ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 5000 ರೂಪಾಯಿ! ಕೂಡಲೇ ಅರ್ಜಿ ಸಲ್ಲಿಸಿ

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 60 ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು 5000 ರೂ.ವರೆಗೂ ಕೂಡ ನೀವು ಪಿಂಚಣಿಯನ್ನು ಪಡೆದುಕೊಳ್ಳುವಂತಹ ಅವಕಾಶವಿದೆ.

  • ವೃದ್ಧಾಪ್ಯದ ನಂತರ ಸಿಗುತ್ತೆ ಪ್ರತಿ ತಿಂಗಳು 5000 ರೂಪಾಯಿ.
  • ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.
  • ಈ ಯೋಜನೆಯನ್ನು ಪ್ರಾರಂಭಿಸುವುದಕ್ಕೆ ಮಾಹಿತಿ ಇಲ್ಲಿದೆ.

Pension Scheme : ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ನೆರವಾಗಲಿ ಎನ್ನುವ ಕಾರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಮೂಲಕ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿ ಎನ್ನುವಂತಹ ಗುರಿಯನ್ನು ಕೂಡ ಸರ್ಕಾರ ಹೊಂದಿದೆ.

ಅಂತಹುದರಲ್ಲಿ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿರುವಂತಹ ವಿಶೇಷವಾದ ಯೋಜನೆಯ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ!

ಮಹಿಳೆಯರೆ ಮನೆಯಲ್ಲೇ ಈ ಬಿಸಿನೆಸ್ ಪ್ರಾರಂಭಿಸಿ! ಲಾಭ ಕೂಡ ಜಬರ್ದಸ್ತ್ ಆಗಿದೆ

ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 5000 ರೂಪಾಯಿ! ಕೂಡಲೇ ಅರ್ಜಿ ಸಲ್ಲಿಸಿ

ಅಟಲ್ ಪಿಂಚಣಿ ಯೋಜನೆ!

ಸರ್ಕಾರ ಅಟಲ್ ಪಿಂಚಣಿ ಯೋಜನೆಯ (Atal Pension Scheme) ವೃದ್ಧಾಪ್ಯದಲ್ಲಿ ಜನರು ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಹೊಂದಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿದ್ದಾರೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 60 ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು 5000 ರೂ.ವರೆಗೂ ಕೂಡ ನೀವು ಪಿಂಚಣಿಯನ್ನು ಪಡೆದುಕೊಳ್ಳುವಂತಹ ಅವಕಾಶವಿದೆ.

ಅಟಲ್ ಪಿಂಚಣಿ ಯೋಜನೆ, ನಿವೃತ್ತಿಯ ನಂತರ ಆರ್ಥಿಕವಾಗಿ ನಿಮ್ಮ ಜೀವನಕ್ಕೆ ಸಹಾಯವನ್ನು ಮಾಡುವಂತಹ ಕೆಲಸವನ್ನು ಮಾಡಲಿದೆ. ನ್ಯಾಷನಲ್ ಪೆನ್ಶನ್ ಸ್ಕೀಮ್ ನಲ್ಲಿ ಇರುವವರು ಹಾಗೂ ಟ್ಯಾಕ್ಸ್ ಕಟ್ಟೋರು ಈ ಯೋಜನೆಗೆ ಅರ್ಹರಲ್ಲ.

18 ರಿಂದ 40 ವರ್ಷದ ವಯಸ್ಸಿನವರು ಮಾತ್ರ ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ನೀವು ಖಾತೆಯನ್ನು ಹೊಂದಿರಬೇಕಾಗಿರುತ್ತದೆ.

ಮಕ್ಕಳ ಆಸ್ತಿ ಮೇಲೆ ತಂದೆ-ತಾಯಿಗೆ ಹಕ್ಕಿದ್ಯಾ? ಕಾನೂನು ನಿಯಮ ಏನು ಗೊತ್ತಾ

Pension Scheme

ಒಂದು ವೇಳೆ ಸದ್ಯಕ್ಕೆ ನಿಮ್ಮ ವಯಸ್ಸು 18 ವರ್ಷ ಆಗಿದ್ದರೆ ತಿಂಗಳಿಗೆ 210 ರೂಪಾಯಿ ಕಟ್ಕೊಂಡ್ ಹೋಗ್ಬೇಕು, 32 ವರ್ಷ ಆಗಿದ್ದರೆ ತಿಂಗಳಿಗೆ ಕೇವಲ 689 ರೂಪಾಯಿ ಕಟ್ಕೊಂಡ್ ಹೋದ್ರೆ ಸಾಕು. 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 5000 ರೂ. ನಿಮ್ಮ ಖಾತೆಗೆ ಬಂದು ಸೇರುತ್ತೆ.

ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ನಿವೃತ್ತಿಯ ನಂತರ ತಮ್ಮ ಜೀವನವನ್ನು ಆರ್ಥಿಕ ಸ್ವಾತಂತ್ರ್ಯತೆಯಿಂದ ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಸರ್ಕಾರ ಪ್ರೇರೇಪಿಸುತ್ತಿದೆ.

Atal Pension Scheme

2015 ಹಾಗೂ 16ನೇ ಬಜೆಟ್ ನಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಹೂಡಿಕೆದಾರರು ಮಾಸಿಕವಾಗಿ 1,000 ಹಾಗೂ 5 ಸಾವಿರ ರೂಪಾಯಿಗಳ ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಈ ಯೋಜನೆ ಅಡಿಯಲ್ಲಿ 7.15 ಕೋಟಿಗೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ನಿಮ್ಮ ಆಸ್ತಿ, ಜಮೀನು ನಿಮ್ಮ ಕೈ ತಪ್ಪಿ ಹೋಗ್ತಿದ್ಯ? ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ

Get 5000 Monthly After Retirement by Atal Pension Scheme

English Summary
Related Stories