ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ 10,000 ದಂಡ; ಏನನ್ನುತ್ತೆ ಆರ್‌ಬಿಐ ರೂಲ್ಸ್?
ಒಬ್ಬ ವ್ಯಕ್ತಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬಹುದು ಹೀಗಾಗಿ ಸಾಕಷ್ಟು ಜನ ಐದಾರು ಅಕೌಂಟ್ ಹೊಂದಿರುತ್ತಾರೆ. ಆದರೆ ಒಂದು ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಸೇವಿಂಗ್ಸ್ ಅಕೌಂಟ್ ತೆರೆಯಲು ಸಾಧ್ಯವಿಲ್ಲ.
- ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್ ಹೊಂದಿದ್ದರೆ 10,000 ದಂಡ
- ಆರ್ ಬಿ ಐ ಇಂತಹ ನಿಯಮ ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ
- ಸೋಶಿಯಲ್ ಮೀಡಿಯಾದ ಈ ಸುದ್ದಿಯ ಸತ್ಯಾಸತ್ಯತೆಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್
Bank Account : ಒಂದಕ್ಕಿಂತ ಹೆಚ್ಚು ಅಕೌಂಟ್ಗಳನ್ನು ಬ್ಯಾಂಕಿನಲ್ಲಿ ಹೊಂದಿರುವುದು ಸಾಮಾನ್ಯ. ಕೆಲವರು ಒಂದೇ ಸೇವಿಂಗ್ಸ್ ಅಕೌಂಟ್ (Savings Account) ಹೊಂದಿದ್ದರೆ ಇನ್ನೂ ಕೆಲವರು ಬೇರೆ ಬೇರೆ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದಿರುತ್ತಾರೆ. ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ತೆರೆದರೆ 10,000 ದಂಡ ವಿಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯ ಸತ್ಯಾಸತ್ಯಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
10ನೇ ತರಗತಿ ಪಾಸಾಗಿದ್ರೆ ಸ್ವಂತ ಪೆಟ್ರೋಲ್ ಬಂಕ್ ಶುರು ಮಾಡಿ; ಇಲ್ಲಿದೆ ಡೀಟೇಲ್ಸ್!
ಒಂದಕ್ಕಿಂತ ಹೆಚ್ಚು ಅಕೌಂಟ್ ಹೊಂದಿದ್ದರೆ 10,000 ದಂಡ!
ಸೋಶಿಯಲ್ ಮೀಡಿಯಾ ಇಂದು ಸುದ್ದಿಯನ್ನು ಒಬ್ಬರಿಂದ ಒಬ್ಬರಿಗೆ ತಲುಪಿಸುವ ಅತ್ಯಂತ ವೇಗದ ಮಾಧ್ಯಮವಾಗಿದೆ. ನೀವು ಎಲ್ಲೋ ಕುಳಿತು ಏನನ್ನೋ ಬರೆದು ಪೋಸ್ಟ್ ಮಾಡಿದರೆ ಕ್ಷಣ ಮಾತ್ರದಲ್ಲಿ ಅದು ಕೋಟ್ಯಂತರ ಜನರನ್ನು ತಲುಪುತ್ತದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಕ್ಷಣಕೊಂದು ಹೊಸ ಸುದ್ದಿಗಳು ಹರಿದಾಡುತ್ತವೆ. ಆದರೆ ಈ ಸುದ್ದಿಗಳು ಸತ್ಯವೋ ಸುಳ್ಳು ಎಂದು ಪರಿಶೀಲಿಸಿದರೆ ಸುಮಾರು 99% ನಷ್ಟು ಸುದ್ದಿ ಸುಳ್ಳೇ ಆಗಿರುತ್ತದೆ ಎನ್ನುವುದು ಶೋಚನೀಯ.
ಹೌದು, ಇಂತಹ ನೂರಾರು ಸುಳ್ಳು ಸುದ್ದಿಗಳಲ್ಲಿ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆಯ ಬಗ್ಗೆ ಹರಡಿರುವ ಸುದ್ದಿಯು ಕೂಡ ಸೇರಿಕೊಂಡಿದೆ. ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ 10,000 ರೂ.ದಂಡ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಎಷ್ಟೋ ಜನ ಭಯಗೊಂಡು ಬ್ಯಾಂಕ್ ಅನ್ನು ಸಂಪರ್ಕಿಸಿದ್ದು ಆಗಿದೆ. ಆದರೆ ಖಂಡಿತವಾಗಿ ಇದು ಫೇಕ್ ನ್ಯೂಸ್ ಅಷ್ಟೇ. ಒಂದಕ್ಕಿಂತ ಹೆಚ್ಚು ಅಕೌಂಟು ಹೊಂದಿದ್ರೆ ಯಾವುದೇ ಬ್ಯಾಂಕ್ ದಂಡ ವಿಧಿಸುವುದಿಲ್ಲ ಅಥವಾ ಆರ್‌ಬಿಐ ಇಂತಹ ಯಾವ ನಿಯಮವನ್ನು ಜಾರಿಗೆ ತಂದಿಲ್ಲ.
ಆರ್ ಬಿ ಐ ಸ್ಪಷ್ಟನೆ!
ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿರುವುದು ನಮ್ಮ ದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಂದೊಡ್ಡುವುದಿಲ್ಲ.
ಈ ಹಳೆಯ ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ
ಎಷ್ಟು ಖಾತೆಯನ್ನು ಹೊಂದಬಹುದು!
ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಬ್ಯಾಂಕ್ ನಲ್ಲಿ ಎಷ್ಟು ಖಾತೆಯನ್ನು ಹೊಂದಿರಬೇಕು ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ನಿಯಮಗಳು ಇಲ್ಲ. ಒಬ್ಬ ವ್ಯಕ್ತಿ ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬಹುದು ಹೀಗಾಗಿ ಸಾಕಷ್ಟು ಜನ ಐದಾರು ಅಕೌಂಟ್ ಹೊಂದಿರುತ್ತಾರೆ. ಆದರೆ ಒಂದು ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಸೇವಿಂಗ್ಸ್ ಅಕೌಂಟ್ ತೆರೆಯಲು ಸಾಧ್ಯವಿಲ್ಲ.
ಅದರ ಬದಲು ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಬ್ಯಾಂಕ್ ಖಾತೆ ತೆರೆದ ಮೇಲೆ ಮಿನಿಮಮ್ ಬ್ಯಾಲೆನ್ಸ್ ಅಂದರೆ ಕನಿಷ್ಠ ಖಾತೆಯ ಮೊತ್ತವನ್ನು ಕಾಯ್ದುಕೊಳ್ಳಬೇಕು. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ (Minimum Balance) ಮೆನ್ಟೇನ್ ಮಾಡದೆ ಇದ್ದಲ್ಲಿ ಬ್ಯಾಂಕ್ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆಗಳು ಇರುತ್ತವೆ. ಇದನ್ನು ಹೊರತುಪಡಿಸಿ ಬೇರೆ ಬೇರೆ ಬ್ಯಾಂಕ್ನಲ್ಲಿ ಬೇರೆ ಬೇರೆ ಖಾತೆಯನ್ನು ಹೊಂದಿರುವುದಕ್ಕೆ ಯಾವ ಸಮಸ್ಯೆಯೂ ಇಲ್ಲ.
ಆರ್ ಬಿ ಐ ತಿಳಿಸಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುಳ್ಳು, ಸುದ್ದಿಗಳು ಹರಿದಾಡುತ್ತವೆ. ಹಾಗಾಗಿ ಬ್ಯಾಂಕಿಗೆ ಸಂಬಂಧಪಟ್ಟಂತೆ ಯಾವ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ನಿಮ್ಮ ಮೊಬೈಲ್ ಸಂಖ್ಯೆ, OTP ಯನ್ನು ಯಾರಿಗೂ ಕೊಡಬೇಡಿ. ಇಲ್ಲವಾದಲ್ಲಿ ದೊಡ್ಡ ವಂಚನೆಗೆ ಗುರಿಯಾಗುತ್ತೀರಿ ಎಂದು ಆರ್‌ಬಿಐ ಸೂಚನೆ ನೀಡಿದೆ.
No Fine for Multiple Bank Accounts, RBI Clarifies on Viral News