ಮಹಿಳೆಯರೆ, ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ಸಂಪಾದನೆ ಮಾಡಿ! ಇಲ್ಲಿದೆ ಐಡಿಯಾ
ಮನೆಯಲ್ಲಿಯೇ ಕುಳಿತು (Work From Home) ಕೈತುಂಬ ಹಣ ಸಂಪಾದನೆ (Money Earning) ಮಾಡಲು ಬಯಸುತ್ತಾರೋ ಅಂತವರಿಗಾಗಿ ಕೆಲವು ಅತ್ಯಂತ ಉಪಯೋಗಕಾರಿ ಕೆಲಸದ ಬಗ್ಗೆ ಇಲ್ಲಿದೆ ಡೀಟೇಲ್ಸ್.
- ಮನೆಯಲ್ಲಿಯೇ ಕುಳಿತು ಮಹಿಳೆಯರು ಮಾಡಬಹುದು ಈ ಕೆಲಸಗಳು
- ಬರವಣಿಗೆ ಮೂಲಕವೂ ಲಕ್ಷ ಲಕ್ಷ ಸಂಪಾದನೆ ಮಾಡುವ ಅವಕಾಶ
- ಕೈ ತುಂಬಾ ಹಣ ಸಂಪಾದನೆ ಮಾಡಲು ಇಲ್ಲಿದೆ ಐಡಿಯಾ
Money Earning Tips : ಎಲ್ಲ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಒಂದಷ್ಟು ಸಹಾಯ ಮಾಡಬೇಕು ಎಂದು ಭಾವಿಸುವ ಸಾಕಷ್ಟು ಮಹಿಳೆಯರಿದ್ದಾರೆ. ಅಂತವರಿಗೆ ಇವತ್ತಿನ ಈ ಲೇಖನ ಮೀಸಲು.
ಯಾಕಂದ್ರೆ ಯಾವ ಮಹಿಳೆಯರು ಮನೆಯಲ್ಲಿಯೇ ಕುಳಿತು (Work From Home) ಕೈತುಂಬ ಹಣ ಸಂಪಾದನೆ (Money Earning) ಮಾಡಲು ಬಯಸುತ್ತಾರೋ ಅಂತವರಿಗಾಗಿ ಕೆಲವು ಅತ್ಯಂತ ಉಪಯೋಗಕಾರಿ ಕೆಲಸದ ಬಗ್ಗೆ ಇಲ್ಲಿದೆ ಡೀಟೇಲ್ಸ್.
ಇಂಟರ್ನೆಟ್ ಇಲ್ಲದೆ ಇದ್ರು ಯುಪಿಐ ಪೇಮೆಂಟ್ ಮಾಡೋದು ಹೇಗೆ? ಸುಲಭ ವಿಧಾನ
ಕಂಟೆಂಟ್ ರೈಟಿಂಗ್
ನಿಮಗೆ ಚೆನ್ನಾಗಿ ಬರೆಯಲು ಬಂದರೆ ಫ್ರೀಲಾನ್ಸಿಂಗ್ ಕಂಟೆಂಟ್ ರೈಟಿಂಗ್ (Content Writing) ಅನ್ನು ಮಾಡಬಹುದು ಅಂದರೆ ಯಾವುದೇ ವೆಬ್ಸೈಟ್ಗೆ ಅಥವಾ ಯೂಟ್ಯೂಬ್ ಗಳಿಗೆ ನೀವು ಕಂಟೆಂಟ್ ಬರೆದು ಕೊಡಬಹುದು ಈ ರೀತಿ ಮಾಡುವುದರಿಂದ ಪ್ರತಿದಿನ ಹಣ ಗಳಿಸಬಹುದು.
ಯೂಟ್ಯೂಬರ್ ಆಗಿ
ಸೋಶಿಯಲ್ ಮೀಡಿಯಾ ಎಂದು ತುಂಬಾನೇ ಮುಂದುವರೆದಿದೆ. ನೀವು ಯೂಟ್ಯೂಬ್ (Youtube) ಮೂಲಕ ಇವತ್ತು ನಾವು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಎಲ್ಲರನ್ನು ತಲುಪಬಹುದು ಹೀಗಾಗಿ ನಿಮಗೆ ಯಾವುದಾದರು ವಿಷಯದಲ್ಲಿ ಆಸಕ್ತಿ ಇದ್ದರೆ ನಿಮ್ಮದೇ ಆಗಿರುವ ವಿಡಿಯೋ ತಯಾರಿಸಿ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಬಹುದು. ಯೂಟ್ಯೂಬ್ ನಲ್ಲಿ ಕಂಟೆಂಟ್ ಹಾಕಿದ್ರೆ ಅದಕ್ಕೆ ಹಣ ಬರುತ್ತದೆ. ನಿಮ್ಮ ವಿಡಿಯೋವನ್ನು ಎಷ್ಟು ಜನ ನೋಡಿದ್ದಾರೆ ಸಬ್ಸ್ಕ್ರೈಬ್ ಎಷ್ಟು ಕಂಟೆಂಟ್ ಹೇಗಿದೆ ಎನ್ನುವುದರ ಆಧಾರದ ಮೇಲೆ ಹಣ ಸಂಪಾದನೆ ಮಾಡಬಹುದು.
ಆನ್ಲೈನ್ ಟ್ಯೂಷನ್
ನೀವು ಚೆನ್ನಾಗಿ ಓದುಕೊಂಡಿದ್ದರೆ ಅಥವಾ ಮಕ್ಕಳಿಗೆ ಪಾಠ ಮಾಡಲು ಆಸಕ್ತಿ ಇದ್ದರೆ ಆನ್ಲೈನ್ ಮೂಲಕ ಟ್ಯೂಷನ್ (Online Tuition) ನಡೆಸಬಹುದು ಯಾವ ಮಕ್ಕಳಿಗೆ ಯಾವ ಸಬ್ಜೆಕ್ಟ್ ನಲ್ಲಿ ತರಬೇತಿ ಅಗತ್ಯವಿರುತ್ತದೆಯೋ ಅಂತವರಿಗೆ ಆನ್ಲೈನ್ ಮೂಲಕವೇ ಪಾಠ ಮಾಡಬಹುದು. ಇದರಿಂದ ಕೈ ತುಂಬಾ ಹಣ ಸಂಪಾದನೆ ಆಗುತ್ತಿದೆ.
ದುಬೈನಲ್ಲಿ 1Bhk ಮನೆ ಬಾಡಿಗೆ ಎಷ್ಟಿದೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ!
ಮನೆಯಲ್ಲಿಯೇ ಮಾಡಿ ಬೇಕಿಂಗ್
ಜನರು ಹೈಜೆನಿಕ್ ಆಗಿರುವ ಮನೆಯಲ್ಲಿಯೇ ಮಾಡಿರುವ ಆಹಾರ ಪದಾರ್ಥಗಳನ್ನು ಸೇವಿಸಲು ಇಷ್ಟಪಡುತ್ತಾರೆ ಹಾಗಾಗಿ ನೀವು ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಬೇಕಿಂಗ್ (Baking) ಆರಂಭಿಸಿ, ಸಣ್ಣ ಉದ್ಯಮ ಶುರು ಮಾಡಬಹುದು. ಇದರಿಂದ ಖರ್ಚಿನ ಹೊರತಾಗಿಯೂ ಸಾಕಷ್ಟು ಲಾಭಗಳಿಸಲು ಸಾಧ್ಯವಿದೆ.
ಆನ್ಲೈನ್ ಮಾರ್ಕೆಟಿಂಗ್
ಮನೆಯಲ್ಲಿ ಕುಳಿತು ಆನ್ಲೈನ್ ಮಾರ್ಕೆಟಿಂಗ್ (Online Marketing) ಮಾಡಬಹುದು ಅಂದರೆ ಬೇರೆ ಬೇರೆ ಕಂಪನಿಗಳಿಗೆ ಪ್ರಮೋಷನ್ ಗಾಗಿ ನೀವು ಸಹಾಯ ಮಾಡಬಹುದು. ಈ ರೀತಿ ಮಾರ್ಕೆಟಿಂಗ್ ಮಾಡುವುದರಿಂದ ಕಂಪನಿಗಳು ನಿಮಗೆ ಹಣವನ್ನು ಪೇ ಮಾಡುತ್ತದೆ.
ವೆಬ್ ಡಿಸೈನ್
ಇತ್ತೀಚಿನ ದಿನಗಳಲ್ಲಿ ವೆಬ್ಸೈಟ್ ಡಿಸೈನ್ (Web Design) ಮಾಡುವುದಕ್ಕೆ ಹೆಚ್ಚು ಬೇಡಿಕೆ ಇದೆ ಹೀಗಾಗಿ ನೀವು ವೆಬ್ ಡಿಸೈನ್ ಕಲಿತುಕೊಂಡರೆ ವೆಬ್ಸೈಟ್ ಗಳನ್ನು ವಿನ್ಯಾಸ ಮಾಡಬಹುದು. ವೆಬ್ ಡಿಸೈನ್ ಗೆ ಹೆಚ್ಚಿನ ಬೇಡಿಕೆಯಿದ್ದು, ಸಾಕಷ್ಟು ಹಣ ಗಳಿಸಲು ಸಾಧ್ಯವಿದೆ.
ಟಿಫನ್ ಬಿಸ್ನೆಸ್
ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹೋಟೆಲ್ ಆಹಾರ ಸೇವನೆ ಅಷ್ಟು ಇಷ್ಟವಾಗುವುದಿಲ್ಲ. ಇದನ್ನು ನೀವು ಬಳಸಿಕೊಂಡು ಟಿಫನ್ ಸರ್ವಿಸ್ (Tiffin Service) ಆರಂಭಿಸಬಹುದು ಬೆಳಿಗ್ಗೆ ಮತ್ತು ಸಂಜೆ ಟಿಫನ್ ಕೊಡುವ ಉದ್ಯಮ ಆರಂಭಿಸಿದರೆ, ನೀವು ಕೈ ತುಂಬಾ ಹಣ ಗಳಿಸಲು ಸಾಧ್ಯವಿದೆ ಆಹಾರ ರುಚಿಕರವಾಗಿದ್ದು, ಹೈಜೆನಿಕ್ ಆಗಿದ್ದರೆ ಹೆಚ್ಚು ಕಸ್ಟಮರ್ಗಳು ನಿಮ್ಮ ಆಹಾರವನ್ನು ಖರೀದಿಸುತ್ತಾರೆ.
Work From Home Jobs for Women, Earn Lakhs with These Ideas