ಮಕ್ಕಳ ಆಸ್ತಿ ಮೇಲೆ ತಂದೆ-ತಾಯಿಗೆ ಹಕ್ಕಿದ್ಯಾ? ಕಾನೂನು ನಿಯಮ ಏನು ಗೊತ್ತಾ

Property Rights: ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಯಾವ ರೀತಿಯಲ್ಲಿ ಹಕ್ಕಿದೆ ಎನ್ನುವುದರ ಬಗ್ಗೆ ಇದೇ ನಿಯಮದಲ್ಲಿ ಸೆಕ್ಷನ್ 8ರಲ್ಲಿ ವಿವರಿಸಲಾಗಿದೆ.

- - - - - - - - - - - - - Story - - - - - - - - - - - - -
  • ಮಕ್ಕಳ ಆಸ್ತಿ ತಂದೆ-ತಾಯಿಗೆ ಎರಡು ಹಂತದಲ್ಲಿ ದೊರಕುತ್ತದೆ.
  • ಮಗಳ ಆಸ್ತಿಯ ಮೊದಲ ಹಕ್ಕುದಾರರು ಪೋಷಕರಲ್ಲ.
  • ಮದುವೆ ಆಗದೆ ಇದ್ರೆ ಮಗನ ಆಸ್ತಿ ತಂದೆ-ತಾಯಿಗೆ ಸೇರಬಹುದು.

Property Rights: ಭಾರತದ ಸಂವಿಧಾನದಲ್ಲಿ ಹಿಂದೂ ಉತ್ತರಾಧಿಕಾರತ್ವದ ನಿಯಮಗಳಲ್ಲಿ 2005ರಲ್ಲಿ ನಿಯಮದಲ್ಲಿ ಬದಲಾವಣೆ ಬಂದು ಆಸ್ತಿಯಲ್ಲಿ ಹೆಣ್ಣು ಮಕ್ಕಳು ಕೂಡ ಪಾಲನ್ನು ಪಡೆದುಕೊಳ್ಳಬಹುದು ಎನ್ನುವಂತಹ ತೀರ್ಪನ್ನು ನೀಡಲಾಯಿತು. ಅದೇ ರೀತಿಯಲ್ಲಿ ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಯಾವ ರೀತಿಯಲ್ಲಿ ಹಕ್ಕಿದೆ ಎನ್ನುವುದರ ಬಗ್ಗೆ ಇದೇ ನಿಯಮದಲ್ಲಿ ಸೆಕ್ಷನ್ 8ರಲ್ಲಿ ವಿವರಿಸಲಾಗಿದೆ. ಈ ವಿಚಾರದ ಬಗ್ಗೆ ಏನು ಹೇಳುತ್ತೆ ತಿಳಿಯೋಣ.

ನಿಮ್ಮ ಆಸ್ತಿ, ಜಮೀನು ನಿಮ್ಮ ಕೈ ತಪ್ಪಿ ಹೋಗ್ತಿದ್ಯ? ಕಂಡವರ ಪಾಲಾಗಿದ್ಯಾ? ಈ ರೀತಿ ಸರಿ ಮಾಡಿಕೊಳ್ಳಿ

ಮಕ್ಕಳ ಆಸ್ತಿಯಲ್ಲಿ ಪೋಷಕರಿಗೆ ಹಕ್ಕಿದೆಯಾ?

ಅಕಾಲಿಕವಾಗಿ ಒಂದು ವೇಳೆ ಮಗ ಮರಣ ಹೊಂದಿದರೆ ಹಾಗೂ ತನ್ನ ಆಸ್ತಿಯನ್ನು ಯಾರಿಗೆ ನೀಡಬೇಕು ಎನ್ನುವಂತಹ ವಿಲ್ ಅನ್ನು ಆತ ಬರೆಸದೆ ಹೋದರೆ ಆ ಸಂದರ್ಭದಲ್ಲಿ ನಿಯಮಗಳ ಪ್ರಕಾರ ಆಸ್ತಿ ಯಾರ ಪಾಲಿಗೆ ಸೇರುತ್ತೇ ಎನ್ನುವುದರ ಬಗ್ಗೆ ತಾಯಿ ಹಾಗೂ ತಂದೆ ಇಬ್ಬರಿಗೂ ಕೂಡ ಪ್ರತ್ಯೇಕವಾಗಿರುವಂತಹ ನಿಯಮಗಳಿವೆ.

ಮಕ್ಕಳ ಆಸ್ತಿ ಮೇಲೆ ತಂದೆ-ತಾಯಿಗೆ ಹಕ್ಕಿದ್ಯಾ? ಕಾನೂನು ನಿಯಮ ಏನು ಗೊತ್ತಾ

Property Rights

ಕಾನೂನು ಹೇಳುವ ಪ್ರಕಾರ ಆ ಸಂದರ್ಭದಲ್ಲಿ ಆ ಮಗುವಿನ ಆಸ್ತಿಯ ಮೊದಲ ಹಕ್ಕನ್ನು ತಾಯಿ ಪಡೆದುಕೊಂಡಿರುತ್ತಾಳೆ ಎಂಬುದಾಗಿ ತಿಳಿಸಲಾಗುತ್ತೆ. ನಿಯಮಗಳ ಪ್ರಕಾರ ತಾಯಿ ಮಗುವಿನ ಮೊದಲ ಉತ್ತರಾಧಿಕಾರಿ ಆಗಿರುವುದರಿಂದಾಗಿ ಆಸ್ತಿಯ ಉತ್ತರಾಧಿಕಾರತ್ವದಲ್ಲಿ ಕೂಡ ತಾಯಿಗೆ ಮೊದಲ ಅವಕಾಶವನ್ನು ನೀಡಲಾಗುತ್ತದೆ. ಅದಾದ ನಂತರ ಎರಡನೇ ಅಧಿಕಾರವನ್ನು ತಂದೆಗೆ ನೀಡಲಾಗುತ್ತದೆ ಅಥವಾ ಒಂದು ವೇಳೆ ತಾಯಿ ಇಲ್ಲದೆ ಹೋದಲ್ಲಿ ಆ ಆಸ್ತಿ ಅಧಿಕಾರವನ್ನು ಸಂಪೂರ್ಣವಾಗಿ ತಂದೆ ಪಡೆದುಕೊಳ್ಳುತ್ತಾರೆ.

ಈ ನಿಯಮಗಳು ಹುಡುಗಿಯ ವಿಚಾರದಲ್ಲಿ ಬೇರೆ ಆಗಿರುತ್ತವೆ. ಗಂಡು ಮಗುವಿನ ಆಸ್ತಿಯನ್ನು ಮೊದಲನೇ ಉತ್ತರಾಧಿಕಾರಿಯನ್ನುವುದಾಗಿ ತಾಯಿಗೆ ನೀಡಲಾಗುತ್ತದೆ ಹಾಗೂ ಆಕೆ ಅದರ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾಳೆ. ಒಂದು ವೇಳೆ ತಾಯಿ ಇಲ್ಲದೆ ಹೋದಲ್ಲಿ ತಂದೆ ಅಥವಾ ಎರಡನೇ ಉತ್ತರ ಅಧಿಕಾರಿಗಳಿಗೆ ಅದನ್ನು ಹಂಚಲಾಗುತ್ತದೆ.

Property Rules

ಸ್ಟೇಟ್ ಬ್ಯಾಂಕ್ ನಲ್ಲಿ 30 ಲಕ್ಷ ಸಾಲಕ್ಕೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

ಒಂದು ವೇಳೆ ಮದುವೆ ಆಗಿರುವಂತಹ ಮಗ ಮರಣ ಹೊಂದಿದರೆ, ಯಾವುದೇ ರೀತಿಯಲ್ಲಿ ವಿಲ್ ಅನ್ನು ಬರೆಯದೆ ಹೋದಲ್ಲಿ ಅದರ ಅಧಿಕಾರ ಆತನ ಹೆಂಡತಿಗೆ ಸೇರುತ್ತದೆ. ಇನ್ನು ಮಗಳ ವಿಚಾರದಲ್ಲಿ ಆಕೆ ಮದುವೆ ಆಗಿದ್ದರೆ ಅದನ್ನು ಆಕೆಯ ಮಕ್ಕಳಿಗೆ ಮೊದಲ ಅಧಿಕಾರದ ರೀತಿಯಲ್ಲಿ ನೀಡಲಾಗುತ್ತದೆ.

ಮಕ್ಕಳಿಲ್ಲದೆ ಹೋದಲ್ಲಿ ಗಂಡನಿಗೆ ಹಾಗೂ ಗಂಡನ ನಂತರವಷ್ಟೇ ಆಕೆಯ ಪೋಷಕರಿಗೆ ಆ ಆಸ್ತಿಯ ಮೇಲೆ ಅಧಿಕಾರ ಇರುತ್ತದೆ. ಹೀಗಾಗಿ ಮಗಳ ವಿಚಾರಕ್ಕೆ ಬಂದರೆ ಆಕೆಯ ಆಸ್ತಿಯ ಕೊನೆಯ ಅಧಿಕಾರ ಪೋಷಕರಿಗೆ ದೊರಕುತ್ತದೆ.

Parents Rights Over Children’s Property, Key Rules You Must Know

English Summary
Related Stories