ ಸಾಲ!

ವೈಯಕ್ತಿಕ ಸಾಲವನ್ನು ಕಡಿಮೆ ಮೊತ್ತದ ಸ್ಯಾಲರಿ ಹೊಂದಿರುವವರು ಪಡೆದುಕೊಳ್ಳಬಹುದು, ಆದರೆ 50 ರಿಂದ 6 ಲಕ್ಷ ರೂಪಾಯಿಗಳ ಮಾಸಿಕ ಸಂಬಳ ಹೊಂದಿರುವವರಿಗೆ 30 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ ಸಿಗುತ್ತದೆ.

ಈ ಸಾಲವನ್ನು ಆರು ತಿಂಗಳಿನಿಂದ 72 ತಿಂಗಳ ಒಳಗೆ ಮರುಪಾವತಿ ಮಾಡಬೇಕು. ನಿಮ್ಮ ಸಂಬಳದ 50% ನಷ್ಟು ಮಾತ್ರ ವಯಕ್ತಿಕ ಸಾಲವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ನೀವು 6 ಲಕ್ಷ ಸಾಲ ಮಾಡಿದರೆ ಪ್ರತಿ ತಿಂಗಳು 34,665 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

State Bank Personal Loan

ವೈಯಕ್ತಿಕ ಸಾಲಕ್ಕೆ ಬೇಕಾಗಿರುವ ದಾಖಲೆಗಳು

* ಆರು ತಿಂಗಳ ಸ್ಯಾಲರಿ ಸ್ಲಿಪ್
* ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಆಧಾರ್ ಕಾರ್ಡ್ ನಂತಹ ಐಡಿ ಪುರಾವೆ
* ನಿವಾಸ ಪ್ರಮಾಣ ಪತ್ರ
* ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

ಸಾಲ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ. ಆದರೆ ನಮಗೆ ಮರುಪಾವತಿ ಮಾಡಲು ಸಾಧ್ಯವಾಗುವಷ್ಟು ಮಾತ್ರ ತೆಗೆದುಕೊಂಡರೆ ಯಾವುದೇ ಆರ್ಥಿಕ ಹೊರೆಯನ್ನು ಅನುಭವಿಸಬೇಕಾಗಿಲ್ಲ. ಇಲ್ಲವಾದರೆ ಪ್ರತಿ ತಿಂಗಳ ಸಂಪೂರ್ಣ ಸಂಬಳವನ್ನು ತಿಂಗಳ ಇಎಂಐ ಭರಿಸುವುದಕ್ಕೆ ಮೀಸಲಿಡಬೇಕಾಗುತ್ತದೆ.

How Much EMI for 30 Lakh Personal Loan in State Bank Of India

English Summary
Related Stories