ಸಂಬಳ ಕಡಿಮೆ ಅಂತ ಚಿಂತೆ ಬೇಡ, ಈ ಬ್ಯಾಂಕಿನಲ್ಲಿ ನಿಮಗೂ ಸಿಗುತ್ತೆ ಪರ್ಸನಲ್ ಲೋನ್
- ತಿಂಗಳ ಸಂಬಳ ಕಡಿಮೆ ಇದ್ದರು ಸಿಗುತ್ತೆ 50 ಲಕ್ಷ ಪರ್ಸನಲ್ ಲೋನ್
- ಎಸ್ ಬಿ ಐ, ಆಕ್ಸಸ್ ಬ್ಯಾಂಕ್ ನಲ್ಲಿ 15,000 ರೂ. ಸಂಬಳಕ್ಕೆ ಲೋನ್ ಪಡೆಯಿರಿ
- ಈ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಪರ್ಸನಲ್ ಲೋನ್
Personal Loan : ಹಣದ ಅನಿವಾರ್ಯತೆ ಇದ್ದಾಗ ಸಾಲ ತೆಗೆದುಕೊಳ್ಳುವುದು ಸಹಜ. ಆದ್ರೆ ಎಲ್ಲರೂ ಸುಲಭವಾಗಿ ಸಾಲ ನೀಡುವುದಿಲ್ಲ ಇದಕ್ಕಾಗಿ ಜನ ಹೆಚ್ಚಾಗಿ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಬ್ಯಾಂಕ್ ನಲ್ಲಿ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ಆದರೆ ನಮಗೆಲ್ಲ ತಿಳಿದಿರುವ ಹಾಗೆ ವ್ಯಕ್ತಿಯ ಆದಾಯದ ಆಧಾರದ ಮೇಲೆ ಅಂದರೆ ತಿಂಗಳ ಸಂಬಳದ ಆಧಾರದ ಮೇಲೆ ವೈಯಕ್ತಿಕ ಸಾಲದ ಮೊತ್ತ ನಿರ್ಧಾರವಾಗುತ್ತದೆ. ನೀವು ಹೆಚ್ಚು ಆದಾಯ ಹೊಂದಿರುವವರಾಗಿದ್ದರೆ ಬ್ಯಾಂಕ್ಗಳಲ್ಲಿ ಪರ್ಸನಲ್ ಲೋನ್ (Bank Personal Loan) ತೆಗೆದುಕೊಳ್ಳುವುದು ಸುಲಭ.
ಬಂಪರ್ ಅವಕಾಶ! ಈ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡಲಿದೆ ದುಡ್ಡು
ಕಡಿಮೆ ಸ್ಯಾಲರಿ ಇದ್ರೆ ವೈಯಕ್ತಿಕ ಸಾಲ ಸಿಗುತ್ತಾ?
ಸಾಕಷ್ಟು ಜನ ಕಡಿಮೆ ಸಂಬಳ (Low Salary) ಇದ್ದರೆ ಬ್ಯಾಂಕ್ ವೈಯಕ್ತಿಕ ಸಾಲ ಕೊಡುವುದಿಲ್ಲ ಎಂದೇ ಭಾವಿಸುತ್ತಾರೆ ಆದರೆ ಇದು ತಪ್ಪು. ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳು ಕಡಿಮೆ ಸಂಬಳ ಇರುವವರೆಗೂ ಕೂಡ ಸಾಲವನ್ನು ಮಂಜೂರು ಮಾಡುತ್ತವೆ.
ಇದಕ್ಕೆ ಮುಖ್ಯವಾಗಿ ಆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದರೆ ಸಾಕು, ಸಂಬಳ ಕಡಿಮೆ ಇದ್ದರೂ ಸಾಲವನ್ನ ಪಡೆಯಬಹುದು. ಹಾಗಾದ್ರೆ ಯಾವ ಬ್ಯಾಂಕ್ ಕಡಿಮೆ ಸಂಬಳ ಇದ್ದರು ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತದೆ ಎಂಬುದನ್ನು ನೋಡೋಣ.
ಐಸಿಐಸಿಐ ಬ್ಯಾಂಕ್: ತಿಂಗಳಿಗೆ ಕನಿಷ್ಠ 30,000 ಸಂಬಳ ಇರುವವರು ವೈಯಕ್ತಿಕ ಸಾಲಕ್ಕೆ ಅಪ್ಲೈ ಮಾಡಬಹುದು. 10.85% ನಿಂದ ಬಡ್ಡಿ ಆರಂಭವಾಗುತ್ತದೆ. ಈ ಬ್ಯಾಂಕ್ ನಲ್ಲಿ ಸಿಗುವ ಗರಿಷ್ಠ ಸಾಲದ ಮೊತ್ತ 50 ಲಕ್ಷ ರೂಪಾಯಿಗಳಾಗಿದ್ದು ಸಾಲ ಹಿಂತಿರುಗಿಸಲು ಆರು ವರ್ಷಗಳ ಕಾಲಾವಕಾಶ ಇರುತ್ತದೆ.
ಹೆಚ್ ಡಿ ಎಫ್ ಸಿ ಬ್ಯಾಂಕ್: ಕನಿಷ್ಠ 25 ಸಾವಿರ ರೂಪಾಯಿ ಸಂಬಳ ಇರುವವರು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಈ ಬ್ಯಾಂಕಿನಲ್ಲಿ ವಿಧಿಸಲಾಗುವ ಬಡ್ಡಿ 10.85%. ಇಲ್ಲಿ ಗರಿಷ್ಠ 40 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳಬಹುದು ಹಾಗೂ ಸಾಲವನ್ನು ಮರುಪಾವತಿ ಮಾಡಲು ಇರುವ ಅವಧಿ ಆರು ವರ್ಷಗಳು.
ಸಿಬಿಲ್ ಸ್ಕೋರ್ ಜಾಸ್ತಿ ಇದಿಯಾ? ಹಾಗಾದ್ರೆ ನಿಮಗೆ ಈ ಎಲ್ಲಾ ಪ್ರಯೋಜನ ಸಿಗುತ್ತೆ
ಕೋಟಕ್ ಮಹೀಂದ್ರಾ ಬ್ಯಾಂಕ್: ಈ ಬ್ಯಾಂಕ್ 25,000 ಸಂಬಳ ಇರುವವರಿಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ, 10.99% ಬಡ್ಡಿ ದರದಲ್ಲಿ ಆರು ವರ್ಷಗಳ ಅವಧಿಗೆ 40 ಲಕ್ಷ ರೂಪಾಯಿಗಳ ಸಾಲ ಪಡೆಯಬಹುದು.
ಇಂಡಸ್‌ಇಂಡ್ ಬ್ಯಾಂಕ್: ನಿಮಗೆ ತಿಂಗಳು 25,000 ಸಂಬಳ ಬರುತ್ತಿದ್ದರೆ ಈ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಳ್ಳಬಹುದು. 10.49% ನಿಂದ ಬಡ್ಡಿದರ ಆರಂಭವಾಗುತ್ತದೆ ಆರು ವರ್ಷಗಳ ಅವಧಿಯಲ್ಲಿ ಗರಿಷ್ಠ 40 ಲಕ್ಷ ಸಾಲ ಪಡೆದುಕೊಂಡು ಮರುಪಾವತಿ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ತಿಂಗಳಿಗೆ 15000 ಸಂಬಳ ಪಡೆದುಕೊಳ್ಳುವವರು ವೈಯಕ್ತಿಕ ಸಾಲಕ್ಕೆ ಇಲ್ಲಿ ಅರ್ಜಿ ಸಲ್ಲಿಸಬಹುದು 11.45% ಬಡ್ಡಿದರ ಇರುತ್ತದೆ. ಎಸ್ ಬಿ ಐ ನಲ್ಲಿ ಗರಿಷ್ಠ 40 ಲಕ್ಷ ರೂಪಾಯಿಗಳ ವರೆಗೆ ಸಾಲ ತೆಗೆದುಕೊಳ್ಳಬಹುದು ಹಾಗೂ ಇದನ್ನು ಹಿಂತಿರುಗಿಸಲು ಇರುವ ಅವಧಿ ಆರು ವರ್ಷಗಳು.
ನಿಮ್ಮ ಚಿನ್ನ ಕಳ್ಳತನ ಆದ್ರೆ ತಲೆಕೆಡಿಸಿಕೊಳ್ಳಬೇಡಿ! ಚಿನ್ನದ ಶಾಪ್ ನಿಂದಲೇ ನಿಮ್ಮ ದುಡ್ಡು ಸಿಗುತ್ತೆ
ಆಕ್ಸಿಸ್ ಬ್ಯಾಂಕ್: ಕನಿಷ್ಠ 15,000 ಸಂಬಳ ಪಡೆದುಕೊಳ್ಳುವವರಿಗೆ ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತದೆ. 11.25% ನಿಂದ ಬಡ್ಡಿದರ ಆರಂಭವಾಗುತ್ತದೆ. ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಹಾಗೂ ಐದು ವರ್ಷಗಳಲ್ಲಿ ಹಿಂತಿರುಗಿಸಬೇಕು.
Personal Loan Available Even for Low Salary Earners