ಮಹಿಳೆಯರೆ ಮನೆಯಲ್ಲೇ ಈ ಬಿಸಿನೆಸ್ ಪ್ರಾರಂಭಿಸಿ! ಲಾಭ ಕೂಡ ಜಬರ್ದಸ್ತ್ ಆಗಿದೆ
ಮನೆಯಲ್ಲಿ ನೀವು ಅತ್ಯಂತ ಕಡಿಮೆ ಬಜೆಟ್ ನಲ್ಲಿ ಉಪ್ಪಿನಕಾಯಿ ಮಾರಾಟವನ್ನು ಪ್ರಾರಂಭ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಹೋಂ ಮೇಡ್ ಉಪ್ಪಿನಕಾಯಿ ಅತ್ಯಂತ ರುಚಿ ಆಗಿರಬೇಕು
- ಮಹಿಳೆಯರೆ ಈ ಬಿಸಿನೆಸ್ ಪ್ರಾರಂಭಿಸಿ, ಲಾಭದಾಯಕ ಬಿಸಿನೆಸ್ ಐಡಿಯಾ.
- ಖರ್ಚು ಕಡಿಮೆ ಕೈತುಂಬ ಜಬರ್ದಸ್ತ್ ಲಾಭ.
- ವರ್ಷಪೂರ್ತಿ ಈ ಬಿಸಿನೆಸ್ ಗೆ ಡಿಮ್ಯಾಂಡ್ ಕಡಿಮೆಯಾಗಲ್ಲ.
Business Idea : ಸಾಕಷ್ಟು ಮಹಿಳೆಯರು ತಮ್ಮದೇ ಆಗಿರುವಂತಹ ಸ್ವಂತ ದುಡಿಮೆಯನ್ನು (Own Business) ಪ್ರಾರಂಭ ಮಾಡಬೇಕು ಅನ್ನೋ ಬಯಕೆ ಹೊಂದಿರುತ್ತಾರೆ. ಅಂತಹ ಮಹಿಳೆಯರೂ ಮನೆಯಲ್ಲಿ ಇದ್ದುಕೊಂಡೇ ಕೈ ತುಂಬಾ ಸಂಪಾದನೆ ಮಾಡುವಂತಹ ಲಾಭದಾಯಕ ಬಿಸಿನೆಸ್ ಬಗ್ಗೆ ಈ ಲೇಖನದ ಮೂಲಕ ಮಾಹಿತಿಯನ್ನು ನೀಡಲಿದ್ದೇವೆ.
ವಿಶೇಷವಾಗಿ ಇದಕ್ಕಾಗಿ ಹೆಚ್ಚಿನ ಹಣವನ್ನು ಕೂಡ ಅವರು ಹೂಡಿಕೆ ಮಾಡಬೇಕಾದ ಅಗತ್ಯ ಇರೋದಿಲ್ಲ.
ಮಕ್ಕಳ ಆಸ್ತಿ ಮೇಲೆ ತಂದೆ-ತಾಯಿಗೆ ಹಕ್ಕಿದ್ಯಾ? ಕಾನೂನು ನಿಯಮ ಏನು ಗೊತ್ತಾ
ಕಡಿಮೆ ಬಜೆಟ್ ನಲ್ಲಿ ಪ್ರಾರಂಭ ಮಾಡಬಹುದು ಈ ಬಿಸಿನೆಸ್
ಊಟಕ್ಕೆ ಉಪ್ಪಿನಕಾಯಿ ರುಚಿ ಅನ್ನೋ ಗಾದೆ ಮಾತಿದೆ. ಇದೇ ರೀತಿಯಲ್ಲಿ ಪ್ರತಿಯೊಬ್ಬರು ಕೂಡ ಊಟದಲ್ಲಿ ಏನಿರುತ್ತೋ ಇಲ್ವೋ ಗೊತ್ತಿಲ್ಲ ಆದರೆ ರುಚಿಯನ್ನು ಹೆಚ್ಚಿಸುವ ಉಪ್ಪಿನಕಾಯಿ ಇರಬೇಕು ಅನ್ನೋರು ಕೂಡ ಇದ್ದಾರೆ.
ಹಾಗಾಗಿ ಮನೆಯಲ್ಲಿ ನೀವು ಅತ್ಯಂತ ಕಡಿಮೆ ಬಜೆಟ್ ನಲ್ಲಿ ಉಪ್ಪಿನಕಾಯಿ ಮಾರಾಟವನ್ನು (homemade pickle business) ಪ್ರಾರಂಭ ಮಾಡಬಹುದಾಗಿದೆ. ಇದಕ್ಕಾಗಿ ನೀವು ತಯಾರು ಮಾಡುವಂತಹ ಹೋಂ ಮೇಡ್ ಉಪ್ಪಿನಕಾಯಿ ಅತ್ಯಂತ ರುಚಿ ಆಗಿರಬೇಕು ಹಾಗೂ ಅದನ್ನ ಸರಿಯಾದ ರೀತಿಯಲ್ಲಿ ಆಕರ್ಷಕವಾಗಿ ಪ್ಯಾಕೇಜಿಂಗ್ ಮಾಡಬೇಕಾಗಿರುತ್ತದೆ. ಯಾಕೆಂದ್ರೆ ಮಾರ್ಕೆಟ್ ನಲ್ಲಿ ಯಾವುದು ಚೆನ್ನಾಗಿ ಕಾಣಿಸುತ್ತೋ ಅದನ್ನೇ ಹೆಚ್ಚಾಗಿ ಖರೀದಿಸೋದು.
ಇದಕ್ಕೆ ಹೆಚ್ಚು ಹಣ ಬೇಕಾಗಿಲ್ಲ (Investment). ಮನೆಯಲ್ಲಿ ನೀವು ವರ್ಷಕ್ಕೊಮ್ಮೆ ಉಪ್ಪಿನಕಾಯಿ ಮಾಡ್ತಿರಾ ಅಲ್ವಾ, ಆಗ್ಲೇನೆ ಸ್ವಲ್ಪ ಹೆಚ್ಚಾಗಿ ಉಪ್ಪಿನಕಾಯಿ ತಯಾರಿಸಿ ಅದನ್ನು ಸರಿಯಾದ ರೀತಿಯಲ್ಲಿ ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡಬಹುದು.
ನಿಮ್ಮ ಆಸ್ತಿ, ಜಮೀನು ನಿಮ್ಮ ಕೈ ತಪ್ಪಿ ಹೋಗ್ತಿದ್ಯ? ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ
ಊಟದ ಜೊತೆಗೆ ಕೇವಲ ಉಪ್ಪಿನಕಾಯಿ ಮಾತ್ರ ಅಲ್ಲ ಹಪ್ಪಳ ಹಾಗೂ ಸಂಡಿಗೆಗಳನ್ನು ಕೂಡ ಸೈಡ್ ಡಿಶ್ ಆಗಿ ಸೇವಿಸುತ್ತಾರೆ. ಹೀಗಾಗಿ ಅವುಗಳನ್ನು ಕೂಡ ನೀವು ಮನೆಯಲ್ಲೇ ತಯಾರಿಸಿ ಮಾರಾಟ ಮಾಡುವ ಮೂಲಕ ಕೈತುಂಬ ಸಂಪಾದನೆಯನ್ನು ಮಾಡಬಹುದಾಗಿದೆ ಹಾಗೂ ಇವುಗಳು ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಾಗುವುದರಿಂದಾಗಿ ನಿಮಗೆ ಸಿಗುವಂತಹ ಲಾಭ ಕೂಡ ಹೆಚ್ಚಾಗಿಯೇ ಇರುತ್ತೆ.
ಇವುಗಳನ್ನು ತಯಾರಿಸುವಾಗ ನೀವು ಬೇರೆಯವರ ಮೇಲೆ ಡಿಪೆಂಡ್ ಆಗಬೇಕಾದ ಅಗತ್ಯ ಇಲ್ಲ. ವರ್ಷಪೂರ್ತಿ ಇವುಗಳಿಗೆ ಇರುವಂತಹ ಡಿಮ್ಯಾಂಡ್ ಅನ್ನು ನೀವು ನಿಮ್ಮ ಬಿಸಿನೆಸ್ ಪ್ರಾರಂಭಕ್ಕೆ ಬಳಸಿಕೊಳ್ಳಬಹುದಾಗಿದ್ದು ಇದರಿಂದ ನೀವು ಖರ್ಚಿಗಿಂತ ಹೆಚ್ಚಿನ ಲಾಭವನ್ನ ಸುಲಭವಾಗಿ ಪಡೆಯಲಿದ್ದೀರಿ.
ಮಾರುಕಟ್ಟೆಯಲ್ಲಿ ಸಾಂಬಾರ್ ಹಾಗೂ ಚಟ್ನಿ ಪುಡಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಇವುಗಳನ್ನು ಕೂಡ ತಯಾರಿಸಿ ಮಾರಾಟ ಮಾಡುವಂತಹ ಅವಕಾಶವನ್ನು ಹೊಂದಿದ್ದೀರಿ.
ಇದೇ ರೀತಿಯಲ್ಲಿ ಸಾಕಷ್ಟು ರೆಡಿಮೇಡ್ ಫುಡ್ ಗಳನ್ನ ತಯಾರು ಮಾಡುವಂತಹ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದಲೂ ಕೂಡ ನೀವು ಮನೆಯಲ್ಲಿ ಕುಳಿತುಕೊಂಡೆ ನಿಮ್ಮದೇ ಆಗಿರುವಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ನಿಮಗೆ ನೀವೇ ಬಾಸ್ ಆಗಬಹುದು. ಆದಾಯ ಕೂಡ ಯಾವುದೇ ದೊಡ್ಡ ಮಟ್ಟದ ಕಂಪನಿಗಳಿಗೆ ಸಿಗುವುದಕ್ಕಿಂತ ಹೆಚ್ಚಾಗಿಯೇ ಇರುತ್ತದೆ.
profitable business idea for women with low investment